Astro Tips: ಹಿಂದೂ ಧರ್ಮದಲ್ಲಿ, ಕಾಲುಗಳ ಮೇಲೆ ಕಾಲುಗಳನ್ನು ಇಟ್ಟು ಮಲಗುವುದು ಅಥವಾ ಕುಳಿತುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ಆಯಸ್ಸು ಕಡಿಮೆಯಾಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಅವುಗಳ ಬಗ್ಗೆ ತಿಳಿಯೋಣ.
ಹಲವು ಜನರಿಗೆ ಕಾಲಿನ ಮೇಲೆ ಕಾಲಿಟ್ಟು ಮಲಗುವ ಮತ್ತು ಕುಳಿತುಕೊಳ್ಳುವ ಅಭ್ಯಾಸ ಇರುತ್ತೆ.. ಚೇರ್ ಮೇಲೆ ಕುಳಿತರೆ ಸಾಕು ಕಾಲಿನ ಮೇಲೆ ಕಾಲು ಹಾಕ್ತಾರೆ. ಆದರೆ ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ಇದನ್ನು ತ್ರಿಭಂಗಿ ಸ್ಥಿತಿ ಎಂದು ಕರೆಯಲಾಗುತ್ತದೆ.
26
ಈ ಸ್ಥಿತಿಯನ್ನು ಅಶುಭವೆಂದು ಏಕೆ ಪರಿಗಣಿಸಲಾಗುತ್ತದೆ?
ಹಿಂದೂ ಧರ್ಮದಲ್ಲಿ, ಕೆಟ್ಟ ಮತ್ತು ಅಶುಭವೆಂದು ಪರಿಗಣಿಸಲಾದ ಅನೇಕ ಸ್ಥಿತಿಗಳಿವೆ. ಈ ತ್ರಿಭಂಗಿ ಸ್ಥಿತಿ ಅವುಗಳಲ್ಲಿ ಒಂದು. ಇದರ ಹಿಂದಿನ ಧಾರ್ಮಿಕ ಕಾರಣಗಳನ್ನು ತಿಳಿಯೋಣ.
36
ಶ್ರೀಕೃಷ್ಣನೊಂದಿಗಿನ ಕನೆಕ್ಷನ್
ಕೃಷ್ಣನು ತನ್ನ ಪಾದಗಳ ಮೇಲೆ ಯಾವಾಗಲೂ ಹೊಳೆಯುವ ರತ್ನವೊಂದನ್ನು ಧರಿಸುತ್ತಿದ್ದನು.. ಒಂದು ದಿನ, ಶ್ರೀಕೃಷ್ಣನು ತ್ರಿಭಂಗಿ ಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಬೇಟೆಗಾರನೊಬ್ಬ ಆ ರತ್ನವನ್ನು ಜಿಂಕೆಯ ಕಣ್ಣು ಎಂದು ತಪ್ಪಾಗಿ ಭಾವಿಸಿ ಬಾಣ ಬಿಟ್ಟನು. ಆ ಬಾಣವು ಶ್ರೀಕೃಷ್ಣನ ಪಾದಗಳಿಗೆ ತಗುಲಿತು.
ಆ ಭೇಟೆಗಾರ ಹೊಡೆದ ಬಾಣದಿಂದಾಗಿ, ಶ್ರೀಕೃಷ್ಣನು ವೈಕುಂಠ ಧಾಮಕ್ಕೆ ತೆರಳಿದನು. ಅಂದಿನಿಂದ, ತ್ರಿಭಂಗಿ ಸ್ಥಿತಿಯಲ್ಲಿ ಮಲಗುವುದು ಅಶುಭವೆಂದು ಹೇಳಲಾಗುತ್ತಿದೆ. ಇದರಿಂದ ಆಯಸ್ಸು ಕಡಿಮೆಯಾಗುತ್ತೆ ಎನ್ನುವ ಮಾತು ಕೂಡ ಇದೆ. .
56
ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ
ಕಾಲುಗಳ ಮೇಲೆ ಕಾಲು ಇಟ್ಟುಕೊಂಡು ಮಲಗುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಸಹ ಹಿಂದೂ ಶಾಸ್ತ್ರದ ಪ್ರಕಾರ ತಪ್ಪು. ಇದರಿಂದ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ.
66
ಕೆಟ್ಟ ಕನಸುಗಳು ಬರುತ್ತವೆ
ಕಾಲಿನ ಮೇಲೆ ಕಾಲು ಇಟ್ಟುಕೊಂಡು ಮಲಗೋದ್ರಿಂದ ಕೆಟ್ಟ ಕನಸುಗಳು ಬರುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ಆ ರೀತಿಯಾಗಿ ಮಲಗುವ ಅಭ್ಯಾಸ ಮಾಡಬೇಡಿ.