ಪ್ರತಿಯೊಬ್ಬ ವ್ಯಕ್ತಿಯ ಗುಣ ಸ್ವಭಾವ ಎಲ್ಲವೂ ಅವರು ಹುಟ್ಟಿದ ದಿನ, ರಾಶಿ ಮೇಲೆ ಬದಲಾಗುತ್ತೆ. ರಾಶಿ ಬದಲಾದಂತೆ ವ್ಯಕ್ತಿಯಿಂದ ವ್ಯಕ್ತಿಗೆ ವ್ಯಕ್ತಿತ್ವ ಬದಲಾಗುತ್ತೆ. ಆದ್ರೆ ಈ 12 ರಾಶಿಗಳಲ್ಲಿ ಅತ್ಯಂತ ಕಾಳಜಿ ವಹಿಸುವ ರಾಶಿಗಳು ಐದು ಮಾತ್ರ. ಆ ರಾಶಿಯವರು (Zodiac sign) ನಿಮ್ ಜೀವನದಲ್ಲಿ ಸಿಕ್ರೆ ನೀವೇ ಭಾಗ್ಯವಂತರು. ಹಾಗಿದ್ರೆ ಆ ಐದು ರಾಶಿಗಳು ಯಾವುವು?
ಕರ್ಕಾಟಕ ರಾಶಿ (Cancer)
ಈ ರಾಶಿಯಲ್ಲಿ ಜನರನ್ನು ಹೆಚ್ಚಾಗಿ ಕಾಳಜಿ ಮತ್ತು ಕೇರಿಂಗ್ ಮಾಡೋ ಜನರಾಗಿರ್ತಾರೆ. ಚಂದ್ರನಿಂದ ಆಳಲ್ಪಡುವ ಈ ಜನರು ತುಂಬಾ ಬುದ್ದಿವಂತರು ಮತ್ತು ಇತರ ಜನರ ಅಗತ್ಯಗಳಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗ್ತಾರೆ. ಇತರರನ್ನು ಚೆನ್ನಾಗಿ ನೋಡಿಕೊಳ್ಳುವಲ್ಲಿ, ಸುರಕ್ಷಿತವಾಗಿರಿಸುವಲ್ಲಿ, ಪ್ರೀತಿಯಿಂದ ನೋಡಿಕೊಳ್ಳುವಲ್ಲಿ ಇವರು ಸದಾ ಮುಂದಿರುತ್ತಾರೆ. ಇವರು ಎಲ್ಲಾದಕ್ಕಿಂತ ಮುಖ್ಯವಾಗಿ ತಮ್ಮವರು ಚೆನ್ನಾಗಿರಬೇಕೆಂದು ಬಯಸ್ತಾರೆ.
ಮೀನಾ ರಾಶಿ (Pisces)
ಮೀನ ರಾಶಿಯವರು ತಮ್ಮ ಅನುಭೂತಿ ಮತ್ತು ಸಹಾನುಭೂತಿ ಸ್ವಭಾವಕ್ಕೆ ಹೆಸರುವಾಸಿ. ಈ ರಾಶಿಯವರಿಗೆ ಮಾನವ ಸ್ವಭಾವದ ಬಗ್ಗೆ ಆಳವಾದ ತಿಳುವಳಿಕೆ ಇರುತ್ತದೆ. ಅವರು ಇತರರ ಭಾವನೆಗಳಿಗೆ ಹೆಚ್ಚು ಬೇಗ ಸ್ಪಂದಿಸುತ್ತಾರೆ. ನೋವಲ್ಲಿರುವವರಿಗೆ ಸಾಂತ್ವಾನ ನೀಡುವಲ್ಲಿ ಮುಂದಿರುತ್ತಾರೆ. ಮೀನ ರಾಶಿಯವರು ತಮ್ಮ ನಿಸ್ವಾರ್ಥತೆ, ದಯೆಯಿಂದಾಗಿ ಅಗತ್ಯವಿರುವವರಿಗೆ ಸಹಾಯ ಮತ್ತು ಬೆಂಬಲ ನೀಡುವ ಇವರ ಗುಣ ಎಲ್ಲೆಲ್ಲೂ ಜನಪ್ರಿಯ ಪಡೆದಿದೆ.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರನ್ನು ಚಿನ್ನದ ಹೃದಯವರು ಅಂತಾರೆ. ಇವರು ಎಷ್ಟೊಂದು ಮೃದು ಎಂದರೆ, ಪ್ರತಿಯೊಂದು ಜೀವಿಗಾಗಿಯೂ ಇವರ ಹೃದಯ ಮಿಡಿಯುತ್ತದೆ. ಕಷ್ಟದಲ್ಲಿರೋರಿಗೆ ಸಹಾಯ ಮಾಡಲು ಇವರು ಯಾವಾಗಲೂ ಮುಂದೆ.. ಇನ್ನೊಬ್ಬರ ಕಷ್ಟಕ್ಕೆ ತಾವು ಕಣ್ಣೀರು ಮಿಡಿಯುವ ಈ ರಾಶಿಯವರು ಅವರ ಸಹಾಯಕ್ಕೂ ಜೊತೆಯಾಗಿ ನಿಲ್ಲುತ್ತಾರೆ.
ತುಲಾ ರಾಶಿ (Libra)
ತುಲಾ ರಾಶಿಯವರು ತಮ್ಮ ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು (Balance and Harmony) ಇಷ್ಟಪಡುತ್ತಾರೆ - ಅದು ವೃತ್ತಿಪರವಾಗಿರಲಿ ಅಥವಾ ವೈಯಕ್ತಿಕ ಜೀವನವಾಗಿರಲ್ಲಿ ಎಲ್ಲಾ ಕಡೆಯೂ ಸಾಮರಸ್ಯ ಇರಬೇಕು ಎಂದು ಬಯಸುವವರು ಇವರು. ಅವರ ಈ ಗುಣವೇ ಅವರಿಗೆ ಇತರರ ಬಗ್ಗೆ ಸಾಕಷ್ಟು ಕಾಳಜಿ ವಹಿಸುವಂತೆ ಮಾಡುತ್ತದೆ. ಇತರರನ್ನು ಬೇಗನೆ ಅರ್ಥ ಮಾಡಿಕೊಳ್ಳುವ ಈ ಜನರು ಯಾವಾಗಲೂ ಸಾಮರಸ್ಯಕ್ಕೆ ಹೆಚ್ಚು ಬೆಂಬಲ ನೀಡುತ್ತಾರೆ.
ವೃಷಭ ರಾಶಿ (Taurus)
ಈ ರಾಶಿಯಲ್ಲಿ ಜನಿಸಿದ ಜನರು ಹಠಮಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರೂ, ಅವರು ಇಷ್ಟಪಡುವ ಮತ್ತು ಗೌರವಿಸುವ ಜನರ ಬಗ್ಗೆ ತುಂಬಾ ಕಾಳಜಿ ಮತ್ತು ಪ್ರೀತಿಯನ್ನು ಹೊಂದಿರುತ್ತಾರೆ. ಪ್ರೀತಿ ಮತ್ತು ಸಂತೋಷದ ಗ್ರಹವಾದ ಶುಕ್ರ ಗ್ರಹ ವೃಷಭರಾಶಿಯನ್ನು ಆಳೋದರಿಂದ ಈ ರಾಶಿಯವರು ಯಾವಾಗ್ಲೂ ಎಲ್ಲರಲ್ಲೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ.