ಬೆಕ್ಕು ಈ ಸೂಚನೆ ನೀಡುತ್ತಿವೆ ಅಂದ್ರೆ, ಕೆಟ್ಟ ಸಮಯ ನಿಮ್ಮದಾಗಲಿದೆ ಎಂದರ್ಥ!

First Published Jun 5, 2024, 5:13 PM IST

ನಾವು ಹೋಗುವ ಹಾದುಯಲ್ಲಿ ಬೆಕ್ಕು ಅಡ್ಡ ಬರೋದರಿಂದ ಹಿಡಿದು ಬೆಕ್ಕು ಅಳುವವರೆಗೆ, ಬೆಕ್ಕಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನಮ್ಮ ಭವಿಷ್ಯಕ್ಕೆ ಶುಭ, ಅಶುಭವೆಂದು ಪರಿಗಣಿಸದ ಅನೇಕ ನಂಬಿಕೆಗಳಿವೆ. ನಿಮ್ಮ ಮುಂದಿನ ಸಮಯ ಹೇಗಿರುತ್ತದೆ ಎಂಬುದನ್ನು ಬೆಕ್ಕು ಅನೇಕ ರೀತಿಯಲ್ಲಿ ಸೂಚಿಸುತ್ತದೆ. ಅದರ ಬಗ್ಗೆ ತಿಳಿಯೋಣ. 
 

ಜ್ಯೋತಿಷ್ಯೆದಲ್ಲಿ, ಯಾವುದೇ ಪ್ರಾಣಿ ಪಕ್ಷಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿಯೊಂದೂ ಜೀವಿಯು ಆಕಾಶಕಾಯಗಳಿಂದ ಪ್ರಭಾವಿತವಾಗಿರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಿದೆ, ಇವುಗಳಲ್ಲಿ ಬೆಕ್ಕು ಸಹ ಒಂದು. ಕೆಲವು ಸಂಸ್ಕೃತಿಗಳಲ್ಲಿ ಬೆಕ್ಕನ್ನು ಅಶುಭ ಸಂಕೇತವಾಗಿ ನೋಡಲಾಗುತ್ತದೆ. ಇತರೆಡೆ ಅದನ್ನು ಮಂಗಳಕರ ಪ್ರಾಣಿಯಾಗಿ ಪೂಜಿಸಲಾಗುತ್ತದೆ. ಬೆಕ್ಕಿನ ನಿಗೂಢ ಸ್ವಭಾವ ಮತ್ತು ಅಲೌಕಿಕ ಅಂತಃಪ್ರಜ್ಞೆಯಿಂದ, ಬೆಕ್ಕುಗಳನ್ನು ವಿವಿಧ ಸೂಚನೆಗಳನ್ನು ನೀಡುವ ಶಕುನ ಎಂದು ಜನ ನಂಬುತ್ತಾರೆ. ಮುಖ್ಯವಾಗಿ, ನಾವು ನಡೆಯುವ ದಾರಿಯಲ್ಲಿ ಬೆಕ್ಕು ಅಡ್ಡ ಹೋದರೆ, ನೀವು ಅಂದುಕೊಂಡ ಕೆಲಸ ನಡೆಯೋದಿಲ್ಲ, ಅಥವಾ ಯಾವುದೇ ದುರ್ಘಟನೆ ನಡೆಯುತ್ತೆ ಎನ್ನುವ ನಂಬಿಕೆ ಇದೆ. 
 

ಅಷ್ಟೇ ಯಾಕೆ ಕನಸಿನಲ್ಲಿ ಬೆಕ್ಕು ನೋಡುವುದು ಅಥವಾ ನಿಜ ಜೀವನದಲ್ಲಿ ಬೆಕ್ಕು ಅಳೋದನ್ನು (crying cat) ಕೇಳುವುದೂ ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಉಂಟುಮಾಡುವ ಘಟನೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗೆ, ಬೆಕ್ಕು ಸಹ ನಿಮಗೆ ಅನೇಕ ಬಾರಿ ಮುಂಬರುವ ದಿನಗಳು ಹೇಗಿರಲಿವೆ ಅನ್ನೋದನ್ನು ಸೂಚಿಸುತ್ತೆ.. ಅವುಗಳ ಬಗ್ಗೆ ವಿವರವಾಗಿ ತಿಳಿಯೋಣ. 
 

