ಇಂಥವರಿಗೆ ಮನೆಗೆ ಲಕ್ಷ್ಮಿ ಕಾಲಿಡುವುದೇ ಇಲ್ಲ, ದುಡ್ಡಿಲ್ಲ ಅನ್ನೋರು ಇವರೇ!

First Published | Sep 28, 2024, 2:46 PM IST

ಆಚಾರ್ಯ ಚಾಣಕ್ಯರು ನಮ್ಮ ಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ತಿಳಿಸಿದ್ದಾರೆ. ಆದರೆ ಚಾಣಕ್ಯರ ಪ್ರಕಾರ. ಇಂಥ ನಾಲ್ಕು ಮನೆಗಳು ಯಾವಾಗಲೂ ಬಡತನದಲ್ಲಿಯೇ ಮುಳುಗುತ್ತವೆ. ಅವರು ಯಾರೆಂದರೆ? 
 

ಚಾಣಕ್ಯ ನೀತಿಯಲ್ಲಿ ನಮ್ಮ ಜೀವನಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಯಾವುದು ಒಳ್ಳೆಯದು? ಯಾವುದು ಕೆಟ್ಟದ್ದು? ಹೇಗಿರಬೇಕು? ಹೇಗಿರಬಾರದು? ಮುಂತಾದ ಹಲವು ವಿಷಯಗಳಿವೆ ಈ ನೀತಿಯಲ್ಲಿ. ಆಚಾರ್ಯ ಚಾಣಕ್ಯರು ಮಹಾನ್ ರಾಜತಾಂತ್ರಿಕ. ಅಲ್ಲದೇ ಅರ್ಥಶಾಸ್ತ್ರದಲ್ಲಿಯೂ ಪ್ರಾವಿಣ್ಯ ಇದ್ದೋರು. ರಾಜಕೀಯ ಶಾಸ್ತ್ರದಲ್ಲೂ ಎತ್ತಿದ ಕೈ. ಆಚಾರ್ಯ ಚಾಣಕ್ಯರಿಗೆ ಪ್ರಾವೀಣ್ಯತೆ ಸಾಧಿಸಲಾಗದ ಕ್ಷೇತ್ರ ಎಂಬುವುದೇ ಇರಲಿಲ್ಲ. 

ಅವರು ನೀಡಿದ ಜ್ಞಾನವು ಸಾಮಾನ್ಯ ಜನರಿಗೆ ಸನ್ಮಾರ್ಗ ತೋರಿಸುತ್ತಿದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ನಮ್ಮ ನಿಜ ಜೀವನದ ಪ್ರತಿಯೊಂದೂ ಅಂಶವನ್ನು ವಿವರವಾಗಿ ಹೇಳಿದ್ದಾರೆ.  ಈ ನೀತಿಗಳಂತೆ ಲಕ್ಷ್ಮಿ ದೇವಿ ಕೆಲವು ಮನೆಗಳಲ್ಲಿ ಎಂದಿಗೂ ನೆಲೆಯಾಗುವುದಿಲ್ಲ. ಈ ಮನೆಗಳು ಯಾವಾಗಲೂ ಬಡತನದಲ್ಲಿಯೇ ಇರುತ್ತವೆ. ನಿಜವಾಗಿ ಯಾವ ಮನೆಯಲ್ಲಿ ಹಣ ಉಳಿಯುವುದಿಲ್ಲ? 
 

Latest Videos


ಯಾವಾಗಲೂ ಜಗಳ ನಡೆಯುವ ಮನೆ
ಕೆಲವರ ಮನೆಯಲ್ಲಿ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತವೆ. ಆದರೆ ಇಂಥ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ಇರುವುದಿಲ್ಲ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಕುಟುಂಬ ಸದಸ್ಯರು ಯಾವಾಗಲೂ ತಮ್ಮೊಳಗೆ ಜಗಳವಾಡುವುದು, ಅನಗತ್ಯವಾಗಿ ಪರಸ್ಪರ ಬೈಯುವುದು, ದೂಷಿಸುವುದು ಮಾಡುವ ಮನೆಯಲ್ಲಿ ಹಣ ಉಳಿಯುವುದಿಲ್ಲ. ಇಂತಹ ಮನೆಯಲ್ಲಿ ಯಾವಾಗಲೂ ಬಡತನ, ದುಃಖ ಇರುತ್ತದೆ. ಇವರು ಜೀವನದುದ್ದಕ್ಕೂ ಬಡವರಾಗಿಯೇ ಇರಬೇಕಾಗುತ್ತದೆ. 
 

