Rashmika Mandanna: ರಶ್ಮಿಕಾ ವಿಜಯ್ ಡೇಟಿಂಗ್ ರೂಮರ್ಸ್ ನಡುವೆ ನ್ಯಾಷನಲ್​ ಕ್ರಶ್ ಪೂಜೆ ವಿಡಿಯೋ ವೈರಲ್‌

First Published | Mar 13, 2024, 12:26 PM IST

ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಡೇಟಿಂಗ್ ರೂಮರ್ಸ್ ನಡುವೆ ಇತ್ತೀಚಿಗೆ ನ್ಯಾಷನಲ್​ ಕ್ರಷ್  ರಶ್ಮಿಕಾ ಖ್ಯಾತ ಜ್ಯೋತಿಷಿ ಜತೆ ಮಾಡಿದ ಪೂಜೆ ವಿಡಿಯೋ ಒಂದು ವೈರಲ್‌ ಆಗಿದೆ.

ಟಾಲಿವುಡ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಚಲೋ ಚಿತ್ರದ ಮೂಲಕ ನಾಯಕಿಯಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾದಲ್ಲೇ ಉತ್ತಮ ಯಶಸ್ಸು ಕಂಡಿದ್ದಾರೆ. ವಿಜಯ್ ದೇವರಕೊಂಡ, ಪ್ರಿನ್ಸ್ ಮಹೇಶ್ ಬಾಬು, ನಿತಿನ್, ಅಲ್ಲು ಅರ್ಜುನ್ ಮುಂತಾದ ಸ್ಟಾರ್ ಹೀರೋಗಳ ಜೊತೆ ನಟಿಸಿ ತಮ್ಮ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ ರಶ್ಮಿಕಾ.

ಬಾಲಿವುಡ್ ಇಂಡಸ್ಟ್ರಿಯಲ್ಲಿಯೂ ಇತ್ತೀಚೆಗಷ್ಟೇ ಅನಿಮಲ್ ಸಿನಿಮಾದ ಮೂಲಕ ಹೆಚ್ಚು ಜನಪ್ರೀಯತೆ ಪಡೆದಿದ್ದಾರೆ. ಸದ್ಯದಲ್ಲೇ ಪುಷ್ಪಾ ಎರಡನೇ ಭಾಗವೂ ಬಿಡುಗಡೆಯಾಗಲಿದೆ. ಇಗಾ ರಶ್ಮಿಕಾ ಮಂದಣ್ಣ ಕುರಿತ ಇಂಟರೆಸ್ಟಿಂಗ್ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

Tap to resize

ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ವೇಣು ಸ್ವಾಮಿ ಸದಾ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡು ಏನೇನೋ ಸಿಡಿಮಿಡಿಗೊಳ್ಳುತ್ತಿರುತ್ತಾರೆ. ಅಲ್ಲದೆ, ವೇಣು ಸ್ವಾಮಿ ಅವರು ಅನೇಕ ನಾಯಕಿಯರಿಗೆ ರಾಜಶ್ಯಾಮಲ ಯಾಗವನ್ನೂ ಮಾಡಿದರು. ಈಗ ರಶ್ಮಿಕಾ ಕೂಡ ವೇಣು ಜೊತೆ ರಹಸ್ಯವಾಗಿ ರಾಜಶ್ಯಾಮಲ ಯಾಗವನ್ನು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
 

ಆದರೆ ಇದೇ ವೇಣು ಸ್ವಾಮಿ ಖಾಸಗಿ ಚಾನೆಲ್​ ಒಂದರ ಸಂದರ್ಶನದಲ್ಲಿ ಮಾತನಾಡಿ , 'ರಶ್ಮಿಕಾ ಹಾಗೂ ವಿಜಯ್ ದೇವರೊಂಡ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟಾಗಿರುವ ವಿಚಾರ ಏನಲ್ಲ. ಅವರಿಬ್ಬರೂ ಮದುವೆಯಾಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ ಎಂಬುದನ್ನು ಕೂಡ ಹೇಳಿದ್ದಾರೆ.

ಸೆಲೆಬ್ರಿಟಿಗಳ ಜ್ಯೋತಿಷಿ ಎಂದು ಕರೆಸಿಕೊಳ್ಳುವ ವೇಣು ಸ್ವಾಮಿ ಯಂಗ್ ರೆಬೆಲ್ ಸ್ಟಾರ್ ಬಗ್ಗೆ ಇತ್ತೀಚೆಗೆ ಅಷ್ಟೆ ಭವಿಷ್ಯವನ್ನು ನುಡ್ಡಿದಿದ್ದಾರೆ. ಪ್ರಭಾಸ್ ಜಾತಕದಲ್ಲಿರುವಂತೆ ಅವರಿಗೆ ಮದುವೆಯಾಗುವುದಿಲ್ಲ ಅವರ ಅದೃಷ್ಟದ ದಿನಗಳು ಮುಗಿಯಿತು. ಅನಾರೋಗ್ಯ ಕಾಣಿಸಿಕೊಳ್ಳುತ್ತೆ ಎಂದು ಹೇಳುವ ಮೂಲಕ ಹೆಚ್ಚು ಸುದ್ದಿಯಲ್ಲಿದ್ದರು.
 

ರಶ್ಮಿಕಾ ಮಾಡಿರುವ ರಾಜಶ್ಯಾಮಲ ಯಾಗವು ಮೂರು ದಿನಗಳ ಕಾಲ ನಡೆಸಲಾಗುತ್ತದೆ ಎಂದು ಹೇಳಲಾಗುತ್ತದೆ. ರಾಜಶ್ಯಾಮಲ ಯಾಗದ ಅಂಗವಾಗಿ ಸೂರ್ಯ ನಮಸ್ಕಾರ, ಮಹಾಲಿಂಗಾರ್ಚನೆ ಸರ್ವ ಗ್ರಹಗಳಿಗೆ ಹೋಮ ಚಂಡಿಕಾಯಾಗವನ್ನು ಮಾಡಲಾಗುತ್ತದೆ.

Latest Videos

click me!