ನಿಮ್ಮ ಕ್ರಶ್ ಯಾವ ರಾಶಿಯವರು ಅನ್ನೋದು ತಿಳಿದು ಈ ರೀತಿ ಇಂಪ್ರೆಸ್ ಮಾಡಿ!

Published : Jul 15, 2023, 06:10 PM IST

ರಾಶಿಚಕ್ರದ ಮೂಲಕ, ಯಾವುದೇ ವ್ಯಕ್ತಿಯ ವ್ಯಕ್ತಿತ್ವ ಮತ್ತು ಸ್ವಭಾವಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು. ರಾಶಿಗೆ ಅನುಗುಣವಾಗಿ ನಿಮ್ಮ ಕ್ರಶನ್ನು ಮೆಚ್ಚಿಸಲು ಮತ್ತು ಅವರ ಮನಸ್ಸು ಗೆಲ್ಲಲು ಯಾವೆಲ್ಲಾ ತಂತ್ರಗಳನ್ನು ಟ್ರೈ ಮಾಡಬಹುದು ಎಂದು ಇಲ್ಲಿ ತಿಳಿಯಿರಿ.   

PREV
112
ನಿಮ್ಮ ಕ್ರಶ್ ಯಾವ ರಾಶಿಯವರು ಅನ್ನೋದು ತಿಳಿದು ಈ ರೀತಿ ಇಂಪ್ರೆಸ್ ಮಾಡಿ!

ಮೇಷ ರಾಶಿಯ ಜನರ ಮನಸ್ಸು ಗೆಲ್ಲಲು, ಏನೆನನ್ನೋ ಮಾಡಬೇಕಾಗುತ್ತೆ. ನಿಮ್ಮ ಕೇರ್ ಲೆಸ್(Careless) ಮತ್ತು ಧೈರ್ಯಶಾಲಿ ಸ್ವಭಾವದಿಂದ, ಅವರ ಹೃದಯ ಗೆಲ್ಲಬಹುದು. ಒಬ್ಬ ವ್ಯಕ್ತಿಯು ಒಮ್ಮೆ ಅವರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರೆ, ನಂತರ ಅವರು ಆಯಸ್ಕಾಂತದಂತೆ ಅವರ ಡೆಗೆ ಆಕರ್ಷಿತರಾಗ್ತಾರೆ..
 

212

ವೃಷಭ ರಾಶಿಯವರು ಕೊಳಕು ರೀತಿಯಲ್ಲಿ ವಾಸಿಸುವ, ಸರಳ ಮತ್ತು ಚೀಪ್(Cheap) ಬಟ್ಟೆ ಧರಿಸುವ ಜನರನ್ನು ಇಷ್ಟಪಡೋದಿಲ್ಲ. ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ, ಈ ರಾಶಿಯ ಜನರು ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಐಷಾರಾಮಿ ಜೀವನವನ್ನು ನಡೆಸುವ ಜನರು ಇವರಿಗೆ ತುಂಬಾ ಆಕರ್ಷಿತರಾಗುತ್ತಾರೆ.

312

ಮಿಥುನ ರಾಶಿಯವರು ಸ್ವಭಾವದಲ್ಲಿ ತುಂಬಾ ತಮಾಷೆಯಾಗಿರುತ್ತಾರೆ. ಇವರು ನಗುವ, ತಮಾಷೆ ಮಾಡುವ ಮತ್ತು ವ್ಯಂಗ್ಯ ಮಾಡುವ ಜನರನ್ನು ಇಷ್ಟಪಡ್ತಾರೆ. ಇವರು ತಮಾಷೆಯ(Comedy) ಮಾತುಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸದ ಮತ್ತು ಮುಕ್ತ ಜೀವನವನ್ನು ನಡೆಸಲು ಅವಕಾಶ ನೀಡುವ ವ್ಯಕ್ತಿ ಇವರಿಗೆ ಇಷ್ಟವಾಗ್ತಾರೆ. 

