ಮ್ಯಾನ್ಮಾರ್‌ನಲ್ಲಿ ಭೂಕಂಪ
ಶುಕ್ರವಾರ ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಜನರು ತತ್ತರಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಸಾವಿನ ಸಂಖ್ಯೆ 1,000ಕ್ಕೂ ಅಧಿಕವಾಗಿದೆ. ಇನ್ನು ಗಾಯಗೊಂಡವರ ಸಂಖ್ಯೆ 2500ಕ್ಕೆ ಏರಿಕೆಯಾಗಿದೆ. ಆಪ್ತರಿಗಾಗಿ ಹುಡುಕಾಟ ತೀವ್ರಗೊಂಡಿದೆ. ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲಾಗುತ್ತಿದೆ. ಈ ಭೂಕಂಪದಿಂದ ಆದ ಸಾವು ನೋವು ತಪ್ಪಿಸಬಹುದಿತ್ತೆ?
ಭೂಕಂಪದ ಮುನ್ಸೂಚನೆ
ಮ್ಯಾನ್ಮಾರ್‌ನ ಈ ಭೂಕಂಪದ ಬಗ್ಗೆ ಮೊದಲೇ ಮುನ್ಸೂಚನೆ ನೀಡಲಾಗಿತ್ತು. ಹೌದು ಮ್ಯಾನ್ಮಾರ್, ಥಾಯ್ಲೆಂಡ್ ಭೂಕಂಪದ ಕರಿತು ಮುನ್ಸೂಚನೆ ನೀಡಿದವರು ಕಿರಿಯ ಜ್ಯೋತಿಷಿ ಅಭಿಜ್ಞ ಆನಂದ್. ಭವಿಷ್ ನುಡಿಯುವದರಲ್ಲಿ ನಿಖತರೆ ಸಾಧಿಸಿರುವ ಅಭಿಜ್ಞ ಆನಂದ್ ಈ ಬಾರಿ ನುಡಿದ ಭವಿಷ್ಯ ಕೂಡ ನಿಜವಾಗಿದೆ.
ಯಾರು ಅಭಿಜ್ಞ ಆನಂದ್
ಅಭಿಜ್ಞ ಆನಂದ್‌ಗೆ ಕೇವಲ 20 ವರ್ಷ ವಯಸ್ಸು. ಅವರು ತಮ್ಮನ್ನು ತ್ರಿಕಾಲಜ್ಞ ಅಂತಾನೂ ಹೇಳಿಕೊಳ್ತಾರೆ. ಅವರು 21 ದಿನಗಳ ಮೊದಲೇ ಒಂದು ದೊಡ್ಡ ಅನಾಹುತ ಆಗಬಹುದು ಎಂದು ಭವಿಷ್ಯ ನುಡಿದಿದ್ದರು. ಈ ದೊಡ್ಡ ಅನಾಹುತದಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದ್ದರು.
ವಿಡಿಯೋ ಅಪ್‌ಲೋಡ್
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ವಿಪತ್ತು ಸಂಭವಿಸುವ 21 ದಿನಗಳ ಮೊದಲೇ ಅಭಿಜ್ಞ ಆನಂದ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ವಿಡಿಯೋ ಅಪ್‌ಲೋಡ್ ಮಾಡಿದ್ರು. ಅದ್ರಲ್ಲೇ ಅವರು ಭೂಕಂಪದ ಮುನ್ಸೂಚನೆ ನೀಡಿದ್ದರು. ನುಡಿದ ಭವಿಷ್ಯ ನಿಜವಾಗಿದೆ. ನಿಖರವಾಗಿ ಭೂಕಂಪದ ಸೂಚನೆಯನ್ನು ಹಾಗೂ ಸ್ಥಳವನ್ನು ಸೂಚಿಸಿದ್ದರು.