Latest Videos


ಬೆಕ್ಕು ಪ್ರಕ್ಷುಬ್ಧ ಅಥವಾ ಆತಂಕದಿಂದ ಇದ್ದರೆ
ನಿಮ್ಮ ಸುತ್ತಲೂ ಬೆಕ್ಕು ಪ್ರಕ್ಷುಬ್ಧವಾಗಿರುವುದನ್ನು (disturbed cat) ನೀವು ಎಂದಾದರೂ ನೋಡಿದರೆ ಅಥವಾ ಬೆಕ್ಕು ಕಾರಣವಿಲ್ಲದೆ ನಿರಂತರವಾಗಿ ಅಳುತ್ತಿದ್ದರೆ, ಅದು ನಿಮ್ಮ ಜೀವನದಲ್ಲಿ ಕೆಲವು ನಕಾರಾತ್ಮಕ ಘಟನೆಗಳಿಗೆ (Negative Incidents) ಕಾರಣವಾಗಬಹುದು. ಬೆಕ್ಕು ಮುಂಬರುವ ಘಟನೆಗಳ ಮುನ್ಸೂಚನೆ ನೀಡುತ್ತೆ ಎನ್ನುವ ನಂಬಿಕೆ ಇದೆ, ಅದಕ್ಕಾಗಿಯೇ ಬೆಕ್ಕು ತುಂಬಾನೆ ಡಿಸ್ಟರ್ಬ್ ಆಗಿ ಅತ್ತಿತ್ತ ಓಡಾಡುತ್ತಿದ್ದರೆ, ಅದು ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆ ಬರಲಿದೆ ಎಂಬುದರ ಸಂಕೇತ. ಬೆಕ್ಕು ಈ ರೀತಿಯಾಗಿ ವರ್ತಿಸುತ್ತಿದ್ದರೆ, ಅದು ನಿಮ್ಮ ಆರೋಗ್ಯ (Health Related Issues) ಸಂಬಂಧಿ ಸಮಸ್ಯೆಯಾಗಿರಬಹುದು. ಆರ್ಥಿಕ ನಷ್ಟದ ಸಂಕೇತವೂ ಆಗಿರಬಹುದು. ಬೆಕ್ಕಿನ ಅಸಮಾಧಾನವನ್ನು ಮುಂಬರುವ ಜೀವನಕ್ಕೆ ಎಚ್ಚರಿಕೆಯಾಗಿ ನೋಡಬಹುದು. ಹಾಗಾಗಿ ಹುಷಾರಾಗಿರೋದು ಮುಖ್ಯ. 

ಬೆಕ್ಕು ಅಳುವುದು ಏನನ್ನು ಸೂಚಿಸುತ್ತೆ? 
ಬೆಕ್ಕು ಕಾರಣವಿಲ್ಲದೆ ಅಳುತ್ತಿದ್ದರೆ, ಅದು ನಿಮ್ಮ ಜೀವನದಲ್ಲಿ ದೊಡ್ಡ ತೊಂದರೆಯ ಸಂಕೇತ. ಜೀವನದಲ್ಲಿ ದೊಡ್ಡ ಸಮಸ್ಯೆ ಇದ್ದಾಗ ಮಾತ್ರ ಬೆಕ್ಕುಗಳು ಇದ್ದಕ್ಕಿದ್ದಂತೆ ಅಳುತ್ತವೆ. ಸಾಮಾನ್ಯವಾಗಿ ಬೆಕ್ಕುಗಳು ತಮ್ಮ ಸ್ವತಂತ್ರ ಸ್ವಭಾವಕ್ಕೆ ಹೆಸರುವಾಸಿ. ಆದರೆ ಅವುಗಳ ಅಳು ತೊಂದರೆಯನ್ನು ಸೂಚಿಸುತ್ತವೆ.

ಬೆಕ್ಕುಗಳು ಎಂದಿಗೂ ಅನಗತ್ಯವಾಗಿ ಪ್ರತಿಕ್ರಿಯಿಸೋದೇ ಇಲ್ಲ. ತಮ್ಮಷ್ಟಕ್ಕೆ ತಾವು ಇರುತ್ತವೆ. ಅವು ಒಂದು ವೇಳೆ ಬಿಟ್ಟು ಬಿಡದೇ ಕೂಗುತ್ತಿವೆ ಅಂದ್ರೆ ಅದರ ಕೂಗು ನಿಮ್ಮ ಭವಿಷ್ಯದ ಜೀವನವು ಕೆಲವು ಸಮಸ್ಯೆಗಳಿಂದ ತುಂಬಿರಬಹುದು ಎಂದು ಸೂಚಿಸುತ್ತದೆ. ಇದು ನಿಮ್ಮ ಜೀವನದ ನಕಾರಾತ್ಮಕತೆಯನ್ನು (negativity) ಸೂಚಿಸುತ್ತೆ. 
 

