shiva worship during pregnancy : ಗರ್ಭಿಣಿಯರು ಶಿವಲಿಂಗ ಪೂಜೆ ಮಾಡ್ಬಾರದು, ಇದ್ರಿಂದ ಭ್ರೂಣಕ್ಕೆ ತೊಂದ್ರೆ ಎನ್ನುವ ನಂಬಿಕೆ ಇದೆ. ಅದ್ರ ಬಗ್ಗೆ ಶಾಸ್ತ್ರ ಏನು ಹೇಳುತ್ತೆ? ಅದ್ರ ವಿವರ ಇಲ್ಲಿದೆ.
ಗರ್ಭಾವಸ್ಥೆಯಲ್ಲಿ ಗರ್ಭಿಣಿ ನಡವಳಿಕೆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಧಾರ್ಮಿಕ ಗ್ರಂಥಗಳು, ಗರ್ಭಿಣಿಯಾದವಳು ಸಕಾರಾತ್ಮಕ ಆಲೋಚನೆ ಮಾಡ್ಬೇಕು. ಸದಾ ಪ್ರಾರ್ಥನೆ, ಮಂತ್ರಗಳ ಪಠಣ, ಒಳ್ಳೆಯ ಪುಸ್ತಕಗಳನ್ನು ಓದುವುದ್ರಲ್ಲಿ ಸಮಯ ಕಳೆಯಬೇಕು ಎನ್ನುತ್ತವೆ.
27
ಶಿವಲಿಂಗದ ಪೂಜೆ
ಶಿವಲಿಂಗವನ್ನು ಶಿವನ ನಿರಾಕಾರ ರೂಪವೆಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಶಿವಲಿಂಗದ ಪೂಜೆಗೆ ತನ್ನದೇ ಆದ ಮಹತ್ವ ಇದೆ. ಶಿವಲಿಂಗವನ್ನು ಪೂಜಿಸಲು ಕೆಲ ನಿಯಮ, ಶಾಸ್ತ್ರಗಳನ್ನು ಪಾಲಿಸಬೇಕಾಗುತ್ತದೆ. ಶಿವನನ್ನು ಪೂಜಿಸುವುದ್ರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ರಕ್ಷಣೆ ಮತ್ತು ಶಾಂತಿ ದೊರೆಯುತ್ತದೆ. ಆದ್ರೆ ಶಿವನನ್ನು ಪೂಜಿಸಲು ಕಟ್ಟುನಿಟ್ಟಿನ ನಿಯಮಗಳ ಅಗತ್ಯವಿಲ್ಲ. ಶಿವನಿಗೆ ಆಡಂಭರದ ಅಗತ್ಯವಿಲ್ಲ. ಭಕ್ತಿಯಿಂದ ಪೂಜೆ ಮಾಡಿದ್ರೆ ಸುಲಭವಾಗಿ ಒಲಿಯುತ್ತಾನೆ.
37
ಶಿವಲಿಂಗಕ್ಕೆ ಗರ್ಭಿಣಿಯರ ಪೂಜೆ
ಗರ್ಭಾವಸ್ಥೆಯಲ್ಲಿ ದೇವರು ಮತ್ತು ದೇವತೆಗಳನ್ನು ಪೂಜಿಸುವುದು ಅತ್ಯಗತ್ಯ. ದೈವಿಕ ಶಕ್ತಿಗಳಿಂದ ಆಶೀರ್ವಾದ ಪಡೆಯಲು ಪೂಜೆ ಅಗತ್ಯ. ಗರ್ಭಿಣಿಯರು ಶಿವಲಿಂಗವನ್ನು ಪೂಜಿಸಬಾರದು ಅಂತ ಕೆಲವು ಕಡೆ ಹೇಳಲಾಗುತ್ತದೆ. ಮತ್ತೆ ಕೆಲವು ಕಡೆ ಗರ್ಭಿಣಿಯರು ಶಿವಲಿಂಗವನ್ನು ಸ್ಪರ್ಶಿಸಬಾರದು ಎನ್ನಲಾಗುತ್ತದೆ. ಹಾಗಂತ ಶಿವನ ಪ್ರಾರ್ಥನೆಗೆ ನಿಷೇಧವಲ್ಲ.
