ದೇವಸ್ಥಾನದಲ್ಲಿ ಈ ತಪ್ಪು ಮಾಡೋದು ಅಶುಭ ಸೂಚನೆ!

First Published Aug 23, 2023, 7:52 PM IST

ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ಕೈಮುಗಿದು ನಿಂತರೆ, ಮನಸ್ಸು ಶಾಂತವಾಗುತ್ತೆ, ಜೊತೆಗೆ ಮನಸ್ಸಿನ ಎಲ್ಲಾ ಕೆಟ್ಟ ಯೋಚನೆಗಳು ದೂರವಾಗಿ ನೆಮ್ಮದಿ ಸಿಗುತ್ತೆ. ಆದರೆ ದೇಗುಲದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಅಶುಭ ಫಲ ನೀಡುತ್ತೆ. 
 

ದೇವರನ್ನು ಪೂಜೆ ಮಾಡಲು ನಾವೆಲ್ಲರೂ ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಭಕ್ತಿಯಿಂದ ದೇವರನ್ನು ನೆನೆದು ಪೂಜೆ ಮಾಡಿದರೆ, ದೇವರ ಆಶೀರ್ವಾದ ಸಿಗುತ್ತದೆ, ಅಲ್ಲದೇ ಜೀವನದಲ್ಲಿ ಸಕಾರಾತ್ಮಕತೆ (positivity) ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತೆ. ಆದರೆ ದೇಗುಲದಲ್ಲಿ ನಾವು ಮಾಡುವ ತಪ್ಪುಗಳು ನಮ್ಮ ಜೀವನದಲ್ಲಿ ಅಶುಭ ಫಲವನ್ನು ನೀಡುವ ಸಾಧ್ಯತೆಯನ್ನು ಹೆಚ್ಚಿಸುತ್ತೆ.   

ಯಾವುದೇ ಶುಭ ಕೆಲಸಗಳಿರಲಿ, ಮನಸ್ಸಿನಲ್ಲಿ ಯಾವುದೇ ಬೇಡಿಕೆ ಇರಲಿ ಅಥವಾ ನಿಮ್ಮ ಜೀವನ ಕಷ್ಟದಲ್ಲಿ ತುಂಬಿರಲಿ…ಜೀವನದಲ್ಲಿ ಏನೇ ಬಂದರೂ ಸಹ ಮೊದಲು ನೆನಪಾಗೋದು ದೇವರು. ನಾವು ದೇವರ ಸನ್ನಿಧಾನಕ್ಕೆ ತೆರಳಿ ಕೈ ಮುಗಿದು ನಿಂತರೆ, ಸಮಸ್ಯೆ ಪರಿಹಾರವಾದಂತಹ ಭಾವನೆ ಬರುತ್ತೆ. 

Latest Videos


ಈ ತಪ್ಪುಗಳನ್ನು ಮಾಡಬೇಡಿ: ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಲು ದೇಗುಲಕ್ಕೆ ಹೋಗಿ ಪೂಜೆ ಮಾಡುವುದೇನೋ ಸರಿ, ಆದರೆ ದೇಗುಲದಲ್ಲಿ ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ರೆ, ಅದರಿಂದ ಅಶುಭವಾಗುತ್ತೆ. ಅಂತಹ ತಪ್ಪುಗಳನ್ನ (avoid these mistakes in temple) ನಾವು ತಪ್ಪಿ ಕೂಡ ಮಾಡಬಾರದು. 

ಹೀಗೆ ನಿಂತು ಪೂಜೆ ಮಾಡಿ: ನಾವು ಯಾವಾಗಲೂ ದೇಗುಲಕ್ಕೆ ಹೋದಾಗ ದೇವರಿಗೆ ಸರಿಯಾಗಿ ಎದುರುಗಡೆ ನಿಂತು ಕೈಮುಗಿದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಆದರೆ ಯಾವತ್ತೂ ಹಾಗೆ ಮಾಡಲೇಬಾರದು. ಸ್ವಲ್ಪ ಎಡ, ಅಥವಾ ಬಲ ಭಾಗದಲ್ಲಿ ನಿಂತು ದೇವರನ್ನು ಬೇಡಿಕೊಳ್ಳಬೇಕು. 

ಪ್ರದಕ್ಷಿಣೆ ಹಾಕೋದು  (temple pradakshina): ಪ್ರದಕ್ಷಿಣೆ ಹಾಕುವ ಬಗ್ಗೆ ನಿಮಗೆ ಗೊತ್ತೇ ಇರುತ್ತೆ, ಇದರ ಬಗ್ಗೆ ನಾವು ಹೇಳುವ ಅವಶ್ಯಕತೆ ಇಲ್ಲ. ಆದರೂ ದೇಗುಲದಲ್ಲಿ ಪ್ರದಕ್ಷಿಣೆ ಹಾಕುವಾಗ ಎಡಗಡೆಯಿಂದ ಬಲಬದಿಗೆ ಪ್ರದಕ್ಷಿಣೆ ಹಾಕಬೇಕು ಅನ್ನೋದು ನೆನಪಿರಲು. 

ವಾದ ವಿವಾದ ಮಾಡಬೇಡಿ: ಮಂದಿರದಲ್ಲಿ ಭಗವಂತನ ದರ್ಶನವನ್ನು ಶಾಂತ ಮನಸ್ಸಿನಿಂದ ಮಾಡಬೇಕು. ದೇಗುಲಕ್ಕೆ ಬಂದ ನಂತರ ಯಾರೋಂದಿಗೂ ಜಗಳ, ವಾದ, ವಿವಾದದಲ್ಲಿ ತೊಡಗಬಾರದು. ಇದರಿಂದ ನಿಮಗೆ ತೊಂದರೆ ಆಗೋದು ಖಚಿತ. 

ಈ ತಪ್ಪನ್ನು ಮಾಡ್ಲೇಬೇಡಿ: ದೇಗುಲದಲ್ಲಿ ಯಾರಾದ್ರೂ ದೇವರಿಗೆ ಉದ್ಧಂಡ ನಮಸ್ಕಾರ ಹಾಕುತ್ತಿದ್ದರೆ, ಯಾವತ್ತೂ ಅವರ ಎದುರಿನಿಂದ ಪಾಸ್ ಆಗಬೇಡಿ. ಅವರ ಹಿಂದಿನಿಂದ ಬೆಕಾದಲ್ಲಿ ದಾಟಿ ತೆರಳಿ, ಆದರೆ ಮುಂದಿನಿಂದ ದಾಟಿದರೆ ಇದರಿಂದ ನಿಮಗೆ ಅಶುಭವಾಗುತ್ತೆ. 
 

click me!