ಜ್ಯೋತಿಷ್ಯದ ಪ್ರಕಾರ, ಗಳಿಕೆಯ ವಿಷಯದಲ್ಲಿ ಕೆಲವು ರಾಶಿಗಳು (zodiac sign) ತುಂಬಾ ಮುಂದಿರುತ್ತೆ. ವಿಶೇಷವಾಗಿ ವ್ಯವಹಾರದ ವಿಷಯಕ್ಕೆ ಬಂದಾಗ, ಈ ಕೆಲವೊಂದು ರಾಶಿಯ ಜನರು ಅದೃಷ್ಟವಂತರು. ವಿಶ್ವದ ಹೆಚ್ಚಿನ ಶತಕೋಟ್ಯಾಧಿಪತಿಗಳು ಕೂಡ ಈ ರಾಶಿಗೇ ಸೇರಿದವರು. ಜ್ಯೋತಿಷ್ಯದ ಪ್ರಕಾರ, ಈ ರಾಶಿಯ ಜನರ ಮನಸ್ಸು ಗಳಿಕೆಯ ವಿಷಯದಲ್ಲಿ ತುಂಬಾನೆ ಮುಂದಿರುತ್ತೆ. ಹಣವನ್ನು ಸಂಪಾದಿಸುವ ಯೋಚನೆಗಳೇ ತುಂಬಿರುವ ಆ ರಾಶಿ ಯಾವುವು ಅನ್ನೋದನ್ನು ನೋಡೋಣ.
ಸಿಂಹ (Leo) ರಾಶಿಯವರು ಹಣದಿಂದ ಸ್ಥಾನಮಾನ ಗಳಿಸ್ತಾರೆ
ಸಿಂಹ ರಾಶಿಯ ಜನರು ಗಳಿಕೆಯ ವಿಷಯದಲ್ಲಿ ಬಹಳ ಮುಂದಿರುತ್ತಾರೆ. ಸಿಂಹ ರಾಶಿಯ ಅಧಿಪತಿ ಸೂರ್ಯ ದೇವರು. ಸೂರ್ಯದೇವನನ್ನು ಗ್ರಹಗಳ ರಾಜ ಎನ್ನಲಾಗುತ್ತೆ. ಸೂರ್ಯನು ಗೌರವ ಮತ್ತು ಉನ್ನತ ಸ್ಥಾನದ ಸಂಕೇತ. ಸಿಂಹ ರಾಶಿಯ ಜನರು ತುಂಬಾನೆ ಆತ್ಮವಿಶ್ವಾಸ (confidence) ಮತ್ತು ಸ್ಥೈರ್ಯವನ್ನು ಹೊಂದಿದ್ದಾರೆ, ಇದರಿಂದಾಗಿ ಅವರು ಹೆಚ್ಚಿನ ಸಂಪತ್ತು ಮತ್ತು ಖ್ಯಾತಿ ಗಳಿಸುತ್ತಾರೆ. ಪ್ರಸಿದ್ಧ ಐಟಿ ಕಂಪನಿ ಎಚ್ಸಿಎಲ್ ಟೆಕ್ನಾಲಜೀಸ್ನ ಅಧ್ಯಕ್ಷ ಶಿವ ನಾಡರ್ ಸಿಂಗ್ (Shiv Nadar Singh) ಇದೇ ಸಿಂಹ ರಾಶಿಯವರು.
ಕುಂಭ (Acquarius) ರಾಶಿಯವರು ಕುಟುಂಬ ವ್ಯವಹಾರ ನಿರ್ವಹಿಸುವಲ್ಲಿ ಮುಂದಿದ್ದಾರೆ
ಕುಂಭ ರಾಶಿಯ ಆಳುವ ಗ್ರಹ ಶನಿ. ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತೆ. ಕಷ್ಟಪಟ್ಟು ದುಡಿಯುವ ಜನರಿಗೆ ಶನಿ ಖಂಡಿತವಾಗಿಯೂ ಫಲ ನೀಡುತ್ತಾನೆ. ಶನಿಯ ಅನುಗ್ರಹದಿಂದ, ಕುಂಭ ರಾಶಿಯ ಜನರಿಗೆ ಪ್ರತಿ ಹಂತದಲ್ಲೂ ಅದೃಷ್ಟ ಇರುತ್ತೆ. ಕುಂಭ ರಾಶಿಯ ಜನರು ತಮ್ಮ ಕುಟುಂಬ ವ್ಯವಹಾರವನ್ನು ನಿರ್ವಹಿಸುವಲ್ಲಿ ಮುಂದಿದ್ದಾರೆ. ಅದಾನಿ ಗ್ರೂಪ್ನ ಮಾಲೀಕ ಗೌತಮ್ ಅದಾನಿ (Goutam Adani) ಕುಂಭ ರಾಶಿಯವರಾಗಿದ್ದಾರೆ.
