ಸ್ನಾನ ಮಾಡ್ತಾ ಮಾಡ್ತ ಕೋಟ್ಯಾಧಿಪತಿಯಾಗೋದು ಹೇಗೆ? ಜ್ಯೋತಿಷಿ ತ್ರಿಶಾಲ ಹೇಳಿದ ಉಪಾಯ ಇಲ್ಲಿದೆ…

Published : Mar 06, 2025, 01:03 PM ISTUpdated : Mar 06, 2025, 01:18 PM IST

ಜನಪ್ರಿಯ ಜ್ಯೋತಿಷಿ ತ್ರಿಶಾಲ ಅವರು ಸ್ನಾನ ಮಾಡುತ್ತಾ, ಕೋಟ್ಯಾಧಿಪತಿಯಾಗೋದು ಹೇಗೆ ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ.   

PREV
19
ಸ್ನಾನ ಮಾಡ್ತಾ ಮಾಡ್ತ ಕೋಟ್ಯಾಧಿಪತಿಯಾಗೋದು ಹೇಗೆ? ಜ್ಯೋತಿಷಿ ತ್ರಿಶಾಲ ಹೇಳಿದ ಉಪಾಯ ಇಲ್ಲಿದೆ…

ಸಂಪತ್ತು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಡೆಯಲು ಬಯಸುವ ವಿಷಯವಾಗಿದೆ. ಆದರೆ, ಅದಕ್ಕಾಗಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವುದು ಅತ್ಯಗತ್ಯ. ಜ್ಯೋತಿಷಿಯಾಗಿರುವ ತ್ರಿಶಾಲಾ ಒಂದು ವಿಧಾನವನ್ನು ಸೂಚಿಸಿದ್ದಾರೆ, ಅದನ್ನು ಅನುಸರಿಸುವ ಮೂಲಕ, ಸ್ನಾನ ಮಾಡುತ್ತಾ ನೀವು ಮಿಲಿಯನೇರ್ ಆಗಬಹುದು.  ಜ್ಯೋತಿಷಿ ತ್ರಿಶಾಲಾ ಹೇಳಿದ ವಿಧಾನ ಯಾವುದು ಅನ್ನೋದನ್ನು ನೋಡೋಣ. 
 

29

ಈ ಭೂಮಿ ಮೇಲಿನ ಪ್ರತಿಯೊಬ್ಬ ಮನುಷ್ಯನೂ ಶ್ರೀಮಂತರಾಗಲು ಬಯಸುತ್ತಾರೆ, ತಮ್ಮ ಜೀವನವನ್ನು ಸುಲಭಗೊಳಿಸಲು ಸಾಕಷ್ಟು ಸಂಪತ್ತನ್ನು ಹೊಂದಲು ಯಾರು ತಾನೆ ಬಯಸುವುದಿಲ್ಲ ಹೇಳಿ? ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸಿದ್ರೆ ನಿಮ್ಮ ಬಯಕೆ ಕೂಡ ಈಡೇರುತ್ತೆ. ಅದಕ್ಕಾಗಿ ಏನು ಮಾಡಬೇಕು ಎಂದು ನೋಡೋಣ. 
 

39

ಜ್ಯೋತಿಷಿ ತ್ರಿಶಾಲಾ (Astrologer Trishla)ಹೇಳಿದ ಪರಿಹಾರ ಏನು?  ನೋಡೋಣ. ಈ ಉಪಾಯವನ್ನು ಅಥವಾ ಪರಿಹಾರವನ್ನು ಎಷ್ಟು ನಂಬಬೇಕು ಮತ್ತು ಎಷ್ಟು ನಂಬಬಾರದು ಅನ್ನೋದು ನಿಮಗೆ ಬಿಟ್ಟಿದ್ದು. ಜ್ಯೋತಿಷಿ ತ್ರಿಶಾಲಾ ಉಲ್ಲೇಖಿಸಿದ ವಿಧಾನದ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ, ಆ ಪರಿಹಾರದಿಂದ ಹಣವನ್ನು ಪಡೆಯಬಹುದು ಎಂದು ಹೇಳಲಾಗಿದೆ. ನೀವೊಮ್ಮೆ ಪ್ರಯತ್ನಿಸಿ ನೋಡಿ.
 

49

ಸ್ನಾನ ಮಾಡುತ್ತಾ ಕೋಟ್ಯಾಧಿಪತಿಯಾಗಬಹುದಂತೆ!
ಜ್ಯೋತಿಷಿ ತ್ರಿಶಾಲ ಸ್ನಾನಕ್ಕೆ ಸಂಬಂಧಿಸಿದ ಒಂದು ವಿಧಾನವನ್ನು ತಿಳಿಸಿದ್ದಾರೆ. ಈ ಸಮಯದಲ್ಲಿ, ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ, ಅದು ನಿಮ್ಮನ್ನು ಲಕ್ಷ್ಮಿ ದೇವಿಯ ಕೃಪೆಗೆ ಅರ್ಹರನ್ನಾಗಿ ಮಾಡುತ್ತದೆ. ಅವರ ವೀಡಿಯೊದ ಪ್ರಕಾರ, ಸ್ನಾನ ಮಾಡುವಾಗ ಮಾಡುವ ಯಾವ ಕೆಲಸ ನಿಮ್ಮನ್ನು ಮಿಲಿಯನೇರ್ ಮಾಡಬಹುದು ಅನ್ನೋದನ್ನು ನೋಡೋಣ. 

