ಮಕ್ಕಳಿಗೆ ಹೆಸರಿಡುವಾಗ ಜನ್ಮ ದಿನಾಂಕ, ಸಮಯ, ಗಳಿಗೆಗಳನ್ನು ಪರಿಗಣಿಸಲಾಗುತ್ತದೆ. ಹೆಸರಿನ ಮೊದಲ ಅಕ್ಷರವು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಅಕ್ಷರಗಳು ಗಂಡನ ಮನೆಗೆ ಅದೃಷ್ಟ ಮತ್ತು ಸಮೃದ್ಧಿ ತರುತ್ತವೆ.
ಹುಟ್ಟಿದ ಮಗುವಿಗೆ ಹೆಸರಿಡಲು ಪೋಷಕರು ತುಂಬಾ ಯೋಚನೆ ಮಾಡ್ತಾರೆ. ಜನ್ಮ ದಿನಾಂಕ, ಸಮಯ, ಗಳಿಗೆ ಸೇರಿದಂತೆ ಹಲವು ವಿಷಯಗಳನ್ನು ಪರಿಗಣಿಸಿ ಜ್ಯೋತಿಷಿಗಳ ಸಲಹೆಯನ್ನಾಧರಿಸಿ ಮಗುವಿಗೆ ಹೆಸರಿಡಲಾಗುತ್ತದೆ. ಯಾವ ಹೆಸರು ಎಂಬುದರ ಬಗ್ಗೆ ಕುಟುಂಬಗಳಲ್ಲಿ ಚರ್ಚೆ ನಡೆಯುತ್ತದೆ. ಹೆಸರು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಾಗಿ ನಾಮಕರಣ ಶಾಸ್ತ್ರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.
27
ಹೆಸರಿನ ಮೊದಲ ಅಕ್ಷರ
ಹೆಸರಿನ ಮೊದಲ ಅಕ್ಷರಕ್ಕೆ ಪ್ರತಿಯೊಂದು ರೀತಿಯ ಫಲಗಳಿರುತ್ತವೆ ಈ ಫಲಗಳು ಭವಿಷ್ಯದಲ್ಲಿ ಶುಭವನ್ನುಂಟು ಮಾಡುತ್ತವೆ. ಹಾಗಾಗಿ ಮದುವೆಗೆ ಹೆಣ್ಣು-ಗಂಡು ನೋಡುವಾಗ ಹೆಸರು ಏನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.
37
ಹುಡುಗಿಯ ಹೆಸರು
ಹುಡುಗಿಯ ಹೆಸರು ಹುಟ್ಟಿದ ಮತ್ತು ಗಂಡನ ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತದೆ. ಆದ್ದರಿಂದ ಅಂತಹ ಒಳ್ಳೆಯ ಹೆಸರುಗಳನ್ನು ಮಕ್ಕಳಿಗೆ ಇರಿಸಬೇಕು. ಕೆಲ ಹೆಸರುಗಳು ಗಂಡನಿಗೆ ಅದೃಷ್ಟವನ್ನು ತರುತ್ತವೆ. ಹಾಗೆ ತವರುಮನೆಯಲ್ಲಿ ಸಮೃದ್ಧಿ ನೆಲೆಸುವಂತೆ ಮಾಡುತ್ತವೆ. ಕೆಲವು ಅಕ್ಷರ ಹೆಸರಿನ ಮಹಿಳೆಯರು ಗಂಡನ ಮನೆಗೆ ಅದೃಷ್ಟದ ಜೊತೆ ಆರ್ಥಿಕ ಲಾಭ ತೆಗೆದುಕೊಂಡು ಬರುತ್ತಾರೆ. ಆ ಆಕ್ಷರಗಳು ಯಾವವು ಎಂದು ನೋಡೋಣ ಬನ್ನಿ.
