ಗಂಡ ಹೌದು, ಹಾಗಂಥ ಈ ಸತ್ಯವನ್ನೆಲ್ಲ ಅವನ ಹತ್ರ ಹೇಳೋದೇನೂ ಬೇಡ ಅಂತಾನೆ ಚಾಣಕ್ಯ!

First Published | Jul 25, 2023, 5:09 PM IST

ನಮ್ಮ ಹಿಂದೂ ಧರ್ಮದಲ್ಲಿ, ಮದುವೆಯನ್ನು ಪವಿತ್ರ ಸಂಬಂಧವೆಂದು ಪರಿಗಣಿಸಲಾಗಿದೆ. ಯಾವುದೇ ಯಶಸ್ವಿ ಸಂಬಂಧಕ್ಕೆ ನಂಬಿಕೆ ಬಹಳ ಮುಖ್ಯ. ನಂಬಿಕೆಯಿಲ್ಲದೆ ಯಾವುದೇ ಸಂಬಂಧವು ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. 
 

ವೈವಾಹಿಕ ಜೀವನದಲ್ಲಿ (married life) ನಿಮ್ಮ ಸಂಬಂಧವನ್ನು ಹಾಳು ಮಾಡುವ ಕೆಲವು ವಿಷಯಗಳಿವೆ. ಆಚಾರ್ಯ ಚಾಣಕ್ಯ ಬರೆದ ಚಾಣಕ್ಯ ನೀತಿಯಲ್ಲಿ, ಮನುಷ್ಯನ ವೈವಾಹಿಕ ಜೀವನವನ್ನು ಸಂತೋಷ ಮತ್ತು ದೀರ್ಘಕಾಲೀನವಾಗಿಸುವ ಕೆಲವು ವಿಷಯಗಳನ್ನು ಹೇಳಲಾಗಿದೆ. ಅವುಗಳಲ್ಲಿ ಮುಖ್ಯವಾದವು ಅಂದ್ರೆ, ನೀವು ನಿಮ್ಮ ಗಂಡನನ್ನು ಅದೆಷ್ಟೇ ನಂಬಿದ್ರೂ ಈ ವಿಷ್ಯಗಳನ್ನು ಅವರ ಬಳಿ ಹೇಳ ಬಾರದಂತೆ. 

ವೈವಾಹಿಕ ಜೀವನ ಸುಂದರವಾಗಿರೋದರ ಜೊತೆಗೆ, ಆರೋಗ್ಯಕರವಾಗಿರಬೇಕು ಅನ್ನೋದಾದ್ರೆ ಕೆಲವೊಂದು ವಿಷಯಗಳನ್ನು ಗಂಡನಿಂದ ಹೆಂಡತಿಯು ಮುಚ್ಚಿಡಬೇಕು. ಹಾಗಿದ್ರೆ ಚಾಣಕ್ಯ (Chanakya Niti) ಹೇಳಿದಂತೆ ಗಂಡನಿಂದ ಯಾವ ವಿಷಯಗಳನ್ನು ಮುಚ್ಚಿಡಬೇಕು ಅನ್ನೋದನ್ನು ನೋಡೋಣ, 
 

Tap to resize

ಮನೆಯ ರಹಸ್ಯಗಳು   
ಚಾಣಕ್ಯ ನೀತಿ ಪ್ರಕಾರ, ವೈವಾಹಿಕ ಜೀವನವನ್ನು ಸಂತೋಷವಾಗಿಸಲು, ಮೊದಲು ನಂಬಿಕೆಯನ್ನು ಹೊಂದಿರುವುದು ಅವಶ್ಯಕ. ಆದರೆ ಮಹಿಳೆ ತನ್ನ ಸಂಗಾತಿಗೆ ತನ್ನ ತಾಯಿ ಮನೆಯ ರಹಸ್ಯಗಳನ್ನು (secrets of your house) ಎಂದಿಗೂ ಹೇಳಬಾರದು. ಇದು ನಿಮ್ಮ ಸಂಗಾತಿಗೆ ನಿಮ್ಮ ಬಾಯಲ್ಲಿ ಏನೂ ಉಳಿಯೋದೇ ಇಲ್ಲ ಎಂದು ಭಾವಿಸುವಂತೆ ಮಾಡುತ್ತದೆ. 

ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ಆಗುವ, ಹೇಳಬಾರದ ವಿಷಯಗಳನ್ನು ಸಹ ಅವರ ಬಳಿ ಪ್ರತಿದಿನ ಹೇಳುತ್ತಿದ್ದರೆ ಅವರು ನಿಮ್ಮ ಬಳಿ ಸೀಕ್ರೇಟ್ ಹೇಳಲು ಹಿಂಜರಿಯುತ್ತಾರೆ ಇದಲ್ಲದೆ, ಅವರು ನಿಮ್ಮ ಹೆತ್ತವರ ದೌರ್ಬಲ್ಯಗಳನ್ನು ಸಹ ನಿಮ್ಮ ವಿರುದ್ಧ ಬಳಸಬಹುದು. ಇದರಿಂದ ಸಂಸಾರದಲ್ಲಿ ಬಿರುಕು ಬಿಡಬಹುದು. 

ನಿಮ್ಮ ಸೇವಿಂಗ್ಸ್ ಬಗ್ಗೆ ಹೇಳಬೇಡಿ
ಚಾಣಕ್ಯ ನೀತಿ ಪ್ರಕಾರ, ಪತಿ ತನ್ನ ಸಂಪಾದನೆಯಿಂದ ಮನೆಯ ಖರ್ಚುಗಳಿಗಾಗಿ ಹಣವನ್ನು ನಿಮಗೆ ನೀಡಿದಾಗಲೆಲ್ಲಾ, ಅದರ ಒಂದು ಸಣ್ಣ ಭಾಗವನ್ನು ಉಳಿತಾಯವಾಗಿ ಇಡಬೇಕು,  ಅವುಗಳನ್ನು ನೀವು ಅಗತ್ಯವಿದ್ದಾಗ ಬಳಸಬಹುದು. ಗಂಡನಿಗೆ ಉಳಿತಾಯದ ಬಗ್ಗೆ ತಿಳಿದಿರಬಾರದು, ಏಕೆಂದರೆ ಗಂಡನಿಗೆ ತಿಳಿದರೆ, ಅವರು ನಿಮ್ಮ ಉಳಿತಾಯವನ್ನು (savings) ಬೇರೆ ಕೆಲಸಕ್ಕೆ ಬಳಸುವ ಸಾಧ್ಯತೆ ಇದೆ. 
 

ದಾನ ನೀಡಿರುವ ಬಗ್ಗೆ ಮಾಹಿತಿ  
ಚಾಣಕ್ಯನ ನೀತಿಯ ಪ್ರಕಾರ, ಮನುಷ್ಯನು ದಾನ ಮಾಡುವುದು ಉತ್ತಮ. ಆದರೆ ಮಹಿಳೆಯರು ದಾನ ನೀಡಿರುವ ಬಗ್ಗೆ ತಮ್ಮ ಗಂಡನಿಗೆ ಹೇಳಬಾರದು. ಇದು ದಾನ ನೀಡಿದ ಶ್ರೇಯಸ್ಸನ್ನು ಕಡಿಮೆ ಮಾಡುತ್ತದೆ. ಒಂದು ಕೈಯಿಂದ ಮಾಡಿದ ದಾನ ಇನ್ನೊಂದು ಕೈಗೆ ಗೊತ್ತಾಗಬಾರದು ಅನ್ನೋ ಗಾದೆ ಮಾತೇ ಇದೆ ಅಲ್ವಾ? 

Latest Videos

click me!