ಈ ರಾಶಿಯವರು ಬೆಳ್ಳಿ ಧರಿಸಿದ್ರೆ ಜೀವನವೇ ಅಲ್ಲೋಲ ಕಲ್ಲೋಲ!

Published : Jun 11, 2025, 03:43 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ, ಸಿಂಹ ಮತ್ತು ಮಕರ ರಾಶಿಯವರು ಬೆಳ್ಳಿ ಧರಿಸಬಾರದು. ಬೆಳ್ಳಿ ಧರಿಸುವುದರಿಂದ ಈ ರಾಶಿಯವರಿಗೆ ಸಂಘರ್ಷ, ಆರ್ಥಿಕ ನಷ್ಟ ಮತ್ತು ಕೌಟುಂಬಿಕ ಕಲಹ ಉಂಟಾಗಬಹುದು.

PREV
16

ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಇತರೆ ಲೋಹದ ಆಭರಣಗಳ ಧರಿಸುವ ಕುರಿತು ವಿವರಿಸಲಾಗಿದೆ. ಬೆಳ್ಳಿಯನ್ನು ಚಂದ್ರ ಗ್ರಹಕ್ಕೆ ಹೋಲಿಸಲಾಗುತ್ತದೆ. ಬೆಳ್ಳಿ ಧರಿಸುವಿಕೆ/ಬಳಕೆಯಿಂದಾಗಿ ಶೀತಲತೆ ಮತ್ತು ಮನಸ್ಸು ಶಾಂತವಾಗಿರುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ.

26

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಬೆಳ್ಳಿ ಧರಿಸಬಾರದು. ಎಲ್ಲಾ 12 ರಾಶಿ ಗುಣ ಮತ್ತು ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಒಂದು ವೇಳೆ ಈ ರಾಶಿಯವರು ಬೆಳ್ಳಿ ಧರಿಸಿದ್ರೆ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆ ರಾಶಿಗಳು ಯಾವವು ಎಂದು ನೋಡೋಣ ಬನ್ನಿ.

36

ವೃಷಭ ರಾಶಿ

ಈ ರಾಶಿಯವರು ಅಪ್ಪಿತಪ್ಪಿಯೂ ಬೆಳ್ಳಿ ಧರಿಸಬಾರದು. ಈ ರಾಶಿಯವರು ಬೆಳ್ಳಿ ಧರಿಸೋದರಿಂದ ಇವರ ಕುಂಡಲಿ ಮೂರನೇ ಮನೆ ಆಕ್ಟಿವ್ ಆಗುತ್ತದೆ. ಮೂರನೇ ಮನೆಯನ್ನು ಸಂಘರ್ಷ ಎಂದು ಕರೆಯಲಾಗುತ್ತದೆ. ಮೂರನೇ ಮನೆ ಸಕ್ರಿಯವಾಗುವ ಕಾರಣ ಜೀವನದಲ್ಲಿ ನೀವು ಶ್ರಮ ಹಾಕಿದರೂ ಪ್ರತಿಫಲ ಸಿಗಲ್ಲ. ಈ ಕಾರಣದಿಂದ ವೃಷಭ ರಾಶಿಯವರು ಬೆಳ್ಳಿ ಧರಿಸುವಿಕೆ ಅಥವಾ ಈ ಲೋಹಗಳ ವಸ್ತುಗಳ ಬಳಕೆ ನಿಲ್ಲಿಸಬೇಕು. ಬೆಳ್ಳಿಯ ಕಾರಣದಿಂದ ಜೀವನದಲ್ಲಿ ಏಳಿಗೆ ಕಾಣಲ್ಲ.

46

ಸಿಂಹ ರಾಶಿ

ಸಿಂಹ ರಾಶಿ ಚಕ್ರದವರು ಬೆಳ್ಳಿ ಆಭರಣದಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಸಿಂಹ ರಾಶಿಯ ಅಧಿಪತಿ ಸರ್ಯ. ಹಾಗಾಗಿ ಸಿಂಹ ರಾಶಿಯವರು ಬೆಳ್ಳಿ ಧರಿಸೋದರಿಂದ ಕುಂಡಲಿಯ 12ನೇ ಮನೆ ಸಕ್ರಿಯವಾಗುತ್ತದೆ. ಇದರಿಂದ ದುಡಿದ ಹಣವೆಲ್ಲಾ ನೀರಿನಂತೆ ಪೋಲಾಗುತ್ತದೆ. ಬೆಳ್ಳಿ ಧರಿಸೋದರಿಂದ ಆರ್ಥಿಕ ಪ್ರಗತಿ ಕಾಣಲ್ಲ.

56

ಮಕರ ರಾಶಿ

ಈ ರಾಶಿಯವರು ಸಹ ಬೆಳ್ಳಿ ಆಭರಣ ಧರಿಸಬಾರದು. ಬೆಳ್ಳಿ ಧರಿಸೋದರಿಂದ ಮಕರ ರಾಶಿಯಲ್ಲಿರುವ ಕುಂಡಲಿಯ 7ನೇ ಮನೆ ಸಕ್ರಿಯವಾಗುತ್ತದೆ. 7ನೇ ಮನೆ ಸಕ್ರಿಯದಿಂದಾಗಿ ಕುಟುಂಬದಲ್ಲಿ ಮನಸ್ತಾಪ, ಜಗಳ ಹೆಚ್ಚಾಗುತ್ತದೆ. ಗಂಡ-ಹೆಂಡತಿ ನಡುವೆ ಪ್ರೇಮ ಕಡಿಮೆಯಾಗಿ ಸಾಂಸರಿಕ ಕಲಹ ಉಂಟಾಗುತ್ತದೆ.

66

ಈ ಮೇಲಿನ ಮೂರು ರಾಶಿಯವರು ಬೆಳ್ಳಿ ಧರಿಸುವಿಕೆಯಿಂದ ದೂರವಿರಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂರು ರಾಶಿಗಳಿಗೆ ಬೆಳ್ಳಿಯನ್ನು ನಿಷೇಧಿಸಲಾಗಿದೆ.

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories