ಹಿಂದೂ ಧರ್ಮದಲ್ಲಿ ದೇವತೆ ಸ್ಥಾನ ಪಡೆದಿರುವ ಗಂಗೆಯನ್ನು ಮನೆಗೆ ತಂದು ಪೂಜೆ ಮಾಡಲಾಗುತ್ತದೆ. ಗಂಗಾಜಲವನ್ನು ಮನೆಗೆ ತರುವ ಮುನ್ನ ಕೆಲ ನಿಯಮ ಪಾಲಿಸಬೇಕು. ಇಲ್ಲವೆಂದ್ರೆ ಫಲ ಸಿಗೋದಿಲ್ಲ.
ಸನಾತನ ಧರ್ಮದಲ್ಲಿ ಜಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಎಲ್ಲಾ ನದಿಗಳು, ಸಮುದ್ರಗಳು ಮತ್ತು ಸರೋವರಗಳ ನೀರು ತನ್ನದೇ ಆದ ಮಹತ್ವ ಹೊಂದಿದೆ. ಆದ್ರೆ ಗಂಗೆಯ ನೀರನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗುತ್ತದೆ.
28
ಗಂಗೆ ಹುಟ್ಟು
ಪೌರಾಣಿಕ ನಂಬಿಕೆ ಪ್ರಕಾರ, ಗಂಗಾ ನದಿಯನ್ನು ಬ್ರಹ್ಮಾಂಡದ ರಕ್ಷಕ ಎಂದು ಪರಿಗಣಿಸಲಾದ ಭಗವಂತ ವಿಷ್ಣುವಿನ ಹೆಬ್ಬೆರಳಿನಿಂದ ಹುಟ್ಟಿಕೊಂಡಿದೆ. ಅದಕ್ಕಾಗಿಯೇ ಸನಾತನಿಗಳು ಅಮೃತವೆಂದು ಪರಿಗಣಿಸುವ ಗಂಗಾ ನೀರನ್ನು ಭಗವಂತ ಹರಿಯ ಚರಣಾಮೃತ ಎಂದೂ ಕರೆಯುತ್ತಾರೆ. ಹಿಂದೂ ನಂಬಿಕೆಯಲ್ಲಿ ಗಂಗಾ ನೀರನ್ನು ತರುವ ಮತ್ತು ಸಂಗ್ರಹಿಸಲು ಕೆಲವು ನಿಯಮಗಳನ್ನು ಸೂಚಿಸಲಾಗಿದೆ.
38
ಗಂಗಾಜಲವನ್ನು ಮನೆಗೆ ತರುವ ವಿಧಾನ
ಹಿಂದೂ ನಂಬಿಕೆಯ ಪ್ರಕಾರ, ಗಂಗಾ ಜಲವನ್ನು ಮನೆಗೆ ತರಲು ಒಂದಿಷ್ಟು ನಿಯಮವಿದೆ. ಮೊದಲು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಬೇಕು. ಗಂಗಾ ನೀರನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ತರಬಾರದು. ಅದನ್ನು ಕಂಚು ಅಥವಾ ಹಿತ್ತಾಳೆ ಪಾತ್ರೆಯಲ್ಲಿ ತರಬೇಕು. ಮನೆಗೆ ತಂದ ಮೇಲೆ ಗಂಗಾ ಜಲದ ಪ್ರಮಾಣದಷ್ಟೆ ಹಸುವಿನ ಹಾಲನ್ನು ಗಂಗಾಜಿಗೆ ಅರ್ಪಿಸಬೇಕು.
ಹಿಂದೂ ನಂಬಿಕೆಯ ಪ್ರಕಾರ, ಗಂಗಾಜಲ ಪಾಪನಾಶಕ. ಆದ್ದರಿಂದ ಗಂಗಾಮಾತೆಯ ಈ ಪವಿತ್ರ ಅಮೃತವನ್ನು ಪ್ರಾರ್ಥನನೆ ಸೂಕ್ತವಾದ, ಮನೆಯ ಈಶಾನ್ಯ ಮೂಲೆಯಲ್ಲಿ ಇಡಬೇಕು. ಶುದ್ಧವಾದ ಸ್ಥಳದಲ್ಲಿ ಗಂಗಾಜಲ ಇಡುವುದು ಬಹಳ ಮುಖ್ಯ. ಅದನ್ನು ಎಂದಿಗೂ ಅಶುದ್ಧ ಸ್ಥಿತಿಯಲ್ಲಿ ಮುಟ್ಟಬಾರದು. ಕತ್ತಲೆಯಾದ ಸ್ಥಳದಲ್ಲಿ ಅಥವಾ ಜನರು ಬಂದು ಹೋಗಿ ಮುಟ್ಟಬಹುದಾದ ಸ್ಥಳದಲ್ಲಿ ಗಂಗಾಜಲವನ್ನು ಎಂದಿಗೂ ಇಡಬೇಡಿ.
