Chanakya Niti : ಕೇವಲ ಅದೃಷ್ಟವಂತರಿಗೆ ಮಾತ್ರ ಸಿಗುತ್ತೆ ಈ ಐದು ಸುಖ!

First Published | Dec 14, 2023, 5:32 PM IST

ಚಾಣಕ್ಯ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಜೀವನದಲ್ಲಿ ಯಾವುದೇ ಸಮಸ್ಯೆ ಇರೋದೆ ಇಲ್ಲ. ಅಂತಹ ನೀತಿಗಳಲ್ಲಿ ಚಾಣಕ್ಯ ಕೆಲವೊಂದು ಸುಖಗಳ ಬಗ್ಗೆಯೂ ಬರೆದಿದ್ದಾರೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ. 
 

ಚಾಣಕ್ಯ (Chanakya Niti) ದೇಶದ ಮಹಾನ್ ವಿಧ್ವಾನರಲ್ಲಿ ಒಬ್ಬರು. ಅವರ ಪ್ರತಿಯೊಂದು ನೀತಿಗಳು ಇಂದಿಗೂ ಪ್ರಸ್ತುತ. ಚಾಣಕ್ಯ ತನ್ನ ನೀತಿಯಲ್ಲಿ ಐದು ಸುಖಗಳ ಬಗ್ಗೆ ಬರೆದಿದ್ದಾರೆ. ಆ ಸುಖ ಕೇವಲ ಅದೃಷ್ಟವಂತರಿಗೆ ಮಾತ್ರ ಸಿಗುತ್ತೆ ಅಂದಿದ್ದಾರೆ. ಹಾಗಿದ್ರೆ ಅಂತಹ ಸುಖಗಳು ಯಾವುವು ತಿಳಿಯೋಣ. 
 

ಧನ - ಸಂಪತ್ತು
ಒಬ್ಬರ ಬಳಿ ಯಾರ ಬಳಿಯೂ ಯಾವ ವಸ್ತುವಿಗಾಗಿಯೂ, ಅಥವಾ ಸಹಾಯಕ್ಕಾಗಿಯೂ ಕೈ ಚಾಚದಂತೆ ಮಾಡುವಷ್ಟು ಹಣವಿದ್ದರೆ, ಅದನ್ನು ಆಚಾರ್ಯ ಚಾಣಕ್ಯ ಮೊದಲ ಸುಖ ಎಂದು ಹೇಳುತ್ತಾರೆ. 

Tap to resize

ಬೇಕಾದನ್ನು ತಿನ್ನುವುದು
ನಿಮಗೆ ಸಮಯಕ್ಕೆ ಸರಿಯಾಗಿ ಇಷ್ಟಪಟ್ಟ ಆಹಾರ (eating whatever we want) ಸಿಗುತ್ತಿದ್ದರೆ, ನಿಮ್ಮ ಹೊಟ್ಟೆ ತುಂಬುವಷ್ಟು ಆಹಾರ ನಿಮ್ಮ ಬಳಿ ಇದ್ದರೆ ನೀವು ಅದೃಷ್ಟವಂತರು. ಕೆಲವು ಜನರ ಬಳಿ ಬೇಕಾದಷ್ಟು ಹಣವಿರುತ್ತದೆ, ಆದರೆ ಅವರಿಗೆ ಬೇಕಾದ್ದನ್ನು ತಿನ್ನಲು ಸಾಧ್ಯವಿರೋದಿಲ್ಲ. 

ಉತ್ತಮ ಆರೋಗ್ಯ
ನಿಮ್ಮ ಆರೋಗ್ಯ ತುಂಬಾನೆ ಉತ್ತಮವಾಗಿದ್ದರೆ, ಅದು ಮೂರನೇ ಅದೃಷ್ಟ. ನಿಮ್ಮ ಆರೋಗ್ಯ (Good health) ಚೆನ್ನಾಗಿದ್ದರೆ, ನೀವು ಬೇಕಾದ್ದನ್ನು ತಿನ್ನಬಹುದು, ಜೊತೆಗೆ ನಿಮ್ಮ ಹಣವನ್ನು ನಿಮಗಿಷ್ಟವಾದದನ್ನು ಖರೀದಿಸಬಹುದು. 

ಪ್ರೀತಿ ಮಾಡುವ ಜೀವ 
ಒಂದು ವೇಳೆ ನಿಮ್ಮ ಪತ್ನಿ ನಿಮ್ಮನ್ನು ತುಂಬಾನೆ ಪ್ರೀತಿಸುವವರಾಗಿದ್ದು ಮತ್ತು ನಿಮ್ಮ ಜೊತೆ ಯಾವುದೇ ಕಲಹ ಮಾಡದಿದ್ದರೆ, ನೀವು ಅದೃಷ್ಟವಂತರು (lucky). ಯಾವ ಮನೆಯಲ್ಲಿ ಬುದ್ದಿವಂತ ಹೆಣ್ಣು ಮಗಳು ಇರುತ್ತಾಳೋ ಆ ಮನೆ ಸ್ವರ್ಗದಂತೆ ಇರುತ್ತದೆ. 

ಹೇಳಿದಂತೆ ಕೇಳುವ ಮಕ್ಕಳು
ನಿಮ್ಮ ಮಕ್ಕಳು ನೀವು ಹೇಳಿದಂತೆ ಕೇಳುವವರಾಗಿದ್ದು, ನಿಮಗೆ ಗೌರವ ನೀಡುವಂತಹ ವ್ಯಕ್ತಿ ಅವರಾಗಿದ್ದರೆ, ಅದುವೇ ಐದನೇ ಬಹುದೊಡ್ಡ ಸುಖ. ಹೇಳಿದಂತೆ ಕೇಳುವ ಮಕ್ಕಳಿರೋದು ಈಗಿನ ಕಾಲದಲ್ಲಿ ತುಂಬಾನೆ ಅಗತ್ಯವಾಗಿದೆ. 

Latest Videos

click me!