Adhik Maas Purnima : ನಾಳೆ ಸಂಜೆ ತಪ್ಪದೇ ಈ ಕೆಲ್ಸ ಮಾಡಿ, ಹಣದ ಮಳೆ ಶುರುವಾಗುತ್ತದೆ !

Published : May 29, 2026, 05:12 PM IST

Adhik Maas Purnima : ಅಧಿಕ ಮಾಸದ ಹುಣ್ಣಿಮೆ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ, ಮಹತ್ವದ ದಿನವಾಗಿದೆ. ಈ ವರ್ಷ, ಜ್ಯೇಷ್ಠ ಅಧಿಕ ಮಾಸದ ಹುಣ್ಣಿಮೆ ಮೇ 30 ರಂದು ಬಂದಿದೆ. ಈ ದಿನ ತಾಯಿ ಲಕ್ಷ್ಮಿಯನ್ನು ಪೂಜಿಸುವುದು ಸೇರಿದಂತೆ ಕೆಲ ಉಪಾಯಗಳು ನಿಮ್ಮ ಕುಟುಂಬದ ಸಂಪತ್ತು, ಸಮೃದ್ಧಿಯನ್ನು ಹೆಚ್ಚಿಸುತ್ತದೆ.

PREV
16
ಅಧಿಕ ಮಾಸದ ಪೂರ್ಣಿಮೆಯ ಮಹತ್ವ

ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ. ಇದು ವಿಷ್ಣುವಿಗೆ ತುಂಬಾ ಪ್ರಿಯವಾದದ್ದು. ಈ ತಿಂಗಳ ಹುಣ್ಣಿಮೆಯಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಅಡೆತಡೆಗಳು ದೂರವಾಗುತ್ತವೆ. ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ. ಈ ದಿನದಂದು ಮಾಡುವ ದಾನಗಳು, ಜಪಗಳು ಮತ್ತು ಪರಿಹಾರಗಳು ವರ್ಷವಿಡೀ ಫಲ ನೀಡುತ್ತವೆ.

26
ಸಂಪತ್ತಿನ ವೃದ್ಧಿಗೆ ಉಪಾಯ

ಅಧಿಕ ಮಾಸದ ಪೂರ್ಣಿಮೆ ಸಂಜೆ ಲಕ್ಷ್ಮಿ ದೇವಿಯನ್ನು ಪೂಜಿಸಿ. ಪೂಜೆಯ ಸಮಯದಲ್ಲಿ ದೇವಿಗೆ 11 ಹಳದಿ ಕವಡೆಯನ್ನು ತಾಯಿಗೆ ಅರ್ಪಿಸಿ. ಪೂಜೆ ಮುಗಿದ ನಂತರ ಈ ಎಲ್ಲ ಕವಡೆಗಳನ್ನು ಕೆಂಪು ಅಥವಾ ಹಳದಿ ರೇಷ್ಮೆ ಬಟ್ಟೆಯಲ್ಲಿ ಕಟ್ಟಿ ರಾತ್ರಿಯಿಡೀ ಲಕ್ಷ್ಮಿ ದೇವಿಯ ಪಾದದ ಬಳಿ ಇಡಿ. ಮರುದಿನ ಬೆಳಿಗ್ಗೆ ಇದನ್ನು ಕಪಾಟಿನಲ್ಲಿ ಇಡಬೇಕು. ಆರ್ಥಿಕ ವೃದ್ಧಿಗೆ ತಾಯಿ ಲಕ್ಷ್ಮಿಯನ್ನು ಪ್ರಾರ್ಥಿಸಬೇಕು. ಇದು ನಿಮ್ಮ ಮನೆ ಸಂಪತ್ತನ್ನು ಹೆಚ್ಚಿಸುತ್ತದೆ. ಲಕ್ಷ್ಮಿಯ ಆಶೀರ್ವಾದ ನಿಮಗೆ ಲಭಿಸುತ್ತದೆ.

