ಕೊರೋನಾ ವೈರಸ್ ನಾಶಪಡಿಸಲು ರಾತ್ರಿವೇಳೆ ರಾಸಾಯನಿಕಯುಕ್ತ ಔಷಧಿ ಸಿಂಪಡಿಸಲಾಗುತ್ತದೆ ಎನ್ನುವ ವದಂತಿ ಎಲ್ಲೆಡೆ ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ಹರಿದಾಡುತ್ತಿದೆ.
ಆದರೆ ಈ ಕುರಿತು ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಈ ಸುಳ್ಳು ಸುದ್ದಿಯನ್ನು ಪಸರಿಸುತ್ತಿರುವುದು ಕಂಡುಬಂದಿದೆ.
ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದರೂ ಕಿಡಿಗೇಡಿಗಳು ಪಸರಿಸುತ್ತಿದ್ದಾರೆ.
ಇನ್ನು ಕೊರೋನಾ ಕುರಿತು ತಪ್ಪುಮಾಹಿತಿ ನೀಡಿದ ಕೆಲವು ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ.
ಜಿಲ್ಲಾಧಿಇಕಾರಿಗಳು ಸ್ಪಷ್ಟನೆ ನೀಡಿದ್ದರು ಭಯಬಿದ್ದರುವ ಅನೇಕ ಮಂದಿ ಸಿಂಪಡಿಸುವ ಔಷಧ ತಮ್ಮ ಮನೆ ಬಾವಿಗೆ ಬೀಳದಿರಲಿ ಎಂಬ ಉದ್ದೇಶದಿಂದ ಪ್ಲಾಸ್ಇಕ್, ಬಟ್ಟೆ ಮೊದಲಾದವುಗಳಿಂದ ಮುಚ್ಚಿದ್ದಾರೆ ಎಂಬ ಸಂದೇಶವುಳ್ಳ ಪೋಸ್ಡ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಈ ಔಷಧಿ ಒಡೆಯುತ್ತಾರೆಂಬ ವದಂತಿ ಕೇಳಿ ಭಯಬಿದ್ದ ಜನ ಕುಡಿಯುವ ನೀರಿಗೆ ಇದು ಬೀಳದಿರಲಿ ಎಂಬ ಕಾರಂದಿಂದ ಹೀಗೆ ಮಾಡಿದ್ದಾರೆಂಬ ಫೋಟೋಗಳೂ ವೈರಲ್ ಆಗಿವೆ.
ಆದರೆ ಈ ಫೋಟೋಜಗು ಮಂಗಳೂರು ಹಾಗೂ ಕಾರವಾರ ಭಾಗದಲ್ಲಿ ಹೆಚ್ಚು ಶೇರ್ ಆಗಿದ್ದು, ನಿಜಕ್ಕೂ ಇಂತಹ ಕ್ರಮ ಕೈಗೊಂಡಿದ್ದಾರಾ ಎಂಬುವುದು ಸ್ಪಷ್ಟವಾಗಿಲ್ಲ.
ಅದೇನಿದ್ದರೂ ಮೋದಿ ಔಷಧಿ ಸಿಂಪಡಿಸುತ್ತಾರೆಂಬ ಮಾತುಗಳು ಮಾತ್ರ ಸತ್ಯಕ್ಕೆ ದೂರವಾಗಿವೆ.