ಸಂಖ್ಯೆ 2..
ಸಂಖ್ಯಾಶಾಸ್ತ್ರದ ಪ್ರಕಾರ ಸಂಖ್ಯೆ 2 ರಂದು ಹುಟ್ಟಿದವರು ತುಂಬಾ ನಂಬಿಗಸ್ತರು. ಅಂದ್ರೆ.. ಯಾವುದೇ ತಿಂಗಳಿನಲ್ಲಿ 2, 11, 20, 29 ರಂದು ಹುಟ್ಟಿದವರೆಲ್ಲರೂ ಸಂಖ್ಯೆ 2 ರ ಕೆಳಗೆ ಬರ್ತಾರೆ. ಇವರನ್ನ ಚಂದ್ರ ಆಳ್ವಿಕೆ ಮಾಡ್ತಾನೆ. ಈ ದಿನಾಂಕಗಳಲ್ಲಿ ಹುಟ್ಟಿದವರು ತುಂಬಾ ಸೂಕ್ಷ್ಮವಾಗಿ, ಸೌಮ್ಯವಾಗಿ ಇರ್ತಾರೆ. ಆದಷ್ಟು ಎಲ್ಲರಿಗೂ ಪ್ರೀತಿ ಹಂಚೋಕೆ ಪ್ರಯತ್ನಿಸ್ತಾರೆ. ಅಷ್ಟೇ ಅಲ್ಲ ಇವರು ತುಂಬಾ ಎಮೋಷನಲ್ ಆಗಿರ್ತಾರೆ. ಯಾವುದೇ ಷರತ್ತುಗಳಿಲ್ಲದೆ ಪ್ರೀತಿಸಬೇಕು ಅಂದ್ರೆ ಅದು ಇವರಿಂದ ಮಾತ್ರ ಸಾಧ್ಯ. ಬೇರೆಯವರಿಂದ ಏನೂ ಆಶಿಸಲ್ಲ. ಅಷ್ಟೇ ಅಲ್ಲ ಈ ದಿನಾಂಕಗಳಲ್ಲಿ ಹುಟ್ಟಿದವರು ತುಂಬಾ ನಂಬಿಗಸ್ತರಾಗಿರ್ತಾರೆ. ಇವರು ಯಾರನ್ನಾದರೂ ಪ್ರೀತಿಸಿದ್ರೆ, ಅಸ್ಸಲಿಗೆ ಬಿಟ್ಟುಕೊಡಲ್ಲ.