ಬಾಲಯ್ಯ ಮಗಳನ್ನ ಮದುವೆಯಾಗುವ ಆಫರ್‌ಅನ್ನು ಮಹೇಶ್‌ ಬಾಬು ಯಾಕೆ ರಿಜೆಕ್ಟ್ ಮಾಡಿದ್ರು?

First Published | Oct 10, 2024, 6:43 PM IST

ಮಹೇಶ್ ಬಾಬು, ಹೀರೋ ಬಾಲಕೃಷ್ಣ ಅವರ ಮಗಳನ್ನು ಮದುವೆ ಆಗ್ಬೇಕಿತ್ತಂತೆ. ಬಾಲಯ್ಯ ಸ್ವತಃ ಕೇಳಿದ್ರೂ ಮಹೇಶ್ ಬಾಬು ಆಗೋದೇ ಇಲ್ಲ ಎಂದಿದ್ದರು. ಮಹೇಶ್‌ ಬಾಬು ಹೀಗೆ ಹೇಳಿದ್ದಕ್ಕೆ ಕಾರಣವೇನು?

ಮಹೇಶ್ ಬಾಬು ಮಿಸ್ಟರ್ ಪರ್ಫೆಕ್ಟ್. ವಿವಾದಗಳಿಂದ ದೂರ. ಒಳ್ಳೆ ಗಂಡ. ಅಷ್ಟೇ ಒಳ್ಳೆ ಅಪ್ಪ. ಸಿನಿಮಾ ಬಿಟ್ಟರೆ ಫ್ಯಾಮಿಲಿನೇ ಅವ್ರ ಪ್ರಪಂಚ. ಫ್ರೀ ಟೈಮ್ ಸಿಕ್ಕಿದ್ರೆ ಫ್ಯಾಮಿಲಿ ಜೊತೆ ಟ್ರಿಪ್ ಹೋಗ್ತಾರೆ. ಇಲ್ಲಾಂದ್ರೆ ಮನೇಲೇ ಇರ್ತಾರೆ. 
 

ಮಹೇಶ್ ಬಾಬು

ಪಾರ್ಟಿಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲ್ಲ. ಮನೇಲಿ ಇದ್ರೆ ಒಂದು ಪುಟ್ಟ ಮಗುವಿನ ತರ. ಗೌತಮ್, ಸಿತಾರ ಜೊತೆ ಆಟ ಆಡ್ತಾರೆ. ಹೊಸ ಸಿನಿಮಾ, ಸೀರಿಯಲ್ ನೋಡೋದು, ಇಷ್ಟದ ಪುಸ್ತಕ ಓದೋದು ಅವ್ರಿಗೆ ಇಷ್ಟ. ಸೋಶಿಯಲ್ ಮೀಡಿಯಾ ಫಾಲೋ ಮಾಡ್ತಾರೆ. 

ಸ್ಟಾರ್ ಹೀರೋ, ಒಳ್ಳೆ ಹುಡುಗ.ಇನ್ನೇನು ಬೇಕು? ಅದಕ್ಕೆ ಬಾಲಕೃಷ್ಣ ಸೂಪರ್ ಸ್ಟಾರ್ ಕೃಷ್ಣ ಜೊತೆ ವಿಷಯ ಮುಂದಿಟ್ಟರಂತೆ. ಮಹೇಶ್ ಬಾಬುಗೆ ತಮ್ಮ ಮಗಳು ಬ್ರಾಹ್ಮಣಿ ಕೊಟ್ಟು ಮದುವೆ ಮಾಡಲು ಒಪ್ಪಿಗೆ ಕೇಳಿದ್ರಂತೆ. ಬಾಲಕೃಷ್ಣ ಮಹೇಶ್ ಜೊತೆಯೂ ಈ ಹಂತದಲ್ಲಿ ಮಾತಾಡಿದ್ರಂತೆ. ನಮ್ಮ ದೊಡ್ಡಮಗಳು ಬ್ರಾಹ್ಮಣಿಯನ್ನ ಮದುವೆ ಆಗ್ತಿಯಾ ಅಂತ ನೇರವಾಗಿಯೇ ಅವರು ಕೇಳಿದ್ದಕ್ಕೆ, ಮಹೇಶ್‌ ಬಾಬು ಅಷ್ಟೇ ನೇರವಾಗಿ ಆಗೋದಿಲ್ಲ ಎಂದಿದ್ದರು.

