Published : May 15, 2022, 04:07 PM ISTUpdated : May 15, 2022, 04:09 PM IST
ಬುದ್ಧ ಪೂರ್ಣಿಮಾವು ಮೇ 16ರಂದು ಬರುತ್ತದೆ. ಬೌದ್ಧ ಧರ್ಮದ ಸ್ಥಾಪಕ ಬುದ್ಧನ ಜನ್ಮಜಯಂತಿಯ ಈ ದಿನ ವಾಟ್ಸಾಪ್, ಫೇಸ್‌ಬುಕ್, ಇನ್ಸ್‌ಟಾಗ್ರಾಂನಲ್ಲಿ ಶೇರ್ ಮಾಡಲು ಇಲ್ಲಿವೆ ಬುದ್ಧನ ಕೋಟ್‌ಗಳು, ಸುದಿನದ ಶುಭಾಶಯಗಳು.
ಈ ವರ್ಷವು ಪ್ರೀತಿ, ಬೆಳಕು, ಶಾಂತಿ ಮತ್ತು ಸಾಮರಸ್ಯದಿಂದ ತುಂಬಿರಲಿ! ಬುದ್ಧ ಪೂರ್ಣಿಮಾ ಶುಭಾಶಯಗಳು!
212
Bhudda Quotes-12
ನೀವು ಏನು ಯೋಚಿಸುತ್ತೀರಿ, ಅದೇ ಆಗುತ್ತೀರಿ. ನೀವು ಏನು ಭಾವಿಸುತ್ತೀರಿ, ಅದನ್ನೇ ಆಕರ್ಷಿಸುತ್ತೀರಿ. ನೀವು ಏನನ್ನು ಊಹಿಸುತ್ತೀರೋ ಅದನ್ನು ರಚಿಸುತ್ತೀರಿ. ಬುದ್ಧ ಪೂರ್ಣಿಮಾ ಶುಭಾಶಯಗಳು!
312
Bhudda Quotes-11
ಪ್ರಾರಂಭವಿರುವ ಪ್ರತಿಯೊಂದಕ್ಕೂ ಅಂತ್ಯವಿದೆ. ಈ ವಿಷಯ ಅರಿತು ಸಮಾಧಾನ ಮಾಡಿಕೊಳ್ಳಿ. ಆಗ ಎಲ್ಲವೂ ಚೆನ್ನಾಗಿರುತ್ತದೆ. ಬುದ್ಧ ಪೂರ್ಣಿಮಾ ಶುಭಾಶಯಗಳು!
412
Bhudda Quotes-10
ಸಮಸ್ಯೆಯನ್ನು ಪರಿಹರಿಸಬಹುದಾದರೆ ಚಿಂತೆ ಏಕೆ? ಸಮಸ್ಯೆಯನ್ನು ಪರಿಹರಿಸಲಾಗದಿದ್ದರೆ, ಚಿಂತಿಸುವುದರಿಂದ ಪ್ರಯೋಜನವೇನು? ಬುದ್ಧ ಪೂರ್ಣಿಮಾ ಶುಭಾಶಯಗಳು!
512
Bhudda Quotes-09
ಬುದ್ಧ ಪೂರ್ಣಿಮೆಯಂದು, ಭಗವಾನ್ ಬುದ್ಧನ ದಿವ್ಯ ಕೃಪೆ ಸದಾ ನಿಮ್ಮೊಂದಿಗೆ ಇರಲಿ ಎಂದು ಆಶಿಸುತ್ತೇನೆ. ಬುದ್ಧ ಜಯಂತಿಯ ಶುಭಾಶಯಗಳು!
612
Bhudda Quotes-04
ಬುದ್ಧ ಪೂರ್ಣಿಮೆಯ ಈ ಶುಭ ದಿನದಂದು ನಿಮಗೆ ಹೃತ್ಪೂರ್ವಕ ಶುಭಾಶಯಗಳು! ಬುದ್ಧನ ಜ್ಞಾನ ನಿಮ್ಮ ಬದುಕಿನ ಹಾದಿಗೆ ಬೆಳಕು ತೋರಲಿ.
712
Bhudda Quotes-05
'ಆರೋಗ್ಯವೇ ಶ್ರೇಷ್ಠ ಕೊಡುಗೆ, ನೆಮ್ಮದಿಯೇ ಶ್ರೇಷ್ಠ ಸಂಪತ್ತು, ನಿಷ್ಠೆಯೇ ಉತ್ತಮ ಸಂಬಂಧ'
ಭಗವಾನ್ ಬುದ್ಧನು ಈ ಎಲ್ಲವನ್ನೂ ನಿಮಗೂ ನಿಮ್ಮ ಕುಟುಂಬಕ್ಕೂ ಕರುಣಿಸಲಿ.
812
Bhudda Quotes-07
'ಸಾವು ಮತ್ತು ದುಃಖದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನರು ಜೀವನದಲ್ಲಿ ಸಂತೋಷವನ್ನು ಮಾತ್ರ ನಿರೀಕ್ಷಿಸಿದರೆ, ಅವರು ನಿರಾಶೆಗೊಳ್ಳುತ್ತಾರೆ'
ಬುದ್ಧ ಪೂರ್ಣಿಮೆಯ ಶುಭಾಶಯಗಳು.
912
Bhudda Quotes-08
'ಭೂತಕಾಲದಲ್ಲಿ ನೆಲೆಸಬೇಡಿ, ಭವಿಷ್ಯದ ಕನಸು ಕಾಣಬೇಡಿ, ವರ್ತಮಾನದ ಕ್ಷಣದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ'
ಬುದ್ಧನ ಜ್ಞಾನ ನಿಮ್ಮ ಹಾದಿಗೆ ಬೆಳಕಾಗಲಿ. ಬುದ್ಧ ಪೂರ್ಣಿಮೆಯ ಶುಭಾಶಯಗಳು.
1012
Bhudda Quotes-03
'ನಿಮ್ಮ ಜೀವನದ ಉದ್ದೇಶವೆಂದರೆ ನಿಮ್ಮ ಜೀವನದ ಉದ್ದೇಶವೇನೆಂದು ತಿಳಿಯುವುದು ಹಾಗೂ ಅದನ್ನು ಸಾಧಿಸುವ ಸಲುವಾಗಿ ಮನಸ್ಸು, ಆತ್ಮವನ್ನು ಸಂಪೂರ್ಣ ತೊಡಗಿಸುವುದು'
ಬುದ್ಧ ಪೂರ್ಣಿಮೆಯ ಶುಭಾಶಯಗಳು.
1112
Bhudda Quotes-02
'ನಿಮ್ಮ ಜೀವನವನ್ನು ಮತ್ತೊಬ್ಬರ ಜೀವನದೊಂದಿಗೆ ಹೋಲಿಸಬೇಡಿ. ಸೂರ್ಯ ಮತ್ತು ಚಂದ್ರನನ್ನು ಹೋಲಿಸಲಾಗುವುದಿಲ್ಲ. ಇಬ್ಬರೂ ಅವರವರ ಸಮಯ ಬಂದಾಗ ಬೆಳಗುತ್ತಾರೆ.'
ಬುದ್ಧ ಜಯಂತಿಯ ಶುಭಾಶಯಗಳು.
1212
Bhudda Quotes-01
'ಪ್ರೀತಿ ಎಂಬುದು ಪರಿಪೂರ್ಣವಾಗಿರಬೇಕಿಲ್ಲ. ಅದು ಪ್ರಾಮಾಣಿಕವಾಗಿದ್ದರಷ್ಟೇ ಸಾಕು'