Fact Check: ಭಾರತೀಯ ರೈಲ್ವೇ ಅದಾನಿಗೆ ಮಾರಿದ ಮೋದಿ: ಪ್ರಿಯಾಂಕಾ ಸುಳ್ಳು ಬಯಲು!

First Published Dec 16, 2020, 3:47 PM IST

ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಸರ್ಕಾರ ಹಾಗೂ ಪಿಎಂ ಹೊರತುಪಡಿಸಿ ರೈತರು ದೊಡ್ಡ ದೊಡ್ಡ ಉದ್ಯಮಿಗಳಾದ ಅದಾನಿ ಹಾಗೂ ಅಂಬಾನಿಯನ್ನೂ ವಿರೋಧಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ವಿರೋಧ ಪಕ್ಷ ರೈತ ಪ್ರತಿಭಟನೆ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾ ಮೂಲಕ ರೈತರಿಗೆ ತಪ್ಪು ಮಾಹಿತಿ ಹಬ್ಬಿಸುವ ಯತ್ನವನ್ನೂ ನಡೆಸುತ್ತಿದ್ದಾರೆ. ಅವರು ಟ್ವಿಟರ್‌ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರಲ್ಲಿ ಭಾರತೀಯ ರೈಲ್ವೆಯನ್ನು ಅದಾನಿಗೆ ಮಾರಿದ್ದಾರೆಂಬ ಆರೋಪ ಮಾಡಲಾಗಿದೆ. ಆದರೆ ಫ್ಯಾಕ್ಟ್‌ ಚೆಕ್ ನಡೆಸಿದಾಗ ಈ ವಿಡಿಯೋ ಹಿಂದಿನ ಸತ್ಯ ಬೇರೆಯೇ ಇದೆ ಎಂದು ತಿಳಿದು ಬಂದಿದೆ. 
 

ವೈರಲ್ ಆದ ಪೋಸ್ಟ್ ಏನು?:ಪ್ರಿಯಾಂಕಾ ಗಾಂಧಿ ಗುಜರಾತ್‌ನ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಹಾರ್ದಿಕ್ ಪಟೇಲ್ 'ಭಾರತೀಯ ರೈಲ್ವೇಯಲ್ಲಿ ಅದಾನಿ ಸಂಸ್ಥೆಯ ಫ್ರೆಶ್ ಹಿಟ್ಟಿನ ಜಾಹೀರಾತಿದೆ. ಈಗಂತೂ ರೈತರ ಹೋರಾಟ ಸತ್ಯದ ಹಾದಿಯಲ್ಲಿದೆ ಎಂದು ಯಾವುದೇ ಹಿಂಜರಿಕೆ ಇಲ್ಲದೇ ಹೇಳಬಹುದು' ಎಂದು ಬರೆದಿದ್ದಾರೆ.
undefined
ಫ್ಯಾಕ್ಟ್ ಚೆಕ್: ಆದರೆ ಈ ಪೋಸ್ಟ್‌ ಮೂಲಕ ಸದ್ಯ ಸೋಶಿಯಲ್ ಮೀಡಿಯಾ ಬಳಸಿ ಮೋದಿ ಸರ್ಕಾರದ ವಿರುದ್ಧ ತಪ್ಪು ಮಾಹಿತಿ ಹರಡಲು ಸಿದ್ಧವಾಗಿರುವ ಕಾಂಗ್ರೆಸ್‌ ತನ್ನದೇ ಬಣ್ಣ ಬಯಲುಗೊಳಿಸಿದೆ. ಟ್ವಿಟರ್‌ನಲ್ಲಿ ಕಾಂಗ್ರೆಸ್ ಶೇರ್ ಮಾಡಿಕೊಂಡಿರುವ ವಿಡಿಯೋ ನಕಲಿಯಾಗಿದೆ. ಪಿಐಬಿ ಇದರ ಫ್ಯಾಕ್ಟ್ ಚೆಕ್ ನಡೆಸಿ ಟ್ವೀಟ್ ಮಾಡಿದ್ದು, ವಿಡಿಯೋ ಒಂದನ್ನು ಮುಂದಿಟ್ಟುಕೊಂಡು ಸರ್ಕಾರ ಭಾರತೀಯ ರೈಲ್ವೇಯಲ್ಲಿ ಖಾಸಗಿ ಕಂಪನಿಯ ಸ್ಟಾಂಪ್ ಹಾಕಿದೆ ಎಂದು ಹೇಳಲಾಗಿದೆ. ಆದರೆ #PIBFactCheck ನಲ್ಲಿ ಇದು ಸುಳ್ಳೆಂದು ಸಾಬೀತಾಗಿದೆ. ಇದು ಕೇವಲ ಒಂದು ವಾಣಿಜ್ಯ ಜಾಹೀರಾತು ಎಂದಿದೆ.
undefined
ಈ ವಿಚಾರ ಬಯಲಾದ ಬೆನ್ನಲ್ಲೇಜನರು ಪ್ರಿಯಾಂಕಾ ಗಾಂಧಿ ಹಾಗೂ ಹಾರ್ದಿಕ್ ಪಟೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಮಂದಿ ಫೇಕ್ ನ್ಯೂಸ್ ಹಬ್ಬಿಸುತ್ತಿದ್ದೇರೆಂದು ದೂರಿದ್ದಾರೆ.
undefined
ಇದು ಕೇವಲ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ವಿಡಿಯೋ ಆಗಿದ್ದು, ಭಾರತೀಯ ರೈಲ್ವೇ ಮೇಲೆ ಅದಾನಿ ಯಾವುದೇ ಹಕ್ಕು ಹೊಂದಿಲ್ಲ ಎಂಬುವುದು ಖಚಿತವಾಗಿದೆ.
undefined
click me!