ಪ್ರಸಾದಕ್ಕೆ ಫೇಮಸ್ ಈ 7 ದೇವಾಲಯಗಳು
ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡು ಪ್ರಸಾದವು ಪ್ರಾಣಿಗಳ ಕೊಬ್ಬು ಬಳಸಿದ್ದ ಕಾರಣದಿಂದ ಬಹಳ ಚರ್ಚೆಯಲ್ಲಿದೆ. ಲ್ಯಾಬ್ ವರದಿಯೂ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ ಎಂದು ದೃಢಪಡಿಸಿದೆ .ಈ ಸುದ್ದಿ ಹೊರ ಬಂದ ನಂತರ ದೇಶದ ಲಕ್ಷಾಂತರ ಭಕ್ತರ ಭಾವನೆಗಳಿಗೆ ನೋವುಂಟಾಗಿದೆ. ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದ ವಿಶ್ವಪ್ರಸಿದ್ಧ. ಭಾರತದಲ್ಲಿ ಇನ್ನೂ ಅನೇಕ ದೇವಾಲಯಗಳಿದ್ದು, ಅವುಗಳು ತಮ್ಮ ಪ್ರಸಾದಕ್ಕೆ ಹೆಸರುವಾಸಿ. ಅಂತಹ ಕೆಲವು ದೇವಾಲಯಗಳ ಬಗ್ಗೆ ತಿಳಿಯೋಣ.
ಮಹಾಕಾಳ ಲಡ್ಡು ಪ್ರಸಾದಕ್ಕೆ 5 ಸ್ಟಾರ್ ರೇಟಿಂಗ್
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನವು 12 ಜ್ಯೋತಿರ್ಲಿಂಗಗಳಲ್ಲೊಂದು. ಇಲ್ಲಿ ದೇವಸ್ಥಾನ ಸಮಿತಿ, ಭಕ್ತರಿಗೆ ಬೇಸನ್ ಲಡ್ಡುಗಳನ್ನು ಪ್ರಸಾದವಾಗಿ ವಿತರಿಸುತ್ತದೆ. ಇದು ವಿವಿಧ ತೂಕದ ಪ್ಯಾಕೆಟ್‌ಗಳಲ್ಲಿ ಲಭ್ಯ. ಇದನ್ನು ತಯಾರಿಸಲು ಬೇಸನ್, ಶುದ್ಧ ತುಪ್ಪ, ಸಕ್ಕರೆ ಮತ್ತು ಒಣ ಹಣ್ಣುಗಳನ್ನು ಬಳಸಲಾಗುತ್ತದೆ. ಆಹಾರ ಪದಾರ್ಥಗಳಿಗೆ ಮಾನದಂಡಗಳನ್ನು ನಿಗದಿಪಡಿಸುವ ಸಂಸ್ಥೆ FSSAI ಈ ಪ್ರಸಾದಕ್ಕೆ ಐದು ಸ್ಟಾರ್ ರೇಟಿಂಗ್ ನೀಡಿದೆ.
ಹನುಮಾನ್‌ಗಢಿಯ ಲಡ್ಡು ಪ್ರಸಾದ
ಅಯೋಧ್ಯೆಯಲ್ಲಿರುವ ಹನುಮಾನ್‌ಗಢಿ ದೇವಸ್ಥಾನದಲ್ಲಿ ಸಿಗುವ ಲಡ್ಡು ಪ್ರಸಾದವು ವಿಶ್ವಪ್ರಸಿದ್ಧವಾಗಿದೆ. ಇದಕ್ಕೆ GI ಟ್ಯಾಗ್ ಸಹ ಸಿಕ್ಕಿದೆ. ಯಾವುದೇ ಪ್ರಸಾದಕ್ಕೆ GI ಟ್ಯಾಗ್ ಸಿಗುವುದು ದೊಡ್ಡ ವಿಷಯ. ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಈ ಪ್ರಸಾದವನ್ನು ಸ್ವೀಕರಿಸುತ್ತಾರೆ. ಇದನ್ನು ತಯಾರಿಸಲು ಬೇಸನ್, ಶುದ್ಧ ತುಪ್ಪ, ಸಕ್ಕರೆ ಮತ್ತು ಒಣ ಹಣ್ಣುಗಳನ್ನು ಬಳಸಲಾಗುತ್ತದೆ.
ಶ್ರೀನಾಥಜಿ ದೇವಸ್ಥಾನದ ವಿಶೇಷ ಪ್ರಸಾದ
ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥಜಿ ದೇವಸ್ಥಾನವು ಶ್ರೀಕೃಷ್ಣನಿಗೆ ಸಮರ್ಪಿತ. ಇಲ್ಲಿನ ಪ್ರಸಾದವೂ ವಿಶ್ವಪ್ರಸಿದ್ಧ. ಇದನ್ನು ಮಾತಾಡಿ ಎಂದು ಕರೆಯಲಾಗುತ್ತದೆ. ಈ ರೀತಿಯ ಪ್ರಸಾದವನ್ನು ಬೇರೆ ಯಾವುದೇ ದೇವಸ್ಥಾನದಲ್ಲಿಯೂ ಸಿಗುವುದಿಲ್ಲ. ಇದನ್ನು ತಯಾರಿಸಲು ಗೋಧಿ ಹಿಟ್ಟು, ಮಸಾಲೆ ಮತ್ತು ಸಕ್ಕರೆಯನ್ನು ಬಳಸಿ, ತಯಾರಿಸಲಾಗುತ್ತದೆ.
