ದರ್ಶನ್​ ಐಷಾರಾಮಿ ಕಾರು, ಬೈಕುಗಳಿಗೆ ಮಗ ವಿನೀಶ್​ ಆಯುಧ ಪೂಜೆ: ಕ್ಯೂಟ್​ ಫೋಟೋಗಳು ವೈರಲ್​

Published : Oct 21, 2026, 06:45 PM IST

ನಟ ದರ್ಶನ್ ಜೈಲಿನಲ್ಲಿರುವ ಕಾರಣ ಈ ಬಾರಿಯ ಆಯುಧ ಪೂಜೆಯನ್ನು ಅವರ ಪುತ್ರ ವಿನೀಶ್ ನೆರವೇರಿಸಿದ್ದಾರೆ. ದುಬಾರಿ ಕಾರುಗಳಿಗೆ ಪೂಜೆ ಸಲ್ಲಿಸಿದ ಫೋಟೋಗಳು ವೈರಲ್ ಆಗಿವೆ. ಅಪ್ಪನಂತೆಯೇ ಕುದುರೆ ಸವಾರಿ ಕಲಿಯುತ್ತಿರುವ ವಿನೀಶ್, ಫಾರ್ಮ್‌ಹೌಸ್ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ.

PREV
16
ದರ್ಶನ್​ ಮನೆಯಲ್ಲಿ ಆಯುಧ ಪೂಜೆ

ನಟ ದರ್ಶನ್​ ಅವರು ಪ್ರತಿಬಾರಿಯೂ ತಮ್ಮ ಮನೆಯಲ್ಲಿ ಆಯುಧ ಪೂಜೆಯನ್ನು ಅದ್ದೂರಿಯಾಗಿಯೇ ಮಾಡುತ್ತಿದ್ದರು. ಅವರ ಬಳಿ ಹಲವಾರು ಐಷಾರಾಮಿ ಕಾರುಗಳಿವೆ, ಜೊತೆಗೆ ಒಂದಿಷ್ಟು ಬೈಕ್​ಗಳೂ ಇವೆ. ಇವೆಲ್ಲಕ್ಕೂ ಭರ್ಜರಿಯಾಗಿ ಪೂಜೆ ನಡೆಯುತ್ತಿತ್ತು. ಆಯುಧ ಪೂಜೆಯ ಸಂದರ್ಭದಲ್ಲಿ ಅವರ ಮನೆ ಮತ್ತು ಫಾರ್ಮ್‌ಹೌಸ್‌ನಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತವೆ.

26
ಫೋಟೋಗಳು ವೈರಲ್​

ಆದರೆ ಕಳೆದ ಎರಡು ವರ್ಷಗಳಿಂದ, ದರ್ಶನ್​ ಅವರು ಜೈಲಿನಲ್ಲಿ ಇರುವ ಕಾರಣ, ಅವರಿಲ್ಲದ ದಸರಾ ನಡೆಯುತ್ತಿದೆ. ಈ ಬಾರಿ ಅವರ ಪುತ್ರ ವಿನೀಶ್ ಪೂಜೆ ನೆರವೇರಿಸಿದ್ದಾರೆ. ಅದರ ಫೋಟೋಗಳು ವೈರಲ್​ ಆಗುತ್ತಿವೆ.

36
ಸಾಲು ಸಾಲು ಕಾರಿಗೆ ಪೂಜೆ

ವಿನೀಶ್​ ದರ್ಶನ್​ ಅವರು, ದುಬಾರಿ ಕಾರುಗಳಿಗೆ ಪೂಜೆ ನೆರವೇರಿಸಿದ ವಿಶೇಷ ವಿಡಿಯೋ ಮತ್ತು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅವರ ಕೈಯಲ್ಲಿ ಎಲ್ಲ ಕಾರುಗಳ ಕೀಗಳನ್ನೂ ನೋಡಬಹುದಾಗಿದೆ. ಬೆಂಗಳೂರಿನ ಆರ್‌.ಆರ್‌.ನಗರದ ಮನೆಯಲ್ಲಿಯೇ ದಸರಾ ಹಬ್ಬ ಮಾಡಲಾಗಿದೆ. ಮನೆಯ ಮುಂದೆ ಸಾಲಾಗಿಯೇ ಕಾರು ನಿಲ್ಲಿಸಿ ಮಗ ವಿನೀಶ್​ ಪೂಜೆ ಸಲ್ಲಿಸಿದ್ದಾರೆ.

