ವಿಷ್ಣು ತನ್ನ ರುದ್ರ ರೂಪದಿಂದ ಸೃಷ್ಟಿಕೊನೆಗೊಳಿಸುವನು
ಈ ಎಲ್ಲಾ ಸಂಗತಿಗಳು ಸಂಭವಿಸಿದ ನಂತರ, ಶ್ರೀ ಹರಿ ರುದ್ರನು ಸರ್ಪದ ಬಾಯಿಯಿಂದ ಕಾಣಿಸಿಕೊಂಡು ಭೂಮಿಯ ಕೆಳಗಿನಿಂದ ಜಗತ್ತನ್ನು ಸುಡಲು ಪ್ರಾರಂಭಿಸುತ್ತಾನೆ ಎಂದು ವಿಷ್ಣು ಪುರಾಣದ ಭವಿಷ್ಯವಾಣಿಯಲ್ಲಿ ಹೇಳಲಾಗಿದೆ. ಇಡೀ ಭೂಮಿ ಬೆಂಕಿಯಲ್ಲಿ ದಹಿಸಿದ ಬಳಿಕ, ಭಾರಿ ಮಳೆ ಸುರಿಯೋಕೆ ಆರಂಭವಾಗುತ್ತೆ , ಈ ಮಳೆ ಅನೇಕ ವರ್ಷಗಳವರೆಗೆ ಮುಂದುವರಿಯುತ್ತದೆ. ಇದು ಭೂಮಿಯ ಬೆಂಕಿಯನ್ನು ಶಾಂತಗೊಳಿಸುತ್ತದೆ, ಆದರೆ ಇಡೀ ಜಗತ್ತಿನಲ್ಲಿ ನೀರು ತುಂಬುವಂತೆ ಮಾಡುತ್ತೆ. ಇಡೀ ಜಗತ್ತು ನೀರಿನಲ್ಲಿ ಮುಳುಗುತ್ತದೆ. ತೀವ್ರವಾದ ಶಾಖದ ನಂತರ, ಸೃಷ್ಟಿಯಲ್ಲಿ ಪ್ರವಾಹ (flood) ಉಂಟಾಗುತ್ತದೆ ಮತ್ತು ನಂತರ ಹೊಸ ಸೃಷ್ಟಿ ಪ್ರಾರಂಭವಾಗುತ್ತದೆ ಎಂದು ಶ್ರೀಮದ್ದೇವಿ ಭಾಗವತ ಪುರಾಣದಲ್ಲಿ ವಿವರಿಸಲಾಗಿದೆ.