59

ಇದಕ್ಕಾಗಿ ಗುಲಾಬಿ ಹೂವಿನ ಅಗತ್ಯವಿರುತ್ತದೆ. ಜ್ಯೋತಿಷಿ ತ್ರಿಶಾಲಾ ಹೇಳಿದ ಪ್ರಕಾರ ಶುಕ್ರವಾರದಂದು ಗುಲಾಬಿ ಹೂವನ್ನು (rose petals) ತೆಗೆದುಕೊಂಡು ಒಂದು ದಳವನ್ನು ಕಿತ್ತು ಪಕ್ಕಕ್ಕೆ ಇಡಬೇಕು. ಉಳಿದ ದಳಗಳನ್ನು ಸ್ನಾನದ ನೀರಿಗೆ ಸೇರಿಸಬೇಕು. ಸ್ನಾನದ ನೀರನ್ನು ಹೊಂದಿರುವ ಬಕೆಟ್ ಗೆ ಅರಿಶಿನ ಮತ್ತು ಒಂದು ರೂಪಾಯಿ ನಾಣ್ಯವನ್ನು ಸೇರಿಸಿ, ಜೊತೆಗೆ ಚಿಟಿಕೆ ಅರಿಶಿನ ಮತ್ತು ಗುಲಾಬಿ ದಳಗಳನ್ನು ಸೇರಿಸಿ.
 

69

ಈಗ ತಾಯಿ ಲಕ್ಷ್ಮಿಯನ್ನು ನೆನೆಯಿರಿ. ತಾಯಿ ಲಕ್ಷ್ಮಿಯನ್ನು ಸ್ಮರಿಸುವಾಗ, ಈ ನೀರನ್ನು ಮಗ್ ಸಹಾಯದಿಂದ ನಿಮ್ಮ ಶರೀರದ ಮೇಲೆ ಏಳು ಬಾರಿ ಸುರಿಯಬೇಕು. ಈ ಸಮಯದಲ್ಲಿ, ಲಕ್ಷ್ಮಿ ದೇವಿಯ ಸ್ಮರಣೆ ಮುಂದುವರಿಯಬೇಕು. ಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ  ಜೀವನದಲ್ಲಿ ಸದಾ ಇರುತ್ತೆ ಅನ್ನೋದನ್ನು ನೀವು ಯೋಚನೆ ಮಾಡುತ್ತಲೇ ಇರಬೇಕು. 
 

79

ಸ್ನಾನದ ನಂತರ, ಉಳಿದ ಗುಲಾಬಿ ದಳವನ್ನು ಗಂಗಾ ನೀರಿನಿಂದ ಶುದ್ಧೀಕರಿಸಬೇಕು.  ನಂತರ, ಅದನ್ನು ಮನೆಯ ದೇವಾಲಯಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಅದರ ಮೇಲೆ ಕುಂಕುಮ ಮತ್ತು ಅರಿಶಿನವನ್ನು ಅರ್ಪಿಸಬೇಕು.
 

89

ನಂತರ ಲಕ್ಷ್ಮಿ ದೇವಿಯನ್ನು ಸ್ಮರಣೆ ಮಾಡುತ್ತಾ, ನೀವು ಈ ಗುಲಾಬಿ ದಳಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಮನೆಯ ಲಾಕರ್ ನಲ್ಲೂ ಸಹ ಇಡಬಹುದು. ಅಷ್ಟೇ ಅಲ್ಲ ಬೇಕಾದರೆ, ಇದನ್ನು ಬೆಳ್ಳಿಯ ತಾಯತ ಅಥವಾ ಪೆಟ್ಟಿಗೆಯಲ್ಲಿ ಸಹ ಇಡಬಹುದು. ನಿಮಗೆ ಅನುಕೂಲ ಇದ್ದಂತೆ ಮಾಡಿ.
 

99

ಈ ಪರಿಹಾರವನ್ನು ನೀವು ನಿರಂತರವಾಗಿ ಏಳು ಶುಕ್ರವಾರಗಳವರೆಗೆ ನಿಯಮಿತವಾಗಿ ಮಾಡಬೇಕು. ಎಲೆಗಳನ್ನು ಅದೇ ಸ್ಥಳದಲ್ಲಿ ಇರಿಸಿ.ಅಂದ್ರೆ ಪ್ರತಿ ಬಾರಿಯೂ ಕುಂಕುಮ ಮತ್ತು ಅರಿಶಿನದಿಂದ ಅಲಂಕರಿಸಲ್ಪಟ್ಟ ಉಳಿದ ಗುಲಾಬಿ ಎಲೆಯನ್ನು ಹೊರಕ್ಕೆ ಎಸೆಯೋಕೆ ಹೋಗಬೇಡಿ, ಬದಲಾಗಿ ಅದೇ ಜಾಗದಲ್ಲಿ ಇರಿಸಿ. ಹೊಸ ಗುಲಾಬಿ ಎಸಳನ್ನು ಮತ್ತೆ ಅದರ ಮೇಲೆ ಹಾಕಿ. ಇದರಿಂದ ಲಕ್ಷ್ಮೀ ದೇವಿಯ (Goddess Lakshmi) ಕೃಪೆ ನಿಮ್ಮ ಮೇಲಿರುತ್ತೆ. ನಿಮಗೆ ಯಾವತ್ತೂ ಸಂಪತ್ತಿನ ಕೊರತೆ ಬರೋದಿಲ್ಲ. 
 

click me!

Recommended Stories