ಇದು ಬರೀ ಪ್ರಚಾರಕ್ಕೆ ಮಾಡಿದ್ದಾದರೂ, ಅಥವಾ ಅವರಿಬ್ಬರೂ ಜಸ್ಟ್ ಫ್ರೆಂಡ್ಸ್ ಆಗಿದ್ದರೂ ಇಂತದ್ದೊಂದು ಸುದ್ದಿ ಮಾತ್ರ ಕೇಳಿ ಬಂದಿತ್ತು.
ನಟಿ ಅನನ್ಯಾ ಪಾಂಡೆ ತಂದೆ ಚಂಕಿ ಪಾಂಡೆ ಅವರೂ ಇದನ್ನು ತಿಳಿದಿದ್ದರು.
ಚಂಕಿ ಪಾಂಡೆ ಮಗಳು ಅನನ್ಯಾ ಜೊತೆ ಮನೀಶ್ ಪೌಲ್ ನಡೆಸಿಕೊಡುವ ಮೂವಿಸ್ ಮಸ್ತಿ ಕಾರ್ಯಕ್ರಮಕ್ಕೆ ಬಂದಿದ್ದರು.
ಈ ಸಂದರ್ಭ ನಿರೂಪಕ ಹಲವು ಬಾರಿ ಅನನ್ಯಾ ಪಾಂಡೆಗೆ ಕಾರ್ತಿಕ್ ಜೊತೆಗಿನ ಸಂಬಂಧ ಪ್ರಸ್ತಾಪಿಸಿ ಟಾಂಟ್ ಕೊಟ್ಟಿದ್ದ.
ಈ ಸಂದರ್ಭ ಪ್ರತಿಕ್ರಿಯಿಸಿದ ಅನನ್ಯಾ ತಂದೆ ಆಕೆಯ ಬಾಯ್‌ಫ್ರೆಂಡ್ಸ್ ಮತ್ತು ಪ್ಯೂಚರ್ ಹಸ್ಬೆಂಡ್‌ಗೆ ವಾರ್ನ್ ಮಾಡಿ ಆಕೆಯನ್ನು ಹ್ಯಾಂಡಲ್ ಮಾಡೋದು ತುಂಬಾ ಕಷ್ಟ ಎಂದಿದ್ದಾರೆ.
ಇದಕ್ಕೆ ಉತ್ತರಿಸಿದ ನಟಿ ಅನನ್ಯಾ ಅಪ್ಪ ಹೇಳಿದ ಮೇಲೆ ಯಾರೂ ಮದುವೆಯಾಗಲು ಬಯಸುವುದಿಲ್ಲ ಎಂದಿದ್ದಾರೆ.
Suvarna News