ಪ್ರತಿದಿನ ಶ್ರೀ ರಾಮ್ ಚಾಲೀಸಾ ಪಠಿಸಿ ಈ ಪ್ರಯೋಜನ ಪಡೆಯಿರಿ!

First Published | Jan 22, 2024, 5:34 PM IST

ನೀವು ಹನುಮಾನ್ ಚಾಲೀಸದ ಬಗ್ಗೆ ಕೇಳಿರಬಹುದು, ಅದನ್ನು ಪ್ರತಿದಿನ ಹೇಳಲೂ ಬಹುದು. ಆದರೆ ಯಾವತ್ತಾದರೂ ರಾಮ ಚಾಲೀಸಾವನ್ನು ಓದಿದ್ದೀರಾ? ಈ ಶ್ರೀ ರಾಮ ಚಾಲೀಸವನ್ನು ನಿತ್ಯವೂ ಪಠಿಸಿದರೆ ಹಲವು ಪ್ರಯೋಜನ ಸಿಗುತ್ತೆ. 
 

ಅಯೋಧ್ಯೆ ರಾಮಜನ್ಮಭೂಮಿಯಲ್ಲಿ, ಭಗವಾನ್ ರಾಮ್‌ಲಾಲಾ ತನ್ನ ದೇವಾಲಯದ ಗರ್ಭಗುಡಿಯಲ್ಲಿ ಕುಳಿತಿದ್ದಾನೆ. ಈಗಾಗಲೇ ರಾಮ್ಲಾಲಾ ಅವರ ಪ್ರಾಣ ಪ್ರತಿಷ್ಠಾಪನೆಯೂ ಆಗಿದೆ. ಭಗವಾನ್ ರಾಮನನ್ನು (Lord Rama) ಮೆಚ್ಚಿಸಲು ನೀವು ಬಯಸಿದರೆ, ಶ್ರೀ ರಾಮ್ ಚಾಲೀಸಾವನ್ನು ಪಠಿಸುವುದು ಸುಲಭ ಪರಿಹಾರವಾಗಿದೆ. ಶ್ರೀ ರಾಮ್ ಚಾಲೀಸಾ ಪಠಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
 

ಅಯೋಧ್ಯೆಯ (Ayodhya) ರಾಮಜನ್ಮಭೂಮಿಯಲ್ಲಿ, ಭಗವಾನ್ ರಾಮ್‌ಲಾಲ ತನ್ನ ದೇವಾಲಯದ ಗರ್ಭಗುಡಿಯಲ್ಲಿ ಕುಳಿತಿದ್ದಾನೆ. ಜನವರಿ 22 ರ ಸೋಮವಾರ ರಾಮ್ ದೇವಾಲಯದಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯೂ ಆಗಿದೆ. ರಾಮನ ನಾಮವನ್ನು ಜಪಿಸುವುದರಿಂದ ಕಾಮ, ಕೋಪ, ಲೋಭ ಮತ್ತು ಮಮಕಾರದಿಂದ ಮುಕ್ತಿ ದೊರೆಯುವುದಲ್ಲದೆ, ಜೀವನದ ಕೊನೆಯಲ್ಲಿ ವ್ಯಕ್ತಿಗೆ ಮೋಕ್ಷ ಸಿಗುತ್ತದೆ. 
 

Tap to resize

ನೀವು ಶ್ರೀರಾಮನನ್ನು ಮೆಚ್ಚಿಸಲು ಬಯಸಿದರೆ, ಶ್ರೀ ರಾಮ್ ಚಾಲೀಸಾವನ್ನು (Sri Rama Chalisa) ಪಠಿಸುವುದು ತುಂಬಾನೆ ಒಳ್ಳೆಯದು, ಇದರಿಂದ ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತದೆ. ಪ್ರತಿದಿನ ಈ ಚಾಲೀಸಾವನ್ನು ಪಠಿಸುವ ಮೂಲಕ, ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ ಮತ್ತು ಭಗವಾನ್ ರಾಮಚಂದ್ರನ ಕೃಪೆ ನಿಮ್ಮ ಮೇಲೆ ಇರುತ್ತದೆ.
 