Tap to resize

ಆಗ್ಲೇ ಮಹೇಶ್ ಬಾಬು ನಮ್ರತಾ ಜೊತೆ ಲವ್‌ನಲ್ಲಿ ಇದ್ದಿದ್ದರಿಂದ ಬ್ರಾಹ್ಮಣಿನ ಮದುವೆ ಆಗಲ್ಲ ಅಂದ್ರಂತೆ. ಬಾಲಕೃಷ್ಣ ಬ್ರಾಹ್ಮಣಿನ ಲೋಕೇಶ್‌ಗೆ ಮದುವೆ ಮಾಡಿದ್ರು. ಮಹೇಶ್ ಮದುವೆ ಆದ ಎರಡು ವರ್ಷಕ್ಕೆ ಲೋಕೇಶ್-ಬ್ರಾಹ್ಮಣಿ ಮದುವೆ ಆಯ್ತು. ಆದ್ರೆ ಇದಕ್ಕೆ ಯಾವ ಅಧಿಕೃತ ಮಾಹಿತಿ ಇಲ್ಲ.  

ವಂಶಿ ಚಿತ್ರದ ಶೂಟಿಂಗ್‌ನಲ್ಲಿ ಮಹೇಶ್ ಬಾಬು ನಮ್ರತಾ ಶಿರೋಡ್ಕರ್ ಜೊತೆ ಲವ್‌ನಲ್ಲಿ ಬಿದ್ದರು. ಐದು ವರ್ಷದ ಪ್ರೀತಿ ಬಳಿಕ ಮದುವೆ ಆದ್ರು. 
 

2005ರಲ್ಲಿ ನಮ್ರತಾರನ್ನ ಮಹೇಶ್ ಬಾಬು ಸೀಕ್ರೆಟ್ ಆಗಿ ಮದುವೆ ಆದ್ರು. ಫ್ಯಾಮಿಲಿ ಮೆಂಬರ್ಸ್ ಇದ್ರೂ ಮೀಡಿಯಾಗೆ ಗೊತ್ತಾಗ್ಲಿಲ್ಲ. ಸಿಂಪಲ್ ಆಗಿ ಮದುವೆ ಆಯ್ತು. ಆಗ ಮಹೇಶ್ ಮದುವೆ ದೊಡ್ಡ ನ್ಯೂಸ್ ಆಗಿತ್ತು. 

ಇಬ್ಬರು ಮಕ್ಕಳು. ಗೌತಮ್, ಸಿತಾರ. ಫ್ಯಾಮಿಲಿ ನೋಡ್ಕೊಳ್ತಾ ಸೋಶಿಯಲ್ ವರ್ಕ್ ಮಾಡ್ತಾರೆ. ಹಾರ್ಟ್ ಪ್ರಾಬ್ಲಮ್ ಇರೋ ಮಕ್ಕಳಿಗೆ ಆಪರೇಷನ್ ಮಾಡಿಸ್ತಾರೆ. ಎರಡು ಊರುಗಳನ್ನ ದತ್ತು ತಗೊಂಡು ಅಭಿವೃದ್ಧಿ ಮಾಡ್ತಿದ್ದಾರೆ. ಮಹೇಶ್ ಬಾಬು ನಿಜವಾದ ಹೀರೋ. 

ಮಹೇಶ್ ಬಾಬು ಈಗ ಎಸ್ಎಸ್ಎಂಬಿ 27 ಸಿನಿಮಾ ಮಾಡ್ತಿದ್ದಾರೆ. ರಾಜಮೌಳಿ ಡೈರೆಕ್ಷನ್. ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್. 800 ಕೋಟಿ ಬಜೆಟ್ ಅಂತೆ. ರೈಟರ್ ವಿಜಯೇಂದ್ರ ಪ್ರಸಾದ್ ಇದರ ಸ್ಟೋರಿ ರೆಡಿ ಮಾಡೋಕೆ ಎರಡು ವರ್ಷ ಬೇಕಾಯ್ತು ಅಂತ ಹೇಳಿದ್ದಾರೆ.

ಜನವರಿಯಿಂದ ಶೂಟಿಂಗ್ ಶುರು ಅಂತ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಜಂಗಲ್ ಆಕ್ಷನ್ ಅಡ್ವೆಂಚರ್ ಸ್ಟೋರಿ. ಮಹೇಶ್ ಬಾಬು ಒಬ್ಬ ಅಡ್ವೆಂಚರರ್ ಪಾತ್ರ. ಮಹೇಶ್ ಲುಕ್ ಚೇಂಜ್ ಮಾಡಿಕೊಂಡಿದ್ದು, ಗಡ್ಡ, ಉದ್ದ ಕೂದಲು ಬಿಟ್ಟಿದ್ದಾರೆ. ಫ್ಯಾನ್ಸ್‌ಗೆ ಹೊಸ ಲುಕ್ ಕುತೂಹಲ ಹುಟ್ಟಿಸಿದೆ. 

Latest Videos

click me!