58
ಧಾರ್ಮಿಕ ಮಹತ್ವ
ಗಂಗಾಜಲ ದೇಹ ಮತ್ತು ಮನಸ್ಸನ್ನು ಮಾತ್ರ ಶುದ್ಧೀಕರಿಸುವುದಿಲ್ಲ. ಎಲ್ಲಾ ರೀತಿಯ ಪಾಪ ಮತ್ತು ದೋಷಗಳಿಂದ ಮುಕ್ತಿ ನೀಡುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಶುದ್ಧ ಮನಸ್ಸಿನಿಂದ ಗಂಗಾ ನದಿಯಲ್ಲಿ ಮಿಂದೆದ್ದರೆ ವ್ಯಕ್ತಿ ಎಲ್ಲಾ ಪಾಪಗಳಿಂದ ಶುದ್ಧನಾಗುತ್ತಾನೆ. ದೋಷ ನಿವಾರಣೆಯಾಗಿ ಸಂತೋಷ ಮತ್ತು ಅದೃಷ್ಟ ಪಡೆಯುತ್ತಾನೆ. ಗಂಗಾಜಲವನ್ನು ಸೇವಿಸುವುದು ಮಾತ್ರವಲ್ಲ ಅದನ್ನು ನೋಡುವುದು ಕೂಡ ಪುಣ್ಯವೆಂದು ಪರಿಗಣಿಸಲಾಗುತ್ತದೆ.
68
ಸಕಾರಾತ್ಮಕ ಶಕ್ತಿ
ಹಿಂದೂ ಧರ್ಮದ ಪ್ರಕಾರ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ, ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ನೀವು ಗಂಗಾಜಲವನ್ನು ಬಳಸಬೇಕು. ಬೆಳಿಗ್ಗೆ ಸ್ನಾನ ಮಾಡಿ ಧ್ಯಾನ ಮಾಡಿದ ನಂತರ ನಿಮ್ಮ ಮನೆಯಾದ್ಯಂತ ಗಂಗಾ ಜಲವನ್ನು ಸಿಂಪಡಿಸಬೇಕು. ಇದ್ರಿಂದ ಮನೆ ಶುದ್ಧವಾಗುತ್ತದೆ.
78
ಶಿವನ ಆಶೀರ್ವಾದ
ಹಿಂದೂ ಧರ್ಮದಲ್ಲಿ ಗಂಗಾ ಜಲವನ್ನು ಶಿವನ ಪೂಜೆಗೆ ಪವಿತ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಶಿವನ ಆಶೀರ್ವಾದ ಪಡೆಯಲು, ಗಂಗಾ ಜಲವನ್ನು ಶಿವನಿಗೆ ಅರ್ಪಿಸಬೇಕು. ಗಂಗಾ ಜಲ ಕಡಿಮೆ ಇದ್ದರೆ, ಶುದ್ಧ ನೀರಿಗೆ ಸ್ವಲ್ಪ ಗಂಗಾಜಲ ಬೆರೆಸಿ ಶಿವಲಿಂಗಕ್ಕೆ ಅರ್ಪಿಸಬಹುದು.
88
ಮೋಕ್ಷ ಪ್ರಾಪ್ತಿ
ಗಂಗಾಜಲ ಮನುಷ್ಯನ ಹುಟ್ಟಿನಿಂದ ಅಂತ್ಯದವರೆಗೂ ಜೊತೆಯಲ್ಲಿರುತ್ತದೆ. ಮಗು ಹುಟ್ಟಿದಾಗ ಗಂಗಾಜಲದಲ್ಲಿ ಅದನ್ನು ಪವಿತ್ರಗೊಳಿಸಿದ್ರೆ ಸಾಯುವ ಮುನ್ನ ಬಾಯಿಗೆ ಗಂಗಾಜಲ ಬಿಡಲಾಗುತ್ತದೆ. ಗಂಗಾಜಲ ಮೋಕ್ಷ ನೀಡುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.