ವೈದ್ಯನಾಥ ದೇವಸ್ಥಾನದ ಪ್ರಸಾದ ವಿದೇಶಕ್ಕೂ ರಫ್ತು
ಜಾರ್ಖಂಡ್‌ನಲ್ಲಿರುವ ವೈದ್ಯನಾಥ ದೇವಸ್ಥಾನವು 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇಲ್ಲಿನ ಪೇಡಾಗಳು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪ್ರಸಿದ್ಧ. 2022ರಲ್ಲಿ, ಈ ಪೇಡಾದ ಮಾದರಿಯನ್ನು ಕೊಲ್ಲಿ ರಾಷ್ಟ್ರ ಬೆಹ್ರೇನ್‌ಗೆ ಕಳುಹಿಸಲಾಯಿತು. ಅಲ್ಲಿ ಅವರು ಈ ಪೇಡಾವನ್ನು ಹಲವು ನಿಯತಾಂಕಗಳ ಮೇಲೆ ಪರೀಕ್ಷಿಸಿದ್ದು, ಇದು ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದು ಪರಿಗಣಿಸಲಾಗಿದೆ. ಅಂದಿನಿಂದ, ಈ ಪೇಡಾ ಇತರೆ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ.
ಮಥುರಾದ ಪೇಡಾಗಳು ಕೂಡ ವಿಶ್ವಪ್ರಸಿದ್ಧ
ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿರುವ ಬಾಂಕೆ ಬಿಹಾರಿ ದೇವಸ್ಥಾನದಲ್ಲಿ ಪೇಡಾವನ್ನು ವಿಶೇಷವಾಗಿ ನೈವೇದ್ಯ ಮಾಡಲಾಗುತ್ತದೆ. ಈ ಪೇಡಾ ವಿಶ್ವಪ್ರಸಿದ್ಧವೂ ಹೌದು. ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ಬೆಣ್ಣೆ-ಸಕ್ಕರೆಯೊಂದಿಗೆ ಪೇಡಾವೂ ತುಂಬಾ ಇಷ್ಟವೆಂದು ಹೇಳಲಾಗುತ್ತದೆ. 18ನೇ ಶತಮಾನದಲ್ಲಿ ಬರೆಯಲಾದ ಅಕ್ಬರ್‌ನಾಮಾ ಚಕ್ಕ್ತ ಇತಿಹಾಸ ಹೊಂದಿದೆ.
ಜಗನ್ನಾಥನ ಭಾತ, ಜಗತ್ತು ಪಸರೆ ಹಾತ
ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಸ್ಥಾನದಲ್ಲಿ ನೀಡಲಾಗುವ ಭಾತ ಅಂದರೆ ಅನ್ನದ ಪ್ರಸಾದ ತುಂಬಾ ವಿಶೇಷವಾಗಿದೆ. ಇದಕ್ಕಾಗಿ ಜಗನ್ನಾಥನ ಭಾತ, ಜಗತ್ತು ಪಸರೆ ಹಾತ ಎಂದು ಹೇಳಲಾಗುತ್ತದೆ. ಅಂದರೆ ಈ ಪ್ರಸಾದವನ್ನು ಪಡೆಯಲು ಇಡೀ ಪ್ರಪಂಚವು ಹಾತೊರೆಯುತ್ತದೆ. ಜಗನ್ನಾಥನ ಭಾತ ಪ್ರಸಾದವು 'ಮಹಾಪ್ರಸಾದ' ಎಂದು ಕರೆಯಲ್ಪಡುವ ಏಕೈಕ ಪ್ರಸಾದ.
ತ್ರಿಪುರೇಶ್ವರಿ ದೇವಸ್ಥಾನದ ಪ್ರಸಾದ
ತ್ರಿಪುರಾದಲ್ಲಿರುವ ತ್ರಿಪುರೇಶ್ವರಿ ದೇವಸ್ಥಾನದಲ್ಲಿ ಅರ್ಪಿಸಲಾಗುವ ಪ್ರಸಾದವು ವಿಶ್ವಪ್ರಸಿದ್ಧವಾಗಿದೆ. ಇದನ್ನು ಹಾಲು, ಸಕ್ಕರೆ, ಒಣ ಹಣ್ಣುಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಭಕ್ತರು ಇದನ್ನು ಮಾತಾಬರಿ ಪೇಡಾ ಎನ್ನುತ್ತಾರೆ. ಈ ಪ್ರಸಾದಕ್ಕೂ GI ಟ್ಯಾಗ್ ಸಿಕ್ಕಿದೆ. ಈ ಪ್ರಸಾದವನ್ನು ಆನ್‌ಲೈನ್ ಮತ್ತು ಫೇಸ್‌ಬುಕ್ ಮತ್ತು ವಾಟ್ಸಾಪ್ ಮೂಲಕ ಆರ್ಡರ್ ಮಾಡಬಹುದು.