ಟಿಬಿಯಿಂದಲೂ ನಟಿ ಬಳಲಬೇಕಾಗಿ ಬಂದಿತು.
ಕಳೆದ ಎರಡು ವರ್ಷದಿಂದ ಡಾಯಾಬಿಟಿಸ್ ಟೈಪ್ 1 ಸಹ ಅವರನ್ನು ಕಾಡುತ್ತಿದೆ.
ಈ ಎಲ್ಲ ಸಮಸ್ಯೆಗಳೆ ಅವರನ್ನು ಮತ್ತೆ ಮತ್ತೆ ಪುಟಿದೇಳುವಂತೆ ಮಾಡಿದೆ.
ಮಾಡೆಲ್ ಆಗಿಯೂ ನಟಿ ಗುರುತಿಸಿಕೊಂಡವರು.
2006 ರ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದರು.
ಸೋನಿ ಟಿವಿಯ ಸಾಸ್ ಬಿನಾ ಸಸುರಾಲ್ ಮೂಲಕ ಜನ ಮನ ಗೆದ್ದರು.
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು.
ಟೆಲಿವಿಶಿನ್ ಸೀರಿಯಲ್ ಗಳ ಮೂಲಕ ಜನರ ಪ್ರೀತಿ ಗಳಿಸಿಕೊಂಡರು.
ಕನ್ನಡದ ಒಂದು ಮೊಟ್ಟೆಯ ಕತೆ ಚಿತ್ರದ ರೀಮೇಕ್ ಉಜಡಾ ಚಮನ್ ನವೆಂಬರ್ 1 ರಂದು ರಿಲೀಸ್ ಆಗಲಿದೆ.
ಉಜಡಾ ಚಮನ್ ಟ್ರೇಲರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದು ಸಾಂಗ್ ಗಳಿಗೂ ಮೆಚ್ಚುಗೆ ಸಿಕ್ಕಿದೆ.