ಪ್ರಾಚೀನ ಕಾಲದಿಂದಲೂ ದಾಲ್ಚೀನಿಯು ತನ್ನ ವಿಶಿಷ್ಠ ಪರಿಮಳ, ರುಚಿಯಿಂದಾಗಿ ಜಗತ್ತಿನಾದ್ಯಂತ ಜನರನ್ನು ಸೆಳೆದಿದೆ. ಇತಿಹಾಸ ತೆಗೆದರೆ ಅದರಲ್ಲಿ ದಾಲ್ಚೀನಿಯ ಪಾತ್ರ ದೊಡ್ಡದೇ ಇದೆ. ಅಡುಗೆಯ ರುಚಿ ಹೆಚ್ಚಿಸುವುದರಿಂದ ಹಿಡಿದು, ಆರೋಗ್ಯ ಹೆಚ್ಚಿಸುವವರೆಗೆ, ಔಷಧಿಯಾಗಿ, ಪರ್ಫೂಮ್ ಆಗಿ ದಾಲ್ಚೀನಿ ಬಳಕೆಯಾಗಿದೆ. ಅಷ್ಟೇ ಅಲ್ಲ, ಲೈಂಗಿಕಾಸಕ್ತಿ ಕೆರಳಿಸಲು ಕೂಡಾ ಹಿಂದೆ ದಾಲ್ಚೀನಿಯ ಎಣ್ಣೆ ಬಳಸುತ್ತಿದ್ದರು. ದಾಲ್ಚೀನಿಯ ಪಾತ್ರ ಕೇವಲ ಅಡುಗೆ, ಆರೋಗ್ಯ, ಲೈಂಗಿಕ ಜೀವನಕ್ಕೆ ಸೀಮಿತವಾಗಿಲ್ಲ. ಜ್ಯೋತಿಷ್ಯದಲ್ಲಿ ಕೂಡಾ ದಾಲ್ಚೀನಿಗೆ ಉತ್ತಮ ಸ್ಥಾನವಿದೆ. ನಿಮ್ಮ ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ಜ್ಯೋತಿಷ್ಯದಲ್ಲಿ ದಾಲ್ಚಿನ್ನಿಯನ್ನು ಸಹ ಬಳಸಲಾಗುತ್ತದೆ.