ಲಕ್ಷ್ಮೀದೇವಿಯ ಕೃಪೆಗಾಗಿ ದೊಡ್ಡ ಹೋಮಗಳ ಬದಲಾಗಿ ಸಂಜೆ ಹೊಸ್ತಿಲ ಪೂಜೆ ಮಾಡುವುದು ಶ್ರೇಷ್ಠ ಎಂದು ಜ್ಯೋತಿಷಿ ಗೌರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ. ಹೊಸ್ತಿಲ ಪೂಜೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಲಕ್ಷ್ಮೀದೇವಿ ಆಶೀರ್ವಾದಕ್ಕಾಗಿ ಕೆಲವರು ದೊಡ್ಡ ದೊಡ್ಡ ಹೋಮ, ಪೂಜೆಗಳನ್ನು ಮಾಡುತ್ತಾರೆ. ಹಾಗೆಯೇ ಕೆಲವರು ವಾಸ್ತು ಪ್ರಕಾರ, ಮನೆಯ ವಿನ್ಯಾಸವನ್ನೇ ಬದಲಿಸಿಕೊಳ್ಳುತ್ತಾರೆ. ಇನ್ನು ಕೆಲವರು ಜ್ಯೋತಿಷಿಗಳ ಬಳಿಗೆ ತೆರಳಿ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಕರ್ನಾಟಕದ ಪ್ರಸಿದ್ಧ ಆಯುರ್ವೇದ ವೈದ್ಯೆ, ಜ್ಯೋತಿಷಿಯಾಗಿರುವ ಗೌರಿ ಸುಬ್ರಹ್ಮಣ್ಯ (ಗೌರಿ ಅಮ್ಮ) ಅವರು ಸರಳ ಉಪಾಯವೊಂದನ್ನು ಹೇಳಿದ್ದಾರೆ.
25
ಲಕ್ಷ್ಮೀದೇವಿಯನ್ನು ಪ್ರಸನ್ನ ಮಾಡೋದು
ಏಷ್ಯಾನೆಟ್ ಸುವರ್ಣನ್ಯೂಸ್‌ನ ಜ್ಯೋತಿರ್ಗಮಯ ಕಾರ್ಯಕ್ರಮದಲ್ಲಿ ಲಕ್ಷ್ಮೀ ದೇವಿ ಕೃಪೆಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಸಣ್ಣ ಸಲಹೆಯೊಂದನ್ನು ಗೌರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ. ವಿಶೇಷವಾಗಿ ಸಂಜೆ ಈ ಸರಳ ವಿಧಾನ ಅನುಸರಿಸೋದರಿಂದ ಮನೆಗೆ ಲಕ್ಷ್ಮೀ ದೇವಿ ಆಗಮಿಸುತ್ತಾಳೆ. ಈ ಒಂದು ವಸ್ತುವಿನಿಂದ ಲಕ್ಷ್ಮೀ ದೇವಿ ಪ್ರಸನ್ನನಾಗುತ್ತಾಳೆ ಎಂದು ಗೌರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
35
ಹೊಸ್ತಿಲ ಪೂಜೆ
ಸಾಮಾನ್ಯವಾಗಿ ಬೆಳಗಿನ ಜಾವ ಮತ್ತು ಸಂಜೆ ಮನೆಯ ಮುಖ್ಯದ್ವಾರದ ಹೊಸ್ತಿಲ ಪೂಜೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬ್ಯುಸಿ ಶೆಡ್ಯೂಲ್‌ನಲ್ಲಿ ಕೆಲವರು ಸಂಜೆಯ ಪೂಜೆಯನ್ನು ಸ್ಕಿಪ್ ಮಾಡುತ್ತಾರೆ. ಸೂರ್ಯೋದಯಕ್ಕೆ ಮೊದಲು ಮತ್ತು ಸಂಜೆ ಗೋಧುಳಿ ಲಗ್ನದಲ್ಲಿ ಹೊಸ್ತಿಲ ಪೂಜೆಯನ್ನು ಮಾಡುತ್ತಾರೆ. ಸಮಯದ ಅಭಾವದಿಂದ ಹೊಸ್ತಿಲನ್ನು ನೀರಿನಿಂದ ತೊಳೆದು ಅರಿಶಿನ ಕುಂಕಮ ಹಚ್ಚಿ, ಅಗರಬತ್ತಿ ಬೆಳಗಿ ಪೂಜೆಯನ್ನು ಮುಗಿಸುತ್ತಾರೆ.
ಹೊಸ್ತಿಲಿನ ಪೂಜೆ ಮಾಡುವಾಗ ಅದು ಸಂಜೆ ಸಮಯದಲ್ಲಿ ಪರಿಮಳಯುಕ್ತವಾದ ಹೂ ಇರಿಸಬೇಕು ಎಂದು ಗೌರಿ ಸುಬ್ರಹ್ಮಣ್ಯ ಸಲಹೆ ನೀಡುತ್ತಾರೆ. ಒಂದೇ ಒಂದು ಹೂವನ್ನಿಟ್ಟರು ಸಾಕು. ಹೂ ಪರಿಮಳ ಹೊಂದಿರಬೇಕು. ಈ ಪರಿಮಳದಿಂದ ಲಕ್ಷ್ಮೀದೇವಿ ಆಕರ್ಷಿತಳಾಗಿ ಮನೆ ಪ್ರವೇಶಿಸುತ್ತಾಳೆ. ಗಾಢವಾದ ವಾಸನೆ ಪಸರಿಸುವ ಮಲ್ಲಿಗೆ, ಸೇವಂತಿಗೆ ಅಂತಹ ಹೂವನ್ನಿಟ್ಟು ಹೊಸ್ತಿಲ ಪೂಜೆ ಮಾಡುವಂತೆ ಗೌರಿ ಸುಬ್ರಹ್ಮಣ್ಯ ಹೇಳಿದ್ದಾರೆ.
55
ಮನೆ ಸ್ವಚ್ಛತೆ
ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಯಾರ ಮನೆಯು ಸ್ವಚ್ಛವಾಗಿರುತ್ತೆ ಅಲ್ಲಿಗೆ ಲಕ್ಷ್ಮೀ ದೇವಿಯ ಆಗಮನವಾಗುತ್ತದೆ. ಮನೆಯನ್ನು ವಾಸ್ತು ಪ್ರಕಾರ, ಕಟ್ಟಿಕೊಂಡ್ರೆ ಮಾತ್ರ ಸಾಲದು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳೋದು ಅಷ್ಟೇ ಪ್ರಮುಖವಾಗಿರುತ್ತದೆ.