ಕರ್ಕಾಟಕ (Cancer) ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಇರುತ್ತೆ
ಕರ್ಕಾಟಕ ರಾಶಿಯವರು ಗಳಿಕೆಯ ವಿಷಯದಲ್ಲಿ ಮುಂದಿರುತ್ತಾರೆ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಚಂದ್ರನನ್ನು ಮನಸ್ಸು ಮತ್ತು ನೈತಿಕ ಸ್ಥೈರ್ಯದ ಅಂಶವೆಂದು ಪರಿಗಣಿಸಲಾಗುತ್ತೆ. ಕರ್ಕಾಟಕ ರಾಶಿಯವರ ನೈತಿಕ ಸ್ಥೈರ್ಯವು ತುಂಬಾ ಬಲವಾಗಿದ್ದು, ವ್ಯವಹಾರ ವಿಷಯಗಳಲ್ಲಿ, ಈ ರಾಶಿಯ ಜನರು ತಮಗೆ ಆಗುವ ಪ್ರಯೋಜನಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ವಿಶ್ವದ ಅತ್ಯಂತ ಪ್ರಸಿದ್ಧ ಉದ್ಯಮಿ ಮತ್ತು ಹೂಡಿಕೆದಾರ ಎಲೋನ್ ಮಸ್ಕ್ ಕೂಡ ಕರ್ಕಾಟಕ ರಾಶಿಯವರು.
ವೃಶ್ಚಿಕ ರಾಶಿಯವರು ಹೊಸ ವ್ಯವಹಾರ ಮಾಡೋದ್ರಲ್ಲಿ ಸದಾ ಮುಂದು
ವೃಶ್ಚಿಕ ರಾಶಿಯವರು ಗಳಿಕೆಯ ವಿಷಯದಲ್ಲಿ ಬಹಳ ಮುಂದಿದ್ದಾರೆ. ವೃಶ್ಚಿಕ ರಾಶಿಯ ಆಡಳಿತ ಗ್ರಹ ಮಂಗಳ. ಜ್ಯೋತಿಷ್ಯದ ಪ್ರಕಾರ, ಮಂಗಳನನ್ನು ಗ್ರಹಗಳ ಕಮಾಂಡರ್ ಎನ್ನಲಾಗುತ್ತೆ. ವೃಶ್ಚಿಕ ರಾಶಿಯ ಜನರು ಅದ್ಭುತ ಪ್ಲ್ಯಾನಿಂಗ್ ಗಳನ್ನು ಹೊಂದಿದ್ದಾರೆ. ಅವರ ಅದ್ಭುತ ಆಲೋಚನೆಗಳಿಂದಾಗಿ, ವೃಶ್ಚಿಕ ರಾಶಿಯವರು ಖಂಡಿತವಾಗಿಯೂ ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಕೂಡ ವೃಶ್ಚಿಕ ರಾಶಿಯವರು.
ಮೇಷ (Aeris) ರಾಶಿಯ ಜನರು ವ್ಯವಹಾರದಲ್ಲಿ ಬಹುದೊಡ್ಡ ಹೆಸರು ಗಳಿಸ್ತಾರೆ
ಮಂಗಳನನ್ನು (Mars) ಮೇಷ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತೆ. ಜ್ಯೋತಿಷ್ಯದ ಪ್ರಕಾರ, ಮಂಗಳನ ಶುಭ ಪರಿಣಾಮವೆಂದರೆ ವ್ಯಕ್ತಿಯು ತನ್ನ ಕೆಲಸದ ಬಗ್ಗೆ ತುಂಬಾ ಇಮೋಷನಲ್ ಆಗಿರ್ತಾರೆ. ವಿಶೇಷವಾಗಿ ತಮ್ಮ ಗುರಿಯನ್ನು ಸಾಧಿಸಲು, ಮೇಷ ರಾಶಿಯ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಜೊತೆಗೆ ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ತಮ್ಮ ಶಕ್ತಿಯ ಬಲದಿಂದ, ಮೇಷ ರಾಶಿಯ ಜನರು ದೊಡ್ಡ ಸವಾಲುಗಳನ್ನು ಜಯಿಸುತ್ತಾರೆ. ಭಾರತದ ಪ್ರಸಿದ್ಧ ಬಿಲಿಯನೇರ್ ಮುಖೇಶ್ ಅಂಬಾನಿ (Mukesh Ambani) ಕೂಡ ಮೇಷ ರಾಶಿಯವರಾಗಿದ್ದಾರೆ.