ಜ್ಯೋತಿಷ್ಯದ ಪ್ರಕಾರ, 'A' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು ಕಠಿಣ ಪರಿಶ್ರಮಿಗಳಾಗಿರುತ್ತಾರೆ. ಈ ಹೆಸರಿನ ಹುಡುಗಿಯರು ಸಮರ್ಪಣೆ, ನಾಯಕತ್ವದ ಗುಣ ಹೊಂದಿರುತ್ತಾರೆ. ಕುಟುಂಬವನ್ನು ಸಂತೋಷವಾಗಿಡಲು ತಮ್ಮಿಂದಾದ ಎಲ್ಲವನ್ನೂ ಶ್ರಮವನ್ನು ಹಾಕುತ್ತಾರೆ. ಮುಖ್ಯವಾಗಿ ಇವರು ತಮ್ಮ ಜೀವನ ಸಂಗಾತಿಗೆ ಅದೃಷ್ಟ ದೇವತೆಯಾಗಿರುತ್ತಾರೆ.
57
L ಅಕ್ಷರ
L ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳ ಹುಡುಗಿಯರು ಸ್ವಾಭಾವಿಕವಾಗಿ ಪ್ರೀತಿಯುಳ್ಳವರು ಮತ್ತು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಕಠಿಣ ಪರಿಶ್ರಮಕ್ಕೆ ಆದ್ಯತೆಯನ್ನು ನೀಡುವ ಇವರು ಸಂತೋಷವನ್ನು ತಮ್ಮೊಂದಿಗೆ ಇರಿಸಿಕೊಂಡಿರುತ್ತಾರೆ. ಗಂಡನಿಗೆ ಮಾತ್ರವಲ್ಲ, ಅತ್ತೆಗೂ ಸಹ ಇವರು ಅದೃಷ್ಟವಂತರು. ಸ್ಪಷ್ಟ ಚಿಂತನೆಯಳ್ಳ ಇವರು ಎಲ್ಲಾ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಂಡು ಯಶಸ್ವಿಯಾಗುತ್ತಾರೆ. ಎಲ್ ಅಕ್ಷರ ಮಹಿಳೆಯರು ಯಾವಾಗಲೂ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿರುತ್ತಾರೆ.
67
S ಅಕ್ಷರ
S ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳ ಹುಡುಗಿಯರು ಸಹಜವಾಗಿ ಸೌಂದರ್ಯವತಿಯರಾಗಿರುತ್ತಾರೆ. ತಮ್ಮ ಸುತ್ತಲಿನ ಎಲ್ಲರ ಅಗತ್ಯಗಳನ್ನು ಅರ್ಥಮಾಡಿಕೊಂಡು, ಅದನ್ನು ಪೂರೈಸುವ ಕೆಲಸವನ್ನು ಮಾಡುತ್ತಾರೆ. ಎಸ್ ಅಕ್ಷರದವರು ಹುಟ್ಟಿದ ಮತ್ತು ಗಂಡನ ಮನೆಗೂ ಅದೃಷ್ಟ ದೇವತೆಯಾಗಿರುತ್ತಾರೆ. ಇವರಲ್ಲಿ ಮೋಸ ಮಾಡುವ ಗುಣ ಇರಲ್ಲ.
ಜ್ಯೋತಿಷ್ಯದಲ್ಲಿ P ಅಕ್ಷರವು ಶುಭಕರವೆಂದು ಪರಿಗಣಿಸಲ್ಪಟ್ಟಿದೆ. P ಅಕ್ಷರದ ಹೆಸರುಳ್ಳ ಹುಡುಗಿಯರು ತಮ್ಮ ಗಂಡಂದಿರಿಗೆ ಅದೃಷ್ಟವಂತರು. ಇದಲ್ಲದೆ ತಮ್ಮ ಕುಟುಂಬದ ಸಂಪತ್ತನ್ನು ದ್ವಿಗುಣಗೊಳಿಸುತ್ತಾರೆ. ಇವರ ಆಗಮನದಿಂದ ಮನೆಯಲ್ಲಿ ಯಾವುದೇ ಅರ್ಥಿಕ ಸಮಸ್ಯೆಗಳು ಎದುರಾಗಲ್ಲ.