ಬಿಗ್ ಬಾಸ್ ಖ್ಯಾತಿಯ ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ 'ಪೇಯ್ಡ್ ಸಬ್‌ಸ್ಕ್ರಿಪ್ಷನ್' ಆರಂಭಿಸಿ ವಿವಾದಕ್ಕೆ ಕಾರಣರಾಗಿದ್ದಾರೆ. 199 ರೂಪಾಯಿ ಶುಲ್ಕದ ಈ ಚಂದಾದಾರಿಕೆಯಿಂದ ಅವರು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದು, ಈ ಬಗ್ಗೆ ಯೂಟ್ಯೂಬರ್ ಸಾಯಿಕೃಷ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮಲಯಾಳಂ ಮೂಲಕ ವೀಕ್ಷಕರಿಗೆ ಪರಿಚಿತರಾದ ನಟಿ ರೇಣು ಸುಧಿ. ಪತಿ ನಿಧನದ ನಂತರ ಮ್ಯೂಸಿಕ್ ಆಲ್ಬಂಗಳ ಮೂಲಕ ಸಕ್ರಿಯರಾಗಿದ್ದ ರೇಣು, ಈಗ ಇನ್‌ಸ್ಟಾಗ್ರಾಂನಲ್ಲಿ 'ಪೇಯ್ಡ್ ಸಬ್‌ಸ್ಕ್ರಿಪ್ಷನ್' ಶುರು ಮಾಡಿದ್ದಾರೆ. ಆದರೆ ಈ ನಡೆಗೆ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ರೇಣು ಅವರ ಸಬ್‌ಸ್ಕ್ರಿಪ್ಷನ್ ಬಗ್ಗೆ ಯೂಟ್ಯೂಬರ್ ಸಾಯಿಕೃಷ್ಣ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
25
199 ರೂಪಾಯಿ ಚಾರ್ಜ್
ರೇಣು ಒಬ್ಬರಿಂದ 199 ರೂಪಾಯಿ ಚಾರ್ಜ್ ಮಾಡ್ತಾರೆ. ಈಗಾಗಲೇ 1119 ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದು, ಸುಮಾರು 2.25 ಲಕ್ಷ ರೂಪಾಯಿ ಗಳಿಸಿರಬಹುದು ಎಂದು ಸಾಯಿಕೃಷ್ಣ ಅಂದಾಜಿಸಿದ್ದಾರೆ. ಟೀಕಿಸುವವರು ಮತ್ತು ಬೆಂಬಲಿಸುವವರ ಕುತೂಹಲವನ್ನೇ ರೇಣು ದುಡ್ಡಾಗಿ ಪರಿವರ್ತಿಸುತ್ತಿದ್ದಾರೆ, ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಸಾಯಿಕೃಷ್ಣ ಹೇಳಿದ್ದಾರೆ.
35
1119 ಸಬ್‌ಸ್ಕ್ರೈಬರ್‌ಗಳು
"ರೇಣು ಸುಧಿಗೆ ಈಗಾಗಲೇ 1119 ಸಬ್‌ಸ್ಕ್ರೈಬರ್‌ಗಳು ಆಗಿದ್ದಾರೆ. ಒಬ್ಬರಿಂದ 199 ರೂಪಾಯಿ ಚಾರ್ಜ್ ಮಾಡ್ತಾರೆ. ಅಂದರೆ, ಈಗಾಗಲೇ ಸುಮಾರು 2.25 ಲಕ್ಷ ರೂಪಾಯಿ ರೇಣು ಕೈ ಸೇರಿರಬೇಕು. ಸಬ್‌ಸ್ಕ್ರೈಬರ್‌ಗಳಿಗಾಗಿ ರೇಣು ಪೋಸ್ಟ್ ಮಾಡಿದ ಎಕ್ಸ್‌ಕ್ಲೂಸಿವ್ ಕಂಟೆಂಟ್‌ಗಳನ್ನು ಕೆಲವರು ಸ್ಕ್ರೀನ್‌ಶಾಟ್ ತೆಗೆದು ಲೀಕ್ ಮಾಡಿದ್ದಾರೆ. ರೇಣು ಯಾಕೆ ಈ ರೀತಿ ಎಕ್ಸ್‌ಕ್ಲೂಸಿವ್ ಕಂಟೆಂಟ್ ಸಬ್‌ಸ್ಕ್ರಿಪ್ಷನ್ ಶುರು ಮಾಡಿದರು ಎಂಬ ಚರ್ಚೆಯೂ ನಡೆಯುತ್ತಿದೆ.
