33 ಕೋಟಿ ದೇವ-ದೇವತೆಗಳು ಇರೋದು ನಿಜಾನ? ಖಂಡಿತಾ ಇಲ್ಲ, ಹಾಗಿದ್ರೆ ಮುಕ್ಕೋಟಿ ಅಂದ್ರೇನು?

First Published Jun 5, 2024, 6:04 PM IST

ಹಿಂದೂ ಧರ್ಮದಲ್ಲಿ ದೇವರು ಮತ್ತು ದೇವತೆಗಳ ಸಂಖ್ಯೆ ನಿಜವಾಗಿಯೂ 33 ಕೋಟಿ ಇದೆಯೇ? . ವಾಸ್ತವವಾಗಿ, ಹಿಂದೂ ಧರ್ಮಗ್ರಂಥಗಳಲ್ಲಿ 33 ಕೋಟಿ ಅಲ್ಲ, 33 ಕೋಟಿ ದೇವರು ಅಂದ್ರೇನು? ಆ ದೇವರುಗಳು ಯಾರೆಲ್ಲಾ ಅನ್ನೋದನ್ನು ನಾವು ತಿಳಿಸುತ್ತೇವೆ. 
 

ಇದು ಇವತ್ತು ನಿನ್ನೆಯಿಂದ ತಿಳಿದು ಬಂದಿರೋ ಮಾಹಿತಿ ಅಲ್ಲ, ಬಹಳ ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದಲ್ಲಿ 33 ಕೋಟಿ ದೇವರುಗಳು ಮತ್ತು ದೇವತೆಗಳಿದ್ದಾರೆ, ಮುಕ್ಕೋಟಿ ದೇವತೆಗಳಿಗೆ ನಮಸ್ಕಾರ ಅನ್ನೋದನ್ನೆಲ್ಲಾ ಕೇಳುತ್ತಾ ಬಂದಿದ್ದೇವೆ.  ಹೌದು, ನಮ್ಮ ಹಿಂದೂ ಧರ್ಮದಲ್ಲಿ ನಿಜವಾಗಿಯೂ 33 ಕೋಟಿ ದೇವತೆಗಳು (33 crore Gods) ಇರಬಹುದು ಅನ್ನೋದನ್ನು ನಾವು ನಂಬುತ್ತೇವೆ. ಆದರೆ ನಿಜವಾಗಿಯೂ ಅಷ್ಟೊಂದು ದೇವರಿದ್ದಾರೆಯೇ?.  ಈ 33 ಕೋಟಿ ದೇವ - ದೇವತೆಗಳು ಯಾರು? ಅವರೆಲ್ಲಿ ವಾಸಿಸುತ್ತಾರೆ ನೋಡೋಣ. 
 

ಕೋಟಿಯ ಅರ್ಥವೇನು?
ಕೋಟಿಗೆ ಸಂಸ್ಕೃತದಲ್ಲಿ ಎರಡು ಅರ್ಥಗಳಿವೆ - ಒಂದು ಕೋಟಿ(ಮಿಲಿಯನ್) ಮತ್ತು ಇನ್ನೊಂದು ಸರ್ವೋಚ್ಚ. ಆದರೆ ಸಾಮಾನ್ಯ ಪರಿಭಾಷೆಯಲ್ಲಿ, ಕೋಟಿ ಎಂಬ ಪದವನ್ನು ಕೋಟಿ (ಮಿಲಿಯನ್) ಎಂದು ಹೇಳಲಾಗೋದು, ಇದು ಹಿಂದೂ ಧರ್ಮದಲ್ಲಿ ದೇವರು ಮತ್ತು ದೇವತೆಗಳ ಸಂಖ್ಯೆ 33 ಕೋಟಿ ಎಂಬ ನಂಬಿಕೆಗೆ ಕಾರಣವಾಯಿತು. ಆದರೆ, ಇಲ್ಲಿ ಕೋಟಿ ಪದದ ಅರ್ಥವು ಸರ್ವೋಚ್ಚವಾಗಿದೆ. ಹಾಗಾಗಿ 33 ಕೋಟಿ ದೇವರು ಮತ್ತು ದೇವತೆಗಳು ಅಂದ್ರೆ, 33 ಸರ್ವೋಚ್ಚ ದೇವರುಗಳು, ಅವರು ಯಾರು ಎಂದು ತಿಳಿಯೋಣ.