ಅಭಿಜ್ಞ ಆನಂದ್ ಹೇಳಿಕೆ
ಈ ವರ್ಷದ ಮಾರ್ಚ್ 1 ರಂದು ಅಭಿಜ್ಞ ಆನಂದ್ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ವಿಡಿಯೋ ಅಪ್‌ಲೋಡ್ ಮಾಡಿದ್ರು. ಅದ್ರಲ್ಲೇ ಅವರು ಮುನ್ಸೂಚನೆ ನೀಡಿದ್ರು. ಮೂರು ವಾರಗಳ ನಂತರ ಮ್ಯಾನ್ಮಾರ್ ನಡುಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಅಭಿಜ್ಞ ಆನಂದ್ ಹೇಳಿದಂತೆ ಮ್ಯಾನ್ಮಾರ್ ನಡುಗಿದೆ. ಕಟ್ಟಡಗಳು ಧರೆಗುರುಳಿದೆ. ಅಪಾರ ಸಾವು ನೋವು ಸಂಭವಿಸಿದೆ.
ಅಭಿಜ್ಞ ಅವರ ಪರಿಚಯ
ಅಭಿಜ್ಞ ಆನಂದ್ ಕರ್ನಾಟಕ ಮೂಲದವರು. ಜ್ಯೋತಿಷಿಯಾಗಿ ಗುರುತಿಸಿಕೊಂಡಿದ್ದಾರೆ. ಕೇವಲ 7 ವರ್ಷಕ್ಕೆ ಭಗವದ್ಗೀತೆಯನ್ನ ಕಂಠಪಾಠ ಮಾಡಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜ್ಯೋತಿಷ್ಯದಲ್ಲಿ ಅಪಾರ ಜ್ಞಾನವನ್ನು ಪಡೆದಿದ್ದಾರೆ. ಪ್ರಮುಖ ಗಂಡಾಂತರ, ಅವಘಡಗಳ ಬಗ್ಗೆ ಅಭಿಜ್ಞ ಮೊದಲೇ ಮುನ್ಸೂಚನೆ ನೀಡಿದ್ದಾರೆ. ಪ್ರಮುಖವಾಗ ಅಭಿಜ್ಞ ಹೇಳಿದ ಭವಿಷ್ಯ ನಿಜವಾಗಿದೆ.
ಸಂಸ್ಕೃತ ಅಭ್ಯಾಸ
ಅವರು ಚಿಕ್ಕ ವಯಸ್ಸಿನಿಂದಲೇ ಸಂಸ್ಕೃತ ಅಭ್ಯಾಸ ಮಾಡೋಕೆ ಶುರು ಮಾಡಿದ್ರು. ಅವರ ತಾಯಿ ಅವರಿಗೆ ಪ್ರೋತ್ಸಾಹ ನೀಡಿದ್ರು.ಅವರು 11 ವರ್ಷ ವಯಸ್ಸಿನಿಂದ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅಧ್ಯಯನ ಮಾಡ್ತಿದ್ದಾರೆ. 12 ವರ್ಷ ವಯಸ್ಸಿನಲ್ಲಿ ವಾಸ್ತುಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2018 ರಲ್ಲಿ ಪ್ರಜ್ಞಾ ಜ್ಯೋತಿಷ್ಯ ಅನ್ನೋ ಸಂಸ್ಥೆಯನ್ನ ಸ್ಥಾಪಿಸಿದರು. ಈಗ ಅವರು ಪಾಠ ಮಾಡ್ತಾರೆ.
ಭವಿಷ್ಯ
ಕೋವಿಡ್ ಬರೋಕು ಮುಂಚೆನೇ ಅವರು ಭವಿಷ್ಯ ನುಡಿದಿದ್ರು. ಅಭಿಜ್ಞ ಆನಂದ್ ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಇದೀಗ ಮ್ಯಾನ್ಮಾರ್ ಭೂಕಂಪದ ಕುರಿತು ನೀಡಿದ ಭವಿಷ್ಯ ಕೂಡ ನಿಜವಾಗಿದೆ. ಇದರ ಬೆನ್ನಲ್ಲೇ ಅಭಿಜ್ಞ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆ.