ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿದ್ರೆ ಆರ್ಥಿಕ ಸಮಸ್ಯೆ ಇರೋದಿಲ್ವಂತೆ !

Published : Aug 23, 2023, 07:04 PM IST

ನಾವು ಜೀವನದಲ್ಲಿ ಅದೆಷ್ಟೇ ಕಷ್ಟ ಪಟ್ಟರೂ ಸಹ ಕೆಲವೊಮ್ಮೆ ಸಮಸ್ಯೆಗಳು ನಮ್ಮನ್ನು ಬಿಟ್ಟೂ ಬಿಡದೆ ಕಾಡುತ್ತವೆ. ಅದಕ್ಕಾಗಿಯೇ ಇಲ್ಲಿ ಒಂದಿಷ್ಟು ವಿಷ್ಯಗಳನ್ನು ತಿಳಿಸಲಾಗಿದೆ. ಅವುಗಳನ್ನು ನೀವು ರಾತ್ರಿ ಮಲಗುವ ಮುನ್ನ ಮಾಡಿದ್ರೆ ಸಮಸ್ಯೆನೇ ಇರೋದಿಲ್ವಂತೆ.   

PREV
18
ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿದ್ರೆ ಆರ್ಥಿಕ ಸಮಸ್ಯೆ ಇರೋದಿಲ್ವಂತೆ !

ರಾತ್ರಿ ಮಲಗುವ ಮೊದಲು(before sleeping) ಈ ಕೆಲಸಗಳನ್ನು ಮಾಡಿ, ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ, ಎಲ್ಲಾ ಕೆಟ್ಟ ಶಕ್ತಿಗಳು ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತೆ. ಜೊತೆಗೆ ನಿಮ್ಮ ಸಮಸ್ಯೆಗಳು ದೂರವಾಗಿ, ಉತ್ತಮ ರೀತಿಯಲ್ಲಿ ನೀವು ಬಾಳಲು ಸಾಧ್ಯವಾಗುತ್ತೆ. ಅದಕ್ಕೇನು ಮಾಡಬೇಕು? 

28

ಅನೇಕ ಜನರು ಆಗಾಗ್ಗೆ ಆಲಸ್ಯ, ಅನಾರೋಗ್ಯ ಮತ್ತು ನಕಾರಾತ್ಮಕ ಶಕ್ತಿಯಿಂದ ಸಮಸ್ಯೆ ಆಗೋ ಬಗ್ಗೆ ಹೇಳುತ್ತಿರುತ್ತಾರೆ. ಒಂದು ಮಿಲಿಯನ್ ಪ್ರಯತ್ನಗಳ ನಂತರವೂ, ಅವರು ಈ ವಿಷಯಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಜನರು ನಕಾರಾತ್ಮಕತೆಯಿಂದ (negativity) ಏಕೆ ಸುತ್ತುವರೆದಿದ್ದಾರೆ. ಇದಕ್ಕೆ ಏನು ಮಾಡಬೇಕು ಅನ್ನೋದನ್ನು ನೋಡೋಣ. 

38

ಬೆಳಿಗ್ಗೆ ಎದ್ದೇಳುವುದರಿಂದ ರಾತ್ರಿ ಮಲಗುವವರೆಗೆ, ನಾವು ಪ್ರತಿದಿನ ಏನು ಮಾಡಿದರೂ ಅದು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಜೀವನದಲ್ಲಿ ಸಂತೋಷವನ್ನು ಬಯಸಿದರೆ, ರಾತ್ರಿ ಮಲಗುವಾಗ ಕೆಲವು ವಿಷಯಗಳನ್ನು ನೋಡಿಕೊಳ್ಳಬೇಕು.
 

48

ಹಣವನ್ನು ಎಣಿಸಿ ನಿದ್ರೆ ಮಾಡಿ (count money): ರಾತ್ರಿ ಮಲಗುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ರಾತ್ರಿ ಮಲಗುವ ಮೊದಲು ಹಣವನ್ನು ಎಣಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. 

58

ಮನೆಯಲ್ಲಿ ಕರ್ಪೂರವನ್ನು ಸುಡಿರಿ: ನೀವು ಯಾವಾಗಲೂ ನಕಾರಾತ್ಮಕ ಆಲೋಚನೆಗಳಿಂದ (negative thinkin) ಸುತ್ತುವರೆದಿದ್ದರೆ, ಪ್ರತಿದಿನ ಮನಸು ಯೋಚನೆಯಲ್ಲಿ ಮುಳುಗುತ್ತಿದ್ದರೆ, ಮಲಗುವ ಮೊದಲು ಮನೆಯಲ್ಲಿ ಕರ್ಪೂರವನ್ನು ಸುಡಿರಿ. ಇದು ಸಕಾರಾತ್ಮಕತೆಯನ್ನು ತರುತ್ತದೆ. 

68

ಭಗವಂತನನ್ನು ಸ್ಮರಿಸಿ (Pray before sleep): ಮಲಗುವ ಮೊದಲು ದೇವರನ್ನು ಸ್ಮರಿಸಿ ಮಲಗೋದು ಶುಭ ಎಂದು ಹೇಳಲಾಗುತ್ತದೆ. ಇದರಿಂದ ಮನಸ್ಸು ಕೂಡ ಶಾಂತವಾಗುತ್ತದೆ. ಅಷ್ಟೇ ಅಲ್ಲ ಇದರಿಂದ ಮನಸ್ಸಿನ ಇಚ್ಚೆಗಳು ಸಹ ಪೂರ್ತಿಯಾಗುತ್ತದೆ.  

78

ಎಂಜಲು ಪಾತ್ರೆ ತೊಳೆದಿಡಿ: ಮಲಗುವ ಮೊದಲು ಎಲ್ಲಾ ಎಂಜಲು ಪಾತ್ರೆಯನ್ನು ತೊಳೆದು ಸ್ವಚ್ಚ ಮಾಡಿಡಿ. ಹಾಗೇ ಬಿಟ್ಟರೆ ಅದರಿಂದ ನಕಾರಾತ್ಮಕ ಶಕ್ತಿ ಮನೆಯಲ್ಲಿ ಆವರಿಸುತ್ತೆ. ಹಾಗಾಗಿ ಯಾವತ್ತೂ ಎಂಜಲು ಪಾತ್ರೆ ತೊಳೆಯದೇ ಇರಬೇಡಿ. 

88

ಮಲಗುವ ದಿಕ್ಕಿನ ಕಡೆಗೆ ಗಮನ ಇರಲಿ: ನೀವು ಮಲಗುವ ದಿಕ್ಕಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಯಾಕಂದ್ರೆ ಮಲಗುವ ಸಮಯದಲ್ಲಿ ಯಾವತ್ತೂ ಕಾಲನ್ನು ಬಾಗಿಲಿನ ಕಡೆಗೆ ಹಾಕಿ ಮಲಗಬೇಡಿ. 

Read more Photos on
click me!

Recommended Stories