412

ಕರ್ಕಾಟಕ ರಾಶಿಯವರು ಫ್ಲರ್ಟ್(Flirt) ಮಾಡುವ ಬದಲು ಪ್ರಾಮಾಣಿಕವಾಗಿ ವರ್ತಿಸಲು ಬಯಸುತ್ತಾರೆ. ಈ ರಾಶಿಯ ಜನರು ತಮ್ಮ ಆಪ್ತರ ಬಗ್ಗೆ ತುಂಬಾ ಸೆಂಟಿಮೆಂಟ್ ಆಗಿರ್ತಾರೆ. ಕರ್ಕಾಟಕ ರಾಶಿಯವರು ಬಲವಾದ ಸೋಶಿಯಲ್ ನೆಟವರ್ಕ್ ಹೊಂದಿದ್ದಾರೆ, ಯಾರ ಭಾವನೆಯೊಂದಿಗೂ ಆಟವಾಡೋದು ಇವರಿಗೆ ಇಷ್ಟವಾಗಲ್ಲ. 

512

ಸಿಂಹ(Leo) ರಾಶಿಯವರು ಹೆಚ್ಚು ಹೆಚ್ಚು ಜನರ ಗಮನ ಸೆಳೆಯಲು ಬಯಸುತ್ತಾರೆ. ಇವರನ್ನು ಮೆಚ್ಚಿಸಲು, ಸಾಧ್ಯವಾದಷ್ಟು ಇವರನ್ನು ಹೊಗಳಿ, ಇವರಿಗೆ ಸಾಕಷ್ಟು ಗಮನ ನೀಡಿ. ಇವರನ್ನು ಇಂಪ್ರೆಸ್ ಮಾಡಲು ಫಿಲ್ಮೀ ಸ್ಟೈಲ್ ಬೆಸ್ಟ್.. ಉದಾಹರಣೆಗೆ, ನಿಮ್ಮ ಲವ್ ಸ್ಟೋರಿಯನ್ನು ಸಿನಿಮಾ ಕಥೆಯಾಗಿ ಇವರ ಮುಂದೆ ಹೇಳೊದ್ರಿಂದಾನೂ ಇವರು ಇಂಪ್ರೆಸ್ ಆಗ್ತಾರೆ..
 

612

ಕನ್ಯಾರಾಶಿಯ(Virgo) ಅಧಿಪತಿ ಬುಧ ಗ್ರಹ. ಇವರು ಸಾಕಷ್ಟು ಬೌದ್ಧಿಕ ಸಾಮರ್ಥ್ಯ ಹೊಂದಿದ್ದಾರೆ. ಈ ರಾಶಿಯ ಜನರು ನಾಚಿಕೆ ಸ್ವಭಾವದಂತೆ ಕಾಣಿಸ್ತಾರೆ, ಆದರೆ ವಾಸ್ತವದಲ್ಲಿ ಅವರು ಹಾಗಿರೋದಿಲ್ಲ. ಇವರು ಜನರೊಂದಿಗೆ ಬೆರೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಇವರನ್ನು ಇಂಪ್ರೆಸ್ ಮಾಡಲು ದೀರ್ಘಕಾಲ ಫ್ಲರ್ಟ್ ಮಾಡಬೇಕು.

712

ತುಲಾ(Libra) ರಾಶಿಯವರು ನಿಜವಾದ ಪ್ರೀತಿಯನ್ನು ನಂಬುತ್ತಾರೆ. ಆದ್ದರಿಂದ ಇವರೊಂದಿಗೆ ಮಾತನಾಡುವಾಗ, ಕೆಟ್ಟ ವಿಷಯಗಳನ್ನು ಹೇಳಲೇಬೇಡಿ, ಇಲ್ಲದಿದ್ದರೆ ಇವರೊಂದಿಗೆ ಸಂಬಂಧ ಮುರಿಯಬೇಕಾಗುತ್ತೆ. ಇವರು ಮೊದಲು ಕೆಲಸ ಮಾಡೋ ಜನರನ್ನು ಇಷ್ಟಪಡುತ್ತಾರೆ.  