36
ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸು

ತಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಈ ದಿನ 7 ಕವಡೆಯನ್ನು ತೆಗೆದುಕೊಂಡು ಲಕ್ಷ್ಮಿ ದೇವಿಯ ಮಂತ್ರ ಜಪಿಸಬೇಕು. ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಸಿದ್ಧ ಲಕ್ಷ್ಮಿಯೇ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು. ಜಪಿಸಿದ ನಂತರ, ಈ ಕವಡೆಯನ್ನು ತಮ್ಮ ಅಂಗಡಿ ಅಥವಾ ಲಾಕರ್ನ ಹಣ ಇಡುವ ಜಾಗದಲ್ಲಿ ಇಡಬೇಕು.

46
ನಕಾರಾತ್ಮಕ ಶಕ್ತಿಯಿಂದ ಮುಕ್ತಿ

ಮನೆಯಲ್ಲಿ ನಕಾರಾತ್ಮಕತೆ ಶಕ್ತಿ ಮನೆ ಮಾಡಿದ್ರೆ, ಬಡತನ ನಿಮ್ಮನ್ನು ಕಾಡ್ತಿದ್ರೆ, ಮನೆಯಲ್ಲಿ ಶಾಂತಿ ಭಂಗವಾಗಿದ್ದರೆ ಗೋವಿನ ಮೂರ್ತಿಯಿಂದ ಪರಿಹಾರ ಕಂಡ್ಕೊಳ್ಬಹುದು. ಹುಣ್ಣಿಮೆಯ ರಾತ್ರಿ ಒಂಬತ್ತು ಗೋವುಗಳ ಮೂರ್ತಿಯನ್ನು ಅರಿಶಿನ-ಕೇಸರಿ ದ್ರಾವಣದಲ್ಲಿ ನೆನೆಸಿ. ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿ ಮುಖ್ಯ ದ್ವಾರದಲ್ಲಿ ನೇತುಹಾಕಿ. ಈ ಪರಿಹಾರವು ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ತೆಗೆದುಹಾಕುತ್ತದೆ. ಲಕ್ಷ್ಮಿ ದೇವಿ ಸಂತೋಷಗೊಳ್ತಾಳೆ. ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಹರಿವು ಹೆಚ್ಚಾಗುತ್ತದೆ.

56
ಕುಟುಂಬದ ಆರೋಗ್ಯ ವೃದ್ಧಿ

ಅಧಿಕ ಮಾಸದ ಹುಣ್ಣಿಮೆಯ ಸಂಜೆ,ಲಕ್ಷ್ಮಿ-ನಾರಾಯಣರ ಪೂಜೆಯನ್ನು ಮಾಡಬೇಕು. ಪೂಜೆಯ ಸಮಯದಲ್ಲಿ ಬಿಳಿ ಹೂವುಗಳು, ಸಿಹಿತಿಂಡಿಗಳು ಮತ್ತು 21 ಗೋವಿನ ಮೂರ್ತಿಗಳನ್ನು ಅರ್ಪಿಸಿ. ಪೂಜೆಯ ನಂತರ, ಎಲ್ಲಾ ಕುಟುಂಬ ಸದಸ್ಯರಿಗೆ ಪ್ರಸಾದವನ್ನು ವಿತರಿಸಿ. ಈ ಪೂಜೆಯು ಕುಟುಂಬದಲ್ಲಿನ ಅಪಶ್ರುತಿಯನ್ನು ಕಡಿಮೆ ಮಾಡುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.

66
ಮನೆಯ ಸಮೃದ್ಧಿ ಹೆಚ್ಚಳ

ಹುಣ್ಣಿಮೆಯ ದಿನದಂದು, ಮನೆಯ ಈಶಾನ್ಯ ಮೂಲೆಯಲ್ಲಿ ಒಂದು ಸಣ್ಣ ಮಣ್ಣಿನ ಪಾತ್ರೆಯನ್ನು ಇಡಿ. ಅದರಲ್ಲಿ 11 ಗೋವುಗಳ ಮೂರ್ತಿ, ಅಕ್ಕಿ ಮತ್ತು ಅರಿಶಿನವನ್ನು ಇರಿಸಿ ಮುಚ್ಚಳ ಮುಚ್ಚಿ. ಈ ಪಾತ್ರೆ ಎಂದಿಗೂ ಖಾಲಿಯಾಗಲು ಬಿಡಬೇಡಿ. ಇದು ಸಮೃದ್ಧಿ ಹೆಚ್ಚಿಸುತ್ತದೆ.

Read more Photos on
click me!

Recommended Stories