ಶಿವಲಿಂಗವನ್ನು ಗರ್ಭಿಣಿಯರು ಸ್ಪರ್ಶಿಸಬಾರದು ಎನ್ನಲು ಕೆಲ ಕಾರಣವಿದೆ. ಇಲ್ಲಿ ಧಾರ್ಮಿಕ ನಂಬಿಕೆ ಬಹಳ ಮುಖ್ಯವಾಗುತ್ತದೆ. ಶಿವಲಿಂಗವನ್ನು ಕಾಸ್ಮಿಕ್ ಶಕ್ತಿಯ ಕೇಂದ್ರ ಎನ್ನಲಾಗಿದೆ. ಶಿವಲಿಂಗದಿಂದ ಹೊರಹೊಮ್ಮುವ ಶಕ್ತಿಯು ತುಂಬಾ ಪ್ರಬಲ ಮತ್ತು ಶಕ್ತಿಯುತವಾಗಿದೆ. ಸಾಮಾನ್ಯ ವ್ಯಕ್ತಿ ಆ ಶಕ್ತಿಯನ್ನು ತಡೆಯಬಲ್ಲವನಾಗಿರುತ್ತಾನೆ. ಆದ್ರೆ ಗರ್ಭದಲ್ಲಿರುವ ಭ್ರೂಣಕ್ಕೆ ಈ ಶಕ್ತಿ ತಡೆಯುವುದು ಕಷ್ಟ. ಹಾಗಾಗಿ ಶಿವಲಿಂಗವನ್ನು ಗರ್ಭಿಣಿಯರು ಸ್ಪರ್ಶಿಸಬಾರದು ಅಂತ ಕೆಲ ವಿದ್ವಾಂಸರು ಹೇಳ್ತಾರೆ.
57
ಮೃತ್ಯಂಜಯ ಮಂತ್ರ
ಭಕ್ತಿ, ಪೂಜೆ ಹೆಸರಿನಲ್ಲಿ ಊಟ ಬಿಟ್ಟು, ಉಪವಾಸ ಮಾಡಿದ್ರೆ ಆರೋಗ್ಯ ಹದಗೆಡುತ್ತದೆ. ಗರ್ಭಿಣಿಯರು ಇಂಥ ಕಠಿಣ ಪೂಜೆ ಮಾಡುವ ಅಗತ್ಯವಿಲ್ಲ. ಶುದ್ಧ ಮನಸ್ಸಿನಿಂದ ಶಿವನ ಪ್ರಾರ್ಥನೆ ಮಾಡಿದ್ರೆ ಸಾಕಾಗುತ್ತದೆ. ಗರ್ಭಿಣಿ ಮಹಿಳೆಯರು ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದು ಹೆಚ್ಚು ಪ್ರಯೋಜನಕಾರಿ. ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಇದು ಒಳ್ಳೆಯದು.
67
ಜ್ಯೋತಿಷ್ಯ ಏನು ಹೇಳುತ್ತದೆ?
ಶಿವನು ಚಂದ್ರನ ಜೊತೆ ಸಂಬಂಧ ಹೊಂದಿದ್ದಾನೆ. ಮಂಗಳವನ್ನು ಶಿವನ ಶಕ್ತಿಯ ಸಂಕೇತ ಎಂದು ನಂಬಲಾಗಿದೆ. ಗರ್ಭಿಣಿಯರ ದೇಹ ಮತ್ತು ಮನಸ್ಸು ಗಮನಾರ್ಹ ಬದಲಾಗುತ್ತದೆ. ಇಂಥ ಸಂದರ್ಭದಲ್ಲಿ ಚಂದ್ರ, ರಾಹು ಮತ್ತು ಕೇತುಗಳಂತಹ ಗ್ರಹಗಳ ಪ್ರಭಾವ ಬಲವಾಗಿರುತ್ತದೆ. ತೀವ್ರವಾದ ಶಕ್ತಿ ಇರುವ ಸ್ಥಳದಲ್ಲಿ ದೀರ್ಘಕಾಲ ಇರುವುದು ಅಥವಾ ಅದರೊಂದಿಗೆ ನೇರ ಸಂಪರ್ಕಕ್ಕೆ ಬರುವುದು ಗರ್ಭಿಣಿಯರಿಗೆ ತೊಂದರೆ ತರಬಹುದು.
77
ಶಿವ ದೇವಸ್ಥಾನಕ್ಕೆ ಭೇಟಿ
ಗರ್ಭಿಣಿಯರು ಶಿವಲಿಂಗ ಸ್ಪರ್ಶ ಮಾಡುವಂತಿಲ್ಲ. ಆದ್ರೆ ದೇವಸ್ಥಾನಗಳಿಗೆ ಭೇಟಿ ನೀಡ್ಬಹುದು. ಶಿವನ ದರ್ಶನ ಪಡೆಯಬಹುದು. ಹಿಂದೆ ದೇವಸ್ಥಾನಗಳು ಚಿಕ್ಕದಿದ್ದು, ನೂಕು – ನುಗ್ಗಲಿನಿಂದ ಸಮಸ್ಯೆಯಾಗ್ತಿತ್ತು. ಆದ್ರೀಗ ದೇವಸ್ಥಾನದಲ್ಲಿ ಸಾಕಷ್ಟು ಬೆಳಕಿರುತ್ತದೆ. ವೈದ್ಯಕೀಯ ಸೌಲಭ್ಯವಿರುತ್ತದೆ. ಆರೋಗ್ಯವಂತ ಮಹಿಳೆ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆಯಬಹುದು. ಇದು ಅವಳ ಮನಸ್ಸನ್ನು ಶಾಂತಗೊಳಿಸುತ್ತದೆ. ಆದ್ರೆ ತುಂಬಾ ಸಮಯ ಶಿವಲಿಂಗದ ಬಳಿ ನಿಲ್ಲುವುದನ್ನು ತಪ್ಪಿಸಿ.