33 ಕೋಟಿ ದೇವರು ಮತ್ತು ದೇವತೆಗಳು ಇವರೇ ನೋಡಿ… 
8 ವಸುಗಳು :
1.ಧಾರ 2. ಅನಲ 3. ಅನಿಲ 4. ಅಪ 5. ಆಕಾಶ 6. ಸೂರ್ಯ 7. ಚಂದ್ರ 8. ಧ್ರುವ 

11 ರುದ್ರ - 1. ಮನು 2. ಮನ್ಯು 3. ಶಿವ 4. ಮಹತ್ 5. ರಿತುಧ್ವಜ 6. ಮಹಿನಸ್ 7. ಉಗ್ರರೇತಾ 8. ಭವ 9. ವಾಮದೇವ 10. ಕಾಲ 11. ಧೃತ-ಧ್ವಜ
 

12 ಆದಿತ್ಯರು- 1. ಅಂಶುಮಾನ್ 2. ಆರ್ಯಮನ್ 3. ಇಂದ್ರ (ಶಕ್ರ) 4. ತ್ವಷ್ಟ 5. ವರುಣ 6. ದಕ್ಷ 7. ಪೂಷಾ 8. ಭಗ 9. ಸವಿತೃ 10. ವಿವಸ್ವಾನ್11. ಮಿತೃ12. ವಿಷ್ಣು

ಪ್ರಜಾಪತಿ ಬ್ರಹ್ಮ ಮತ್ತು ವಿಷ್ಣು .

ಮುಕ್ಕೋಟಿ ದೇವತೆಗಳೆಲ್ಲರೂ ಹಸುವಿನಲ್ಲಿ ವಾಸಿಸುತ್ತಾರೆ
ಸನಾತನ ನಂಬಿಕೆಗಳ ಪ್ರಕಾರ, ಗೋ ಮಾತೆಯಲ್ಲಿ 33 ಕೋಟಿ ದೇವರುಗಳು ಮತ್ತು ದೇವತೆಗಳ ವಾಸಸ್ಥಾನವೆನ್ನುವ ನಂಬಿಕೆ ಇದೆ, ಆದ್ದರಿಂದ ಹಿಂದೂ ಧರ್ಮದಲ್ಲಿ ಗೋ ಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. 

ಧಾರ್ಮಿಕ ಗ್ರಂಥಗಳ ಪ್ರಕಾರ, ಹಸುವಿನ (Cow) ಕೊಂಬುಗಳು ಶಿವ ಮತ್ತು ವಿಷ್ಣುವಿನ ವಾಸಸ್ಥಾನವಾಗಿದೆ. ಕಾರ್ತಿಕೇಯನು ಹಸುವಿನ ಹೊಟ್ಟೆಯಲ್ಲಿ, ತಲೆಯಲ್ಲಿ ಬ್ರಹ್ಮ, ಹಣೆಯಲ್ಲಿ 11 ರುದ್ರ, ಕೊಂಬುಗಳ ಮುಂಭಾಗದಲ್ಲಿ ಇಂದ್ರ, ಎರಡೂ ಕಿವಿಗಳಲ್ಲಿ ಅಶ್ವಿನಿ ಕುಮಾರ್, ಕಣ್ಣುಗಳಲ್ಲಿ ಸೂರ್ಯ ಮತ್ತು ಚಂದ್ರ, ಹಲ್ಲುಗಳಲ್ಲಿ ಗರುಡ, ನಾಲಿಗೆಯಲ್ಲಿ ಸರಸ್ವತಿ ದೇವಿ ನೆಲೆಸಿರುತ್ತಾರೆ. ಗಂಧರ್ವರು ಬಾಯಿಯಲ್ಲಿ ವಾಸಿಸುತ್ತಾರೆ, ಮೂಗಿನ ಹೊಳ್ಳೆಗಳ ಮುಂಭಾಗದಲ್ಲಿ ಹಾವುಗಳು, ಕೊಂಬುಗಳ ಹಿಂಭಾಗದಲ್ಲಿ ಅಪ್ಸರೆಗಳು ವಾಸಿಸುತ್ತಾರೆ ಎನ್ನುವ ನಂಬಿಕೆ ಇದೆ. ಇದನ್ನು ಭವಿಷ್ಯ ಪುರಾಣ, ಸ್ಕಂದ ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ವಿವರಿಸಲಾಗಿದೆ.

Latest Videos

click me!