46
ಅಪ್ಪನಂತೆ ಮಗ

ಅಂದಹಾಗೆ ಇದಾಗಲೇ ವಿನೀತ್​ ಅಪ್ಪನಂತೆಯೇ ಕುದುರೆಗಳನ್ನು ಓಡಿಸೋದ್ರಲ್ಲಿ ನಿಸ್ಸೀಮ. ಸಮಯ ಸಿಕ್ಕಾಗ ಕುದುರೆಗಳ ದೇಖರೇಕೆಯಲ್ಲೇ ಸಮಯ ವ್ಯಯಿಸೋದು ಆತನಿಗೆ ಪ್ರಿಯ. ದರ್ಶನ್ ಜೈಲಿನಲ್ಲಿರೋವಾಗ ಅವರ ಫಾರ್ಮ್ ಹೌಸ್ ಮೆಂಟೈನ್ ಹೇಗೆ ಆಗುತ್ತೆ? ಅವರ ಬಳಿ ಇರೋ ಕುದುರೆಗಳ ಗತಿಯೇನು ಎಂದೇ ಅಂದುಕೊಳ್ಳಲಾಗಿತ್ತು. ಈಗ ಅಪ್ಪನ ಸ್ಥಾನದಲ್ಲಿ ಮಗನೇ ಎಲ್ಲವನ್ನೂ ನಿಭಾಯಿಸುತ್ತಿದ್ದಾನೆ.

56
ಕುದುರೆ ತರಬೇತಿ

ದರ್ಶನ್ ಪುತ್ರ ವಿನೀಶ್‌ಗೆ ಚಿಕ್ಕಬಳ್ಳಾಪುರದ ಅನಿಮಲ್ ಲವರ್ ಗೌತಮ್ ಸದ್ಯ ಕುದುರೆ ತರಬೇತಿಯನ್ನು ಕೊಡ್ತಿದ್ದಾರೆ. 16 ಕುದುರೆ, 16 ನಾಟಿ ಹಸುಗಳನ್ನು ಸಾಕಿರುವ ಗೌತಮ್, ವಿನೀಶ್‌ಗೂ ಪ್ರಾಣಿಗಳನ್ನು ಹೇಗೆ ನೋಡಿಕೋಳ್ಳಬೇಕು ಅನ್ನೋದನ್ನ ತಿಳಿಸಿ ಕೊಡ್ತಿದ್ದಾರೆ. ವಿನೀಶ್ ಲಭ್ಯರಿದ್ದಾಗ ತಮ್ಮ ಸಮಯ ನೋಡಿಕೊಂಡು ಕುದರೆ ಓಡಿಸೋದನ್ನ ಗೌತಮ್ ಕಲಿಸಿಕೊಡ್ತಾರೆ. ಚಿಂತಾಮಣಿ ತಾಲೂಕಿನ ನಾರಾಯಣ ಹಳ್ಳಿಯ ಗೌತಮ್ ತೋಟಕ್ಕೆ ಬಂದು ವಿನೀಶ್, ಕುದುರೆ ಓಡಿಸೋದನ್ನ ಕಲಿತಿದ್ದಾನೆ.

66
ಮಗನ ಬಗ್ಗೆ ದರ್ಶನ್‌ ಅಂದು ಹೇಳಿದ್ದೇನು?

ನನ್ನ ಮಗನಿಗೆ ಪ್ರಾಣಿ ಪಕ್ಷಿ ಎಂದರೆ ತುಂಬ ಇಷ್ಟ. ಅವನು ಬೇಸಿಕ್‌ ಕಲಿಯಬೇಕು, ಎಲ್ಲವೂ ಗೊತ್ತಿರಬೇಕು, ಮೊದಲು ಕಷ್ಟಪಡಲಿ ಎಂದು ದರ್ಶನ್‌ ಅವರೇ ಕೆಲ ವರ್ಷಗಳ ಹಿಂದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಒಮ್ಮೆ ಹೇಳಿಕೊಂಡಿದ್ದರು.

Read more Photos on
click me!

Recommended Stories