ರೇಣು ಏನಾದ್ರೂ ತೋರಿಸಿಕೊಳ್ಳಲಿ, ಅದನ್ನು ನೋಡೋಕೆ ಜನಾನೂ ಇದ್ದಾರೆ. ಹಾಗಿದ್ದ ಮೇಲೆ ರೇಣು ಕಾರಣದಿಂದ ಕೇರಳಕ್ಕೆ ಏನು ನಷ್ಟವಾಯ್ತು ಅಂತ ಟೀಕಾಕಾರರು ಹೇಳ್ತಿದ್ದಾರೆ? ಇಷ್ಟು ದಿನ ವೀಕ್ಷಕರಿಗಾಗಿ ಮಾಡುತ್ತಿದ್ದನ್ನೇ ಈಗ ಸಬ್‌ಸ್ಕ್ರಿಪ್ಷನ್ ಮೂಲಕ ದುಡ್ಡು ಪಡೆದು ಮಾಡುತ್ತಿದ್ದಾರೆ, ಅಷ್ಟೇ," ಎಂದು ಸಾಯಿಕೃಷ್ಣ ವಿವರಿಸಿದ್ದಾರೆ.
55
ಟೀಕೆಗಳು ಬಂದಾಗ ರೇಣು ಇನ್ನಷ್ಟು ಎಕ್ಸ್‌ಪೋಸ್ ಮಾಡುತ್ತಾರೆ
ಕೇರಳದಲ್ಲಿ ಹೊಕ್ಕಳು ತೋರಿಸಲು, ದೇಹದ ಮುಂಭಾಗ-ಹಿಂಭಾಗವನ್ನು ಕೂತು, ನಿಂತು, ಮಲಗಿ ತೋರಿಸಲು ಮಾತ್ರ ಬಳಸಲಾಗುತ್ತಿದೆ. ಇಂಥ ಕೆಟ್ಟ ಕೆಲಸಗಳಿಗೆ ಈ ಫೀಚರ್ ಬಳಸುತ್ತಾರೆ ಅಂತ ಮೆಟಾ ಕಂಪನಿಯವರೇ ಯೋಚಿಸಿರಲಿಕ್ಕಿಲ್ಲ. ರೇಣುಗೆ ಹಾಡು ಹೇಳುವ ಪ್ರತಿಭೆ ಇದೆ. ಆದರೆ ಅವರು ಆಯ್ಕೆ ಮಾಡಿಕೊಂಡ ದಾರಿ ಹೊಕ್ಕಳು ಮತ್ತು ದೇಹದ ಭಾಗ ತೋರಿಸುವುದು. ಅದನ್ನು ನೋಡಲು ಜನ ದುಡ್ಡು ಕೊಟ್ಟು ಸೇರುತ್ತಿದ್ದಾರೆ. ರೇಣುಗೆ ಟೀಕೆಗಳು ಹೊಸದೇನಲ್ಲ. ಟೀಕೆಗಳು ಬಂದಾಗ ರೇಣು ಇನ್ನಷ್ಟು ಎಕ್ಸ್‌ಪೋಸ್ ಮಾಡುತ್ತಾರೆ ಎಂದು ಸಾಯಿಕೃಷ್ಣ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.