ದೈವಬಲದಿಂದ ಅಂದುಕೊಂಡ ಕಾರ್ಯ ನಡೆದಿದೆ; ಕೊರಗಜ್ಜನ ಹರಕೆ ತೀರಿಸಿದ ನಟಿ ಮಾಲಾಶ್ರೀ

Published : Aug 09, 2023, 03:25 PM ISTUpdated : Aug 09, 2023, 04:51 PM IST

ನಟಿ ಮಾಲಾಶ್ರೀ ಬದುಕಿನಲ್ಲೂ ಕರಾವಳಿಯ ಕಾರ್ಣಿಕ ದೈವ ಕೊರಗಜ್ಜ ಪವಾಡ ಮೆರೆದಿದ್ದು, ಬೇಡಿಕೆ ಈಡೇರಿಸಿದ ಕೊರಗಜ್ಜನ ಸನ್ನಿಧಾನಕ್ಕೆ ಆಗಮಿಸಿ ಅವರು ಹರಕೆ ತೀರಿಸಿದ್ದಾರೆ.  

PREV
18
ದೈವಬಲದಿಂದ ಅಂದುಕೊಂಡ ಕಾರ್ಯ ನಡೆದಿದೆ; ಕೊರಗಜ್ಜನ ಹರಕೆ ತೀರಿಸಿದ ನಟಿ ಮಾಲಾಶ್ರೀ

ನಟಿ ಮಾಲಾಶ್ರೀ ಬದುಕಿನಲ್ಲೂ ಕರಾವಳಿಯ ಕಾರ್ಣಿಕ ದೈವ ಕೊರಗಜ್ಜ ಪವಾಡ ಮೆರೆದಿದ್ದು, ಬೇಡಿಕೆ ಈಡೇರಿಸಿದ ಕೊರಗಜ್ಜನ ಸನ್ನಿಧಾನಕ್ಕೆ ಆಗಮಿಸಿ ಅವರು ಹರಕೆ ತೀರಿಸಿದ್ದಾರೆ.
 

28

ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ನಟಿ ಮಾಲಾಶ್ರೀ ಹಾಗೂ ಅವರ ಪುತ್ರಿ ಅನನ್ಯಾ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ದೈವಬಲದಿಂದ ಅಂದುಕೊಂಡ ಎಲ್ಲಾ ಕಾರ್ಯ ನಡೆದಿದೆ. ಕ್ಷೇತ್ರದ ಶಕ್ತಿಯನ್ನು ಹೇಳತೀರದು ಎಂದು ಸಂತಸ ವ್ಯಕ್ತಪಡಿಸಿದರು.

38

ಮೂರು ತಿಂಗಳ ಹಿಂದೆಯಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆ, ಎಲ್ಲವೂ ಅಚಾತುರ್ಯವೆಂಬಂತೆ ನಡೆಯಿತು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ ಎಂದು ಮಾಲಾಶ್ರೀ ತಿಳಿಸಿದ್ದಾರೆ.

48

ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ ಎಂದರು. 

58

ಈ ಕ್ಷೇತ್ರಕ್ಕೆ ಮುಂದೆಯೂ ಬರುತ್ತಿರುತ್ತೇನೆ ಎಂದು ಮಾಲಾಶ್ರೀ ಹೇಳಿದರು. ಈ ವೇಳೆ ನಟಿ ಮಾಲಾಶ್ರೀ ಹಾಗೂ ಪುತ್ರಿಯನ್ನು ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟಿಗಳು ಸನ್ಮಾನಿಸಿದರು.

68

ನಟಿ ಮಾಲಾಶ್ರೀ  ಹಾಗೆ ತಾಯಿ,ಅಕ್ಕ ,ಮಗ ಆರ್ಯನ್  ಹಾಗೂ ಮಗಳು ಆರಾಧನಾ ಅವರೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದರು.ಮುಖ್ಯಪ್ರಾಣರ ದರ್ಶನ ಪಡೆದರು.

78

ಕೃಷ್ಣ ಮಠಕ್ಕೆ ಆಗಮಿಸಿ ಕೃಷ್ಣ,ಮುಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಶ್ರೀಗಳಿಂದ ಹಾಗೂ ಕಾಣಿಯೂರು ಮಠಾಧೀಶರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

88
Malashri Mangalore 04

ಕೃಷ್ಣ,ಮುಖ್ಯಪ್ರಾಣರ ದರ್ಶನ  ಮತ್ತು  ಕಾಣಿಯೂರು ಮಠಾಧೀಶರಿಂದ ಮಂತ್ರಾಕ್ಷತೆ ಪಡೆದು ಭೋಜನ ಪ್ರಸಾದ ಸ್ವೀಕರಿಸಿದರು. ಕೃಷ್ಣ ಮಠದಿಂದ ಕೊಲ್ಲೂರಿಗೆ ನಟಿ ಮಾಲಾಶ್ರೀ  ತೆರಳಿದರು 

Read more Photos on
click me!

Recommended Stories