ಶುಕ್ರನ ಕೃಪೆ; ಮುಂದಿನ 6 ತಿಂಗಳು 5 ರಾಶಿಗಳು ಮುಟ್ಟಿದ್ದೆಲ್ಲಾ ಚಿನ್ನ; ಸಿರಿತನ, ಐಶ್ವರ್ಯ

Published : Jul 15, 2026, 03:42 PM IST

ಶುಕ್ರನ ಸಂಚಾರದಿಂದಾಗಿ ಕಟಕ, ಮೇಷ, ಮೀನ, ಕನ್ಯಾ, ಮತ್ತು ವೃಷಭ ರಾಶಿಗಳಿಗೆ ಮುಂದಿನ ಆರು ತಿಂಗಳು ಅತ್ಯಂತ ಶುಭಪ್ರದವಾಗಿದೆ. ಈ ಅವಧಿಯಲ್ಲಿ ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವೃತ್ತಿಯಲ್ಲಿ ಯಶಸ್ಸು, ಮತ್ತು ಕೌಟುಂಬಿಕ ಸಂತೋಷ ಸೇರಿದಂತೆ ಹಲವು ಸಕಾರಾತ್ಮಕ ಫಲಗಳು ಲಭಿಸಲಿವೆ.

PREV
16
ಶುಕ್ರನ ಸಂಚಾರ

ಶುಕ್ರನ ಸಂಚಾರದಿಂದಾಗಿ 6 ರಾಶಿಗಳಿಗೆ ಮುಂದಿನ ಆರು ತಿಂಗಳು ಅತ್ಯಂತ ಶುಭಪ್ರದವಾಗಿದೆ. ಈ ಅವಧಿಯಲ್ಲಿ ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ವೃತ್ತಿಯಲ್ಲಿ ಯಶಸ್ಸು, ಮತ್ತು ಕೌಟುಂಬಿಕ ಸಂತೋಷ ಸೇರಿದಂತೆ ಹಲವು ಸಕಾರಾತ್ಮಕ ಫಲಗಳು ಲಭಿಸಲಿವೆ.

26
ಕಟಕ ರಾಶಿ

ಕಟಕ ರಾಶಿಯವರಿಗೆ ಶುಕ್ರನ ಅನುಗ್ರಹ ಅತ್ಯುತ್ತಮವಾಗಿ ಸಿಗಲಿದೆ. ಆರ್ಥಿಕ ಸ್ಥಿತಿಯಲ್ಲಿದ್ದ ಹಿನ್ನಡೆ ದೂರವಾಗಿ, ಪ್ರಗತಿ ಕಾಣಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ವಿವಾಹ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಹೂಡಿಕೆಗಳು ಉತ್ತಮ ಲಾಭವನ್ನು ತಂದುಕೊಡುತ್ತವೆ. ನಿಮ್ಮ ವ್ಯಕ್ತಿತ್ವ ವಿಕಸನಗೊಂಡು, ಇತರರ ಬೆಂಬಲ ನಿಮಗೆ ಸುಲಭವಾಗಿ ಸಿಗುತ್ತದೆ.

36
ಮೇಷ ರಾಶಿ

ಮೇಷ ರಾಶಿಯವರಿಗೆ ಈ 6 ತಿಂಗಳು ಸುವರ್ಣಯುಗ ಎನ್ನಬಹುದು. ಶುಕ್ರನು ನಿಮ್ಮ ರಾಶಿಗೆ ಅನುಕೂಲಕರ ಸ್ಥಿತಿಯಲ್ಲಿ ಸಂಚರಿಸುವುದರಿಂದ, ಬಹಳ ದಿನಗಳಿಂದ ನಿಂತಿದ್ದ ಹಣಕಾಸಿನ ಹರಿವು ಹೆಚ್ಚಾಗಲಿದೆ. ಹೊಸ ವ್ಯಾಪಾರ ಪ್ರಯತ್ನಗಳು ಲಾಭ ತರುತ್ತವೆ. ಪ್ರೇಮ ಸಂಬಂಧಗಳಲ್ಲಿದ್ದ ಸಮಸ್ಯೆಗಳು ದೂರವಾಗಿ, ಸಂಗಾತಿಯೊಂದಿಗೆ ಬಾಂಧವ್ಯ ಗಟ್ಟಿಗೊಳ್ಳಲಿದೆ. ಐಷಾರಾಮಿ ವಾಹನಗಳನ್ನು ಖರೀದಿಸುವ ಯೋಗವಿದೆ.

46
ಮೀನ ರಾಶಿ

ಮೀನ ರಾಶಿಯವರಿಗೆ ಶುಕ್ರನು ಶುಬಫಲವನ್ನು ನೀಡುವುದರಿಂದ, ಇದು ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ. ಹಠಾತ್ ಅದೃಷ್ಟ ನಿಮ್ಮನ್ನು ಹುಡುಕಿ ಬರಲಿದೆ. ಆಸ್ತಿ ಮತ್ತು ಆಭರಣಗಳ ಖರೀದಿ ಯೋಗವಿದೆ. ಪ್ರೇಮ ಜೀವನವು ತುಂಬಾ ಮಧುರವಾಗಿರಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ ಮತ್ತು ಸ್ಥಾನಮಾನ ಹೆಚ್ಚಾಗಲಿದೆ. ಇಷ್ಟವಾದ ಸ್ಥಳಗಳಿಗೆ ಪ್ರಯಾಣಿಸುವ ಅವಕಾಶಗಳು ಸಿಗುತ್ತವೆ.

56
ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ಶುಕ್ರ ಸಂಚಾರದ ಅವಧಿಯು ಅದೃಷ್ಟವನ್ನು ತಂದುಕೊಡಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಕಚೇರಿಯಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ರೀತಿ ಮತ್ತು ವೈವಾಹಿಕ ಸಂಬಂಧಗಳಲ್ಲಿ ಹೊಸ ಉತ್ಸಾಹ ಮೂಡಲಿದೆ. ನಿಮ್ಮ ಬಹುಕಾಲದ ಕನಸುಗಳು ಮತ್ತು ಗುರಿಗಳು ಈಡೇರಲು ಪ್ರಾರಂಭಿಸುತ್ತವೆ. ಹಣದ ಹರಿವು ಧಾರಾಳವಾಗಿರುತ್ತದೆ.

66
ವೃಷಭ ರಾಶಿ

ಶುಕ್ರನನ್ನು ಅಧಿಪತಿಯಾಗಿ ಹೊಂದಿರುವ ವೃಷಭ ರಾಶಿಯವರಿಗೆ ಈ ಸಮಯವು ದೊಡ್ಡ ರಾಜಯೋಗವನ್ನು ನೀಡುತ್ತದೆ. ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ಕಲೆ ಮತ್ತು ಸೃಜನಶೀಲ ವೃತ್ತಿಯಲ್ಲಿರುವವರಿಗೆ ಇದು ಅತ್ಯುತ್ತಮ ಸಮಯ. ಆದಾಯವು ಹಲವು ಮೂಲಗಳಿಂದ ಹರಿದುಬರಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಐಷಾರಾಮಿ ವಸ್ತುಗಳ ಮೇಲಿನ ಆಸಕ್ತಿ ಹೆಚ್ಚಾಗಿ, ಅವುಗಳನ್ನು ಖರೀದಿಸುವಷ್ಟು ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Read more Photos on
click me!

Recommended Stories