ಮನೆಯ ಬೆಕ್ಕಿನ ಸಾವು ಅಥವಾ ನಿಮ್ಮಿಂದ ಬೆಕ್ಕಿನ ಸಾವು
ನಿಮ್ಮ ಮನೆಯಲ್ಲಿ ಬೆಕ್ಕು ಸತ್ತರೆ ಅಥವಾ ಅಜಾಗರೂಕತೆಯಿಂದ ನೀವು ಬೆಕ್ಕನ್ನು ಕೊಂದರೆ, ಇವು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ (Negative Effect) ಬೀರುತ್ತದೆ. ಕಾರಣವಿಲ್ಲದೆ ಬೆಕ್ಕನ್ನು ಕೊಲ್ಲುವುದು ಪಾಪಕ್ಕೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ದೈಹಿಕ ನೋವನ್ನು (Physical Pain) ಪಡೆಯಬಹುದು ಅಥವಾ ಅವರ ಜೀವನದಲ್ಲಿ ಅಕಾಲಿಕವಾಗಿ ಯಾವುದೇ ನಕಾರಾತ್ಮಕ ಬದಲಾವಣೆಗಳು(negative changes) ಉಂಟಾಗಬಹುದು. ಬೆಕ್ಕಿನ ಸಾವು ನಿಮ್ಮ ಮನೆಯಲ್ಲಿ ಯಾರಿಗಾದರೂ ಕಾಯಿಲೆ ಬಾಧಿಸುತ್ತೆ ಅಥವಾ ನಿಮ್ಮ ಪ್ರೀತಿಪಾತ್ರರಲ್ಲಿ ಒಬ್ಬರು ದೈಹಿಕ ನೋವನ್ನು ಅನುಭವಿಸಬಹುದು ಎಂದು ಸೂಚಿಸುತ್ತದೆ. ನಿಮ್ಮಿಂದಾಗಿ ಬೆಕ್ಕು ಸತ್ತಿದ್ದರೆ, ಸಮಸ್ಯೆ ನಿವಾರಿಸಲು ಜ್ಯೋತಿಷಿಗಳ (Astrologer) ಬಳಿ ಹೋಗಲೇಬೇಕು. 

ಬೆಕ್ಕಿನ ಜಗಳ
ಎರಡು ಬೆಕ್ಕುಗಳ ನಡುವಿನ ಜಗಳ ಸಹ ಶುಭವಲ್ಲ. ಬೆಕ್ಕುಗಳು ನಿಮ್ಮ ಮನೆಯಲ್ಲಿ ಅಥವಾ ಸುತ್ತಲೂ ಜಗಳವಾಡುತ್ತಿರುವುದು ಕಂಡುಬಂದರೆ, ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆ ಬರಲಿದೆ ಎಂದು ಅರ್ಥಮಾಡಿಕೊಳ್ಳಿ. ಬೆಕ್ಕುಗಳು ಹೋರಾಡುವುದು ನಿಮ್ಮ ಜೀವನಕ್ಕಾಗಿ ನೀವು ಹೋರಾಡಬೇಕಾಗಬಹುದು ಎನ್ನುವುದರ ಸಂಕೇತ. ಬೆಕ್ಕುಗಳ ಜಗಳವು ನಿಮ್ಮ ಜೀವನದಲ್ಲಿಯೂ ಭಿನ್ನಾಭಿಪ್ರಾಯ ಇರಲಿದೆ ಎಂದು ಸೂಚಿಸುತ್ತಿರಬಹುದು.  
 

ಬೆಕ್ಕಿಗೆ ಸಂಬಂಧಿಸಿದ ಈ ಯಾವುದೇ ಸೂಚನೆಗಳನ್ನು ನೀವು ಗಮನಿಸಿದರೆ, ನಿಮ್ಮ ಜೀವನದಲ್ಲಿ ಕೆಟ್ಟ ಸಮಯ ಬರಲಿದೆ ಎಂದರ್ಥ. ಇದು ಕೇವಲ ಜ್ಯೋತಿಷ್ಯದ ಊಹೆ ಅಷ್ಟೇ, ಇದರರ್ಥ ನಿಮ್ಮ ಜೀವನದಲ್ಲಿ ಸಮಸ್ಯೆ ಬಂದೇ ಬರುತ್ತೆ ಎಂದು ಅರ್ಥ ಅಲ್ಲ. ಆದರೆ ಜೀವನದಲ್ಲಿ ಎಲ್ಲದಕ್ಕೂ ಸಿದ್ಧರಾಗಿರಿ ಅನ್ನೋದನ್ನು ಸೂಚಿಸುತ್ತದೆ. 
 

click me!