ನಟ ವಿಜಯ್ ದೇವರಕೊಂಡ ಬಿಸ್ನೆಸ್‌ನಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ಈಗಾಗಲೇ ಬಟ್ಟೆ ಬ್ರ್ಯಾಂಡ್ ಒಂದನ್ನು ನಡೆಸುತ್ತಿರುವ ಅವರು, ಈಗ ಮತ್ತೊಂದು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಅದುವೇ ಬ್ಯೂಟಿ ಮತ್ತು ಸ್ಕಿನ್‌ಕೇರ್ ಬ್ರ್ಯಾಂಡ್. ಈ ಬಿಸ್ನೆಸ್ ಶುರು ಮಾಡಿದ್ದೇಕೆ ಅಂತ ವಿಜಯ್ ಅವರೇ ವಿವರಿಸಿದ್ದಾರೆ.
ವಿಜಯ್ ದೇವರಕೊಂಡ ಸಿನಿಮಾ ಮಾತ್ರವಲ್ಲದೆ, ಬಿಸ್ನೆಸ್‌ನಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈಗಾಗಲೇ 'ರೌಡಿ' (RWDY) ಹೆಸರಿನ ಬಟ್ಟೆ ಬ್ರ್ಯಾಂಡ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇದರ ಜೊತೆಗೆ, ಮಹಬೂಬ್‌ನಗರದಲ್ಲಿ 'ಏಷ್ಯನ್ ವಿಜಯ್ ದೇವರಕೊಂಡ' (AVD) ಸಿನಿಮಾಸ್ ಹೆಸರಿನಲ್ಲಿ ಮಲ್ಟಿಪ್ಲೆಕ್ಸ್ ಕೂಡ ಆರಂಭಿಸಿದ್ದಾರೆ. ಇದೀಗ 'ಅನ್‌ಹೈಪ್' (Unhype) ಎಂಬ ಹೊಸ ಬ್ಯೂಟಿ ಮತ್ತು ಸ್ಕಿನ್‌ಕೇರ್ ಬ್ರ್ಯಾಂಡ್‌ನ ಸಹ-ಸಂಸ್ಥಾಪಕ ಹಾಗೂ ಪಾಲುದಾರರಾಗಿದ್ದಾರೆ. ಹೈದರಾಬಾದ್‌ನ ಮೇಡ್ಚಲ್ ಅಥವಾ ಮಲ್ಕಾಜ್‌ಗಿರಿ ಪ್ರದೇಶದಲ್ಲಿ ಮತ್ತೊಂದು ಮಲ್ಟಿಪ್ಲೆಕ್ಸ್ ನಿರ್ಮಿಸುವ ಯೋಜನೆಯಲ್ಲಿದ್ದಾರೆ.
23
ಸ್ವಂತವಾಗಿ ಪರೀಕ್ಷಿಸಿದ ಉತ್ಪನ್ನಗಳು
ಈ ಬ್ರ್ಯಾಂಡ್ ಕೇವಲ ಪ್ರಚಾರಕ್ಕೆ ಸೀಮಿತವಾಗಿಲ್ಲ, ಬದಲಾಗಿ ನಿಜವಾದ ಫಲಿತಾಂಶ ನೀಡುವುದೇ ಇದರ ಗುರಿ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಬ್ರ್ಯಾಂಡ್ ಅಂಬಾಸಿಡರ್ ಆಗಿರುತ್ತಾರೆ. ಆದರೆ ವಿಜಯ್ ದೇವರಕೊಂಡ ಈ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಭಾಗದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಹವಾಮಾನಕ್ಕೆ ತಕ್ಕಂತೆ, ಅಂದರೆ ಅತಿಯಾದ ಬಿಸಿಲು, ತೇವಾಂಶ, ಮಾಲಿನ್ಯ, ಗಡಸು ನೀರಿನಿಂದ ಚರ್ಮವನ್ನು ರಕ್ಷಿಸುವಂತೆ ಈ ಉತ್ಪನ್ನಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ತರುವ ಮುನ್ನ ಸುಮಾರು ಒಂಬತ್ತು ತಿಂಗಳ ಕಾಲ ತಾವೇ ಸ್ವತಃ ಬಳಸಿ ಪರೀಕ್ಷೆ ಮಾಡಿರುವುದಾಗಿ ವಿಜಯ್ ಹೇಳಿದ್ದಾರೆ.
33
ಯಾವ ರೀತಿಯ ಉತ್ಪನ್ನಗಳು
ವಿಜಯ್ ದೇವರಕೊಂಡ ಆರಂಭಿಸಿರುವ ಈ ಹೊಸ ಬ್ರ್ಯಾಂಡ್, ಮುಖ್ಯವಾಗಿ 18 ರಿಂದ 30 ವರ್ಷ ವಯಸ್ಸಿನ ಯುವಜನತೆಯನ್ನು ಗುರಿಯಾಗಿಸಿಕೊಂಡಿದೆ. ಇದು ಯುನಿಸೆಕ್ಸ್ ಬ್ರ್ಯಾಂಡ್ ಆಗಿದ್ದು, ಮಹಿಳೆಯರು ಮತ್ತು ಪುರುಷರು ಇಬ್ಬರೂ ಬಳಸಬಹುದು. ಆರಂಭಿಕ ಹಂತದಲ್ಲಿ 'ಆಕ್ನೆ ಸೇಫ್ ರೂಟೀನ್' ಮತ್ತು 'ಬ್ರೈಟನಿಂಗ್ ರೂಟೀನ್' ಹೆಸರಿನಲ್ಲಿ ಎರಡು ಬಗೆಯ ಕಾಂಬೋ ಪ್ಯಾಕ್‌ಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ಫೇಸ್ ವಾಶ್, ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್ ಇರಲಿದೆ. ಈ ಉತ್ಪನ್ನಗಳು ಬ್ರ್ಯಾಂಡ್‌ನ ಅಧಿಕೃತ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಈಗಾಗಲೇ ಪ್ರೀ-ಬುಕಿಂಗ್ ಕೂಡ ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.