ಹೋಳಿ ಹುಣ್ಣಿಮೆಯ ಚಂದ್ರಗ್ರಹಣ ದಿನದಂದು 20 ನಿಮಿಷ ಸೂತಕ ಕಾಲ: ಕರೆಕ್ಟ್ ಸಮಯ ತಿಳಿದುಕೊಳ್ಳಿ

Published : Feb 28, 2026, 01:10 PM IST

2026ರ ಮಾರ್ಚ್ 3ರ ಹೋಳಿ ಹುಣ್ಣಿಮೆಯಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಗೋಚರಿಸುವ ಈ ಗ್ರಹಣದ ಅವಧಿ 20 ನಿಮಿಷಗಳಾಗಿದ್ದು, ಅಂದು ಬೆಳಗ್ಗೆಯಿಂದಲೇ ಸೂತಕ ಕಾಲ ಆರಂಭವಾಗಲಿದೆ.

PREV
15
ವರ್ಷದ ಮೊದಲ ಚಂದ್ರಗ್ರಹಣ

ಇದೇ ಹೋಳಿ ಹುಣ್ಣಿಮೆ ದಿನದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗಲಿದ್ದು, ಅಂದು ಬರೋಬ್ಬರಿ 20 ನಿಮಿಷ ಸೂತಕದ ಸಮಯ ಇರಲಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

25
ಹೋಳಿ ದಹನ

ಹಿಂದೂ ಧರ್ಮದಲ್ಲಿ ಹೋಳಿ ದಹನ ಮಾಡುವ ದಿನ ಅತ್ಯಂತ ಪ್ರಮುಖವಾಗಿದೆ. ಈ ದಿನ ನಕಾರಾತ್ಮಕ ಶಕ್ತಿಗಳು ನಾಶವಾಗಿ ಹೊಸ ಚೈತನ್ಯದೊಂದಿಗೆ ಜೀವನ ಆರಂಭಿಸುವ ಶುಭಕಾಲವಾಗಿದೆ. ಇನ್ನು ಹೋಳಿಯ ಬಣ್ಣ ಜೀವನದಲ್ಲಿ ಬೆಳವಣಿಗೆ ಮತ್ತು ಖುಷಿಯನ್ನು ತೆಗೆದುಕೊಂಡು ಬರುತ್ತದೆ. ಈ ವರ್ಷ 3ನೇ ಮಾರ್ಚ್‌ 2026ರಂದು ಹೋಳಿಯ ದಹನ ನಡೆಯಲಿದೆ.

35
ಅತ್ಯಂತ ಪ್ರಭಾವಶಾಲಿ ಸಮಯ

ಇದೇ ಹೋಳಿಯ ದಹನದ ದಿನದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಧಾರ್ಮಿಕ ಆಚರಣೆಗಳ ಪ್ರಕಾರ, ಇದನ್ನು ಅತ್ಯಂತ ಪ್ರಭಾವಶಾಲಿ ಸಮಯ ಎಂದು ಹೇಳಲಾಗುತ್ತದೆ. ಹೋಳಿ ದಹನದಂದು ಯಾವ ಸಮಯದಲ್ಲಿ ಸೂತಕವಿರಲಿದೆ ಎಂದು ನೋಡೋಣ ಬನ್ನಿ.

45
3ನೇ ಮಾರ್ಚ್ 2026ರಂದು ಚಂದ್ರಗ್ರಹಣ

3ನೇ ಮಾರ್ಚ್ 2026ರಂದು ಚಂದ್ರಗ್ರಹಣ ಸಂಭವಿಸಲಿದೆ. ಸಂಜೆ 6 ಗಂಟೆ 26 ನಿಮಿಷದಿಂದ ಸಂಜೆ 6 ಗಂಟೆ 46 ನಿಮಿಷದವರೆಗೆ ಚಂದ್ರಗ್ರಹಣ ಇರಲಿದೆ. 20 ನಿಮಿಷ ಗ್ರಹಣದ ಅವಧಿಯಾಗಿದ್ದು, ಇದನ್ನು ಕಾಳ ಸಮಯ ಎಂದು ಕರೆಯಲಾಗುತ್ತದೆ. ಮಾರ್ಚ್ 3ರ ಬೆಳಗ್ಗೆಯೇ ಅಂದ್ರೆ ಬೆಳಗ್ಗೆ 9 ಗಂಟೆ 39 ನಿಮಿಷಕ್ಕೆ ಸೂತಕ ಕಾಲ ಪ್ರಾರಂಭವಾಗುತ್ತದೆ. ಈ ಸೂತಕ ಕಾಲದಲ್ಲಿ ಹೊಸ ಕೆಲಸದ ಪ್ರಾರಂಭ ಸೇರಿದಂತೆ ಯಾವುದೇ ಪೂಜೆ ಸೇರಿದಂತೆ ಧಾರ್ಮಿಕ ಆಚರಣೆಗಳಿಗೆ ನಿಬಂಧನೆ ಇರುತ್ತದೆ.

ಇದನ್ನೂ ಓದಿ: ಮೂರು ದಿನದಲ್ಲಿ ಚತುರ್ಗ್ರಹಿ ಶಕ್ತಿ ಸ್ಫೋಟ, ಈ ರಾಶಿಗೆ ವೃತ್ತಿಯಲ್ಲಿ ಬಡ್ತಿ ಮತ್ತು ಹಣಕಾಸಿನಲ್ಲಿ ಲಾಭ

55
ಹೋಳಿ ದಹನ ಸಮಯ

ಜ್ಯೋತಿಷಿಗಳ ಪ್ರಕಾರ, ಹೋಳಿ ದಹನದ ಸಮಯದಲ್ಲಿ ಚಂದ್ರಗ್ರಹಣ ಸಂಭವಿಸುತ್ತಿದೆ. ಆದ್ದರಿಂದ ಹೋಳಿ ದಹನಕ್ಕೆ ಶುಭ ಸಮಯ ಸಂಜೆ 6:25 ರಿಂದ ರಾತ್ರಿ 8:50 ರವರೆಗೆ ಇರುತ್ತದೆ. ಚಂದ್ರ ಗ್ರಹಣವು ಸಂಜೆ 6:46 ಕ್ಕೆ ಮುಗಿಯುತ್ತದೆ.

ಇದನ್ನೂ ಓದಿ: ಮಾರ್ಚ್ 3 ಬ್ಲಡ್ ಮೂನ್: ಬೆಂಗಳೂರಿನಲ್ಲಿ ಚಂದ್ರಗ್ರಹಣ ಎಷ್ಟು ಗಂಟೆಗೆ?

Read more Photos on
click me!

Recommended Stories