ಸ್ವಚ್ಛತೆ ಇಲ್ಲದ ಮನೆ 

ಮನೆಯನ್ನು ಸ್ವಚ್ಛವಾಗಿದ್ದಷ್ಟೂ ಮನಸ್ಸು ಶಾಂತವಾಗಿರುತ್ತದೆ. ಸಿಕ್ಕಾಪಟ್ಟೆ ಹಸರಣೆ ಇದ್ದರೆ ಮನೆಯವರ ಮನಸ್ಸೂ ಅಷ್ಟೇ ಪ್ರಕ್ಷುಬ್ಧವಾಗಿದೆ ಎಂದರ್ಥ. ಅಂಥ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಇಷ್ಟು ಪಡುವುದಿಲ್ಲ. ಹಣದ ಕೊರತೆಯಾಗಬಾರದು ಅಂದ್ರೆ ಮನೆಯಲ್ಲಿ ಕ್ಲೀನಾಗಿಟ್ಟುಕೊಳ್ಳಿ. 

ಅಡುಗೆ ಮನೆ ಸ್ವಚ್ಛತೆ

ಆಚಾರ್ಯ ಚಾಣಕ್ಯರ ಪ್ರಕಾರ.. ಅಡುಗೆ ಮನೆಯೂ ಕೂಡ ಅಚ್ಚುಕಟ್ಟಾಗಿರಬೇಕು. ಆದರೆ ಕೆಲವರು ತಿಂದ ಪಾತ್ರೆಗಳನ್ನು ಹಾಗೆಯೇ ಇಡುತ್ತಾರೆ. ಒಂದೇ ಸಲ ಸಂಜೆ ಸ್ವಚ್ಛಗೊಳಿಸುತ್ತಾರೆ. ಆದರೆ ಇಂತಹ ಮನೆಯಲ್ಲಿ, ಪಾತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ವ್ಯಕ್ತಿಗಳು ಯಾವಾಗಲೂ ಬಡತನದಲ್ಲಿಯೇ ಇರಬೇಕಾಗುತ್ತದೆ.  ಅಡುಗೆ ಮನೆಯನ್ನು ಕೊಳಕು ಮಾಡುವುದರಿಂದ  ಅನ್ನಪೂರ್ಣದೇವಿಗೆ ಕೋಪ ಬರುತ್ತದೆ. ಇದರಿಂದ ಮನೆಯಲ್ಲಿ ಯಾವಾಗಲೂ ಹಣದ ಕೊರತೆ ಕಾಡುತ್ತದೆ. ಆದ್ದರಿಂದ ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛಗೊಳಿಸುತ್ತಿರಿ. 
 

ಮಹಿಳೆಯರಿಗೆ, ಹಿರಿಯರಿಗೆ ಗೌರವ ಇಲ್ಲದ ಮನೆ

ಚಾಣಕ್ಯ ನೀತಿಯಂತೆ, ಮಹಿಳೆಯರನ್ನು, ಹಿರಿಯರನ್ನು, ಪಂಡಿತರನ್ನು ಗೌರವಿಸದ ಮನೆಯಲ್ಲಿ ಸುಖ, ಶಾಂತಿ ಇರುವುದಿಲ್ಲ. ಇಂತಹ ಮನೆಯಲ್ಲಿ ಬಡತನ ಕಾಡುತ್ತಲೇ ಇರುತ್ತದೆ. ಇಂತಹ ಮನೆಯಲ್ಲಿ ಎಷ್ಟೇ ಹಣ ಸಂಪಾದಿಸಿದರೂ, ಬಡತನ ಇರುತ್ತದೆ. ಆರ್ಥಿಕ ಸಮಸ್ಯೆಗಳು ಬರುತ್ತವೆ. 

click me!