812

ವೃಶ್ಚಿಕ ರಾಶಿಯವರು(Scorpio) ತಮ್ಮ ಸಂಗಾತಿಯನ್ನು ಹುಡುಕಲು ವರ್ಷಗಟ್ಟಲೆ ಕಾಯಬಹುದು. ವೃಶ್ಚಿಕ ರಾಶಿಯ ಜನರು ಏನು ಯೋಚಿಸುತ್ತಾರೆ? ಹೇಗೆ ಭಾವಿಸುತ್ತಿದ್ದೇವೆ ಎಂಬುದರ ಏನೂ ಹೇಳೋಕೂ ಸಾಧ್ಯವಿಲ್ಲ. ಈ ರಾಶಿಯ ಜನರು ಸುಲಭವಾಗಿ ಬೆರೆಯೋದಿಲ್ಲ. ಜೊತೆಗೆ ಫ್ಲರ್ಟ್ ಮಾಡುವವರ ಮೇಲೆ ಗಮನ ನೀಡೋದಿಲ್ಲ.

912

ಧನು ರಾಶಿಯ ಜನರು ರೋಮಾಂಚನಕಾರಿ ಮತ್ತು ಟ್ರಾವೆಲ್ಲಿಂಗ್ (Travelling) ಮತ್ತು ಹೊಸ ಅನುಭವಗಳನ್ನು ಪಡೆಯುವ ಜನರತ್ತ ತುಂಬಾ ಆಕರ್ಷಿತರಾಗುತ್ತಾರೆ. ಒಂದೇ ಸ್ಥಳದಲ್ಲಿ ಬದ್ಧರಾಗಿರೋದು ಇವರಿಗೆ ತುಂಬಾ ಕಷ್ಟ. ಆದರೆ ನೀವು ಇವರನ್ನು ಮೆಚ್ಚಿಸಿದರೆ, ಇವರು ಎಂದಿಗೂ ನಿಮ್ಮನ್ನು ಬಿಡುವುದಿಲ್ಲ.

1012

ಮಕರ ರಾಶಿಯ ಜನರು ತಮ್ಮ ಮನಸ್ಸಿನಿಂದ ಬಹಿರಂಗವಾಗಿ ಮಾತನಾಡಲು ಸಾಧ್ಯವಾಗೋದಿಲ್ಲ. ಮದುವೆಯ ನಂತರವೂ, ಇವರು ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನೀವು ಇವರ ಮನಸ್ಸನ್ನು ಅರ್ಥಮಾಡಿಕೊಂಡರೆ, ಅವರ ಹೃದಯವನ್ನು(Heart) ಗೆದ್ದಿದ್ದೀರಿ ಎಂದರ್ಥ.

1112

ಕುಂಭ ರಾಶಿಯ(Aquarius) ಜನರು ಪರೋಪಕಾರಿ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ಪ್ರಚೋದಿಸುವ ಜನರನ್ನು ಇವರು ಇಷ್ಟಪಡುತ್ತಾರೆ. ಇವರೊಂದಿಗೆ ಮಾತನಾಡುವಾಗ ವಿಭಿನ್ನವಾದ, ಇಂಟ್ರೆಸ್ಟಿಂಗ್ ಆಗಿರುವ ವಿಷಯಗಳ ಬಗ್ಗೆ ಮಾತನಾಡಿ. 
 

1212

ಮೀನ ರಾಶಿಯ ಜನರು ಕನಸುಗಳೊಂದಿಗೆ(Dreams) ವಾಸ್ತವದಲ್ಲಿ ಬದುಕಲು ಇಷ್ಟಪಡುತ್ತಾರೆ. ಇವರೊಂದಿಗೆ ಮತನಾಡುವಾಗ, ಬಹಳ ವಿಶೇಷವಾದ ಮತ್ತು ವಿಭಿನ್ನವಾದದ್ದನ್ನು ಮಾಡಲು ಪ್ರಯತ್ನಿಸಿ, ಇದರಿಂದ ಇವರು ನಿಮ್ಮನ್ನು ಇತರರಿಗಿಂತ ಭಿನ್ನ ಮತ್ತು ವಿಶೇಷವೆಂದು ಪರಿಗಣಿಸುತ್ತಾರೆ. 
 

Read more Photos on
click me!

Recommended Stories