ಕನಸುಗಳ (dreams) ವಿಚಿತ್ರ ಜಗತ್ತನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಇವು ಭವಿಷ್ಯದಲ್ಲಿ ಸಂಭವಿಸುವ ಘಟನೆಗಳನ್ನು ವ್ಯಕ್ತಿಗೆ ಸೂಚಿಸುತ್ತವೆ. ಕೆಲವು ಕನಸುಗಳು ಮಂಗಳಕರವಾಗಿರುತ್ತವೆ ಮತ್ತು ಕೆಲವು ಅಶುಭ ಫಲಿತಾಂಶಗಳನ್ನು ನೀಡುತ್ತವೆ. ಸ್ವಪ್ನ ಶಾಸ್ತ್ರದಲ್ಲಿ, ಕೆಲವು ಕನಸುಗಳ ಬಗ್ಗೆ ಹೇಳಲಾಗಿದೆ, ಆ ಕನಸು ಬೀಳ್ತಿದೆ ಅಂದ್ರೆ ಸದ್ಯದಲ್ಲೇ ನಿಮಗೆ ಹಣ ಸಿಗಲಿದೆ ಎಂದರ್ಥ.
ಸ್ವಪ್ನ ಶಾಸ್ತ್ರದ (Swapna shastra) ಪ್ರಕಾರ, ಕನಸಿನಲ್ಲಿ ಕೆಲವು ವಸ್ತುಗಳು ಕಾಣಿಸಿಕೊಳ್ಳುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಅಂಥ ಕನಸುಗಳ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ಯಾವ ಕನಸು ಬೀಳೋದು ನಿಮಗೆ ಸದ್ಯದಲ್ಲಿ ದೊಡ್ಡದಾದ ಲಾಟರಿ ಹೊಡೆಯಲಿದೆ ಅನ್ನೋದರ ಸೂಚಕವಾಗಿ ಅನ್ನೋದನ್ನ ತಿಳಿಸಿದ್ದೀವಿ. ನೀವು ಇದನ್ನ ಓದಿ.
ಹಾಲಿನಿಂದ ಸ್ನಾನ ಮಾಡುವ ಕನಸು
ಒಬ್ಬ ವ್ಯಕ್ತಿಯು ಕನಸಿನಲ್ಲಿ ಹಾಲಿನಿಂದ ಸ್ನಾನ (milk bath) ಮಾಡೋದನ್ನ ನೋಡಿದರೆ, ಅದನ್ನು ತುಂಬಾ ಶುಭ. ಅಂತಹ ಕನಸು ಬಿದ್ರೆ ದೊಡ್ಡ ಮಟ್ಟಿಗೆ ಹಣದ ಪ್ರಯೋಜನ ಪಡಿತೀರಿ ಎಂದರ್ಥ. ಆ ಕನಸುಗಳು ನಿಮ್ಮ ಉತ್ತಮ ವೃತ್ತಿಜೀವನವನ್ನೂ ಸೂಚಿಸುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ, ಅಂಥ ಕನಸುಗಳು ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತವೆ. ಇವು ಉತ್ತಮ ಆರ್ಥಿಕ ಸ್ಥಿತಿಯ ಸೂಚಕವೂ ಆಗಿದೆ.
ಕಮಲದ ಹೂವು
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಮಲದ ಹೂವು ನೋಡಿದರೆ, ಲಕ್ಷ್ಮಿ ದೇವಿಯು (Goddess Lakshmi) ನಿಮ್ಮ ಜೀವನದಲ್ಲಿ ಬರಲಿದ್ದಾಳೆ ಎಂಬುದರ ಸಂಕೇತ. ಲಕ್ಷ್ಮಿ ದೇವಿಯ ಅನುಗ್ರಹದಿಂದ, ಆರ್ಥಿಕ ಸ್ಥಿತಿಯೂ ಗಣನೀಯ ಹೆಚ್ಚಳವನ್ನು ಕಾಣುತ್ತದೆ. ಅಲ್ಲದೆ, ಅಂತಹ ಕನಸುಗಳು ಆರ್ಥಿಕ ಸಮಸ್ಯೆಗಳಿಂದ ಮುಕ್ತಗೊಳಿಸುತ್ತವೆ ಅನ್ನುವ ಸೂಚನೆಯೂ ಹೌದು.
ಕನಸಿನಲ್ಲಿ ಮಳೆಯನ್ನು ನೋಡುವುದು
ಹೆಚ್ಚಾಗಿ ಜನರು ತಮ್ಮ ಕನಸಿನಲ್ಲಿ ಮಳೆಯನ್ನು (dream of rain) ನೋಡುತ್ತಾರೆ. ಸ್ವಪ್ನ ಶಾಸ್ತ್ರದ ಪ್ರಕಾರ, ಅಂತಹ ಕನಸುಗಳನ್ನು ಬಹಳ ಮಂಗಳಕರ ಮತ್ತು ಸಮೃದ್ಧಿ ತರುತ್ತದೆ. ನಿಮಗೂ ಅಂಥ ಕನಸು ಬಿದ್ರೆ ಶೀಘ್ರದಲ್ಲೇ ಹಣದ ಲಾಭ ಪಡೆಯಬಹುದು. ಅಂತಹ ಕನಸುಗಳು ಯಾವುದೇ ಹಳೆಯ ಇನ್ವೆಸ್ಟ್ಮೆಂಟಿನಿಂದ ನೀವು ಪ್ರಯೋಜನ ಪಡೆಯುತ್ತೀರಿ ಎಂದು ಸೂಚಿಸುತ್ತದೆ. ಅಷ್ಟೇ ಅಲ್ಲ ಮಳೆಯ ಕನಸು ನಿಮ್ಮ ಜೀವನದಲ್ಲಿ ಸಂಗಾತಿಯ ಆಗಮನವನ್ನು ಸೂಚಿಸುತ್ತದೆ.
ಉತ್ತಮ ಆಹಾರ
ಉತ್ತಮ ಆಹಾರ ಸೇವಿಸುವ ಕನಸ ಕಂಡರೆ ಒಳ್ಳೆಯ ಸಮಯದ ಆರಂಭವನ್ನು ಸೂಚಿಸುತ್ತವೆ. ದೊಡ್ಡ ಪ್ರಮಾಣದ ಹಣ ಗಳಿಸಬಹುದು ಎಂದರ್ಥ. ಅಲ್ಲದೆ, ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಅಲ್ಲದೆ, ಅಂತಹ ಕನಸುಗಳು ಮನಸ್ಸಿನಲ್ಲಿ ತೃಪ್ತಿಯ ಭಾವನೆಯನ್ನು ಪ್ರತಿಬಿಂಬಿಸುತ್ತವೆ.