ಶ್ರೀ ರಾಮ್ ಚಾಲೀಸಾ ಪಠಣದ 7 ಪ್ರಯೋಜನಗಳು
ಶ್ರೀ ರಾಮ್ ಚಾಲೀಸಾವನ್ನು ಪಠಿಸುವ ವ್ಯಕ್ತಿಯು ರಾಮನಿಗೆ ಪ್ರಿಯನಾಗುತ್ತಾನೆ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ ಶ್ರೀರಾಮನಾಮ ಪಠಿಸುವವನಿಗೆ ವೈಕುಂಠದಲ್ಲಿ ಸ್ಥಾನ ಸಿಗುತ್ತದೆ ಎಂದು ಸಹ ಹೇಳಲಾಗುತ್ತದೆ. 

ನೀವು ಶ್ರೀರಾಮನ ಘನತೆಯ ಬೋಧನೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಿಮ್ಮ ಹಣೆಬರಹ ಬದಲಾಗುತ್ತದೆ. ಶ್ರೀ ರಾಮ್ ಚಾಲೀಸಾ ಪಠಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಶ್ರೀ ರಾಮ್ ಚಾಲೀಸಾ ಪಠಣ ಮಾಡುವುದರಿಂದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸಿಗೆ (success) ಕಾರಣವಾಗುತ್ತದೆ.

ಭಗವಾನ್ ಶ್ರೀ ರಾಮನ ಆಶೀರ್ವಾದದಿಂದ (blessings of Rama), ಒಬ್ಬ ವ್ಯಕ್ತಿಯು ತನ್ನ ಶತ್ರುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾನೆ. ರಾಮನ ಆಶ್ರಯಕ್ಕೆ ಹೋದವನು ತನ್ನ ಎಲ್ಲಾ ದುಃಖಗಳನ್ನು ಮರೆತು ಬಿಡುತ್ತಾನೆ, ನೆಮ್ಮದಿಯನ್ನು ಕಾಣುತ್ತಾನೆ.

ಶ್ರೀ ರಾಮ್ ಚಾಲೀಸಾವನ್ನು ಪಠಿಸುವುದರಿಂದ ಹನುಮಂತನೂ ಸಂತೋಷಪಡುತ್ತಾರೆ. ಇದರಿಂದ ಹನುಮಂತನ ಆಶೀರ್ವಾದವೂ ನಿಮ್ಮ ಮೇಲೆ ಬೀಳಲಿದ್ದು, ನಿಮ್ಮನ್ನು ತೊಂದರೆಗಳಿಂದ ರಕ್ಷಿಸುತ್ತವೆ.

ರಾಮ್ ಚಾಲೀಸಾವನ್ನು ಓದುವುದರಿಂದ ಒತ್ತಡವನ್ನು (Stress) ನಿವಾರಿಸುತ್ತದೆ ಮತ್ತು ಮಾನಸಿಕ ಶಾಂತಿಯನ್ನು ತರುತ್ತದೆ. ನಿಮ್ಮೊಳಗಿನ ದುಷ್ಟತನವು ಕ್ರಮೇಣ ಕೊನೆಗೊಳ್ಳುತ್ತದೆ.
 

ಶ್ರೀ ರಾಮ್ ಚಾಲೀಸಾ ಪಠಣವು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅದೃಷ್ಟ ಕೂಡ ಬಲವಾಗುತ್ತದೆ. ಅಷ್ಟೇ ಯಾಕೆ ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಕೂಡ ಹೆಚ್ಚಾಗುತ್ತದೆ.

ಪ್ರತಿದಿನ ರಾಮ್ ಚಾಲೀಸಾವನ್ನು ಪಠಿಸುವುದರಿಂದ ಮನೆಯಲ್ಲಿ ತೊಂದರೆ ಉಂಟಾಗುವುದಿಲ್ಲ.  ಕುಟುಂಬದಲ್ಲಿ ಪ್ರೀತಿ ಹೆಚ್ಚುತ್ತದೆ. ಮನೆಯಲ್ಲಿ ನೆಮ್ಮದಿ, ಆರೋಗ್ಯ ಹೆಚ್ಚಾಗುತ್ತದೆ.

Latest Videos

click me!