Trisha krishnan ಚೆನ್ನೈನಲ್ಲಿ ನಡೆದ ಸಿ ಜೋಸೆಫ್ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಟಿ ತ್ರಿಷಾ ಭಾಗವಹಿಸಿ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನೀಲಿ ರೇಷ್ಮೆ ಸೀರೆ ಧರಿಸಿದ್ದ ನಟಿ ಜವಾಹರಲಾಲ್ ನೆಹರು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತೆ ಗಮನ ಸೆಳೆದರು.
ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾದ ಕ್ಷಣಕ್ಕೆ ನಟಿ Trisha Krishnan ಸಾಕ್ಷಿಯಾಗಿದ್ದು ಈಗ ಸಿನಿ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. Vijay ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ತ್ರಿಷಾ ಅವರ ಹಾಜರಾತಿ ಎಲ್ಲರ ಗಮನ ಸೆಳೆದಿದೆ.
24
ನೀಲಿ ಬಣ್ಣದ ರೇಷ್ಮೆ ಸೀರೆ
ಚೆನ್ನೈನ Jawaharlal Nehru Stadiumನಲ್ಲಿ ನಡೆದ ಭವ್ಯ ಸಮಾರಂಭಕ್ಕೆ ನೀಲಿ ಬಣ್ಣದ ರೇಷ್ಮೆ ಸೀರೆಯಲ್ಲಿ ಆಗಮಿಸಿದ ತ್ರಿಷಾ, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಗೋಲ್ಡನ್ ಕಸೂತಿ ಬ್ಲೌಸ್, ಡೈಮಂಡ್ ಕಿವಿಯೋಲೆ, ರೂಬಿ ಚೋಕರ್, ಚಿಕ್ಕ ಬಿಂದಿ ಹಾಗೂ ಮಲ್ಲಿಗೆ ಹೂವಿನ ಅಲಂಕಾರ ಅವರ ಲುಕ್‌ಗೆ ಮತ್ತಷ್ಟು ಮೆರಗು ತಂದಿತ್ತು. ಸಮಾರಂಭದಲ್ಲಿ ಕ್ಯಾಮೆರಾಗಳ ಗಮನ ಬಹುತೇಕ ಸಮಯ ತ್ರಿಷಾ ಅವರತ್ತಲೇ ನೆಟ್ಟಿತ್ತು.
34
ತ್ರಿಷಾ ಸ್ಪರ್ಧಿ
ಇದೇ ವೇಳೆ, ವಿಜಯ್ ರಾಜಕೀಯ ಪ್ರವೇಶದ ನಂತರ ಖಾಲಿಯಾಗಲಿರುವ ಕ್ಷೇತ್ರದಿಂದ ತ್ರಿಷಾ ಸ್ಪರ್ಧಿಸಬಹುದು ಎಂಬ ವದಂತಿಗಳು ಕೂಡ ಹರಿದಾಡುತ್ತಿವೆ. ಈ ಹಿನ್ನೆಲೆ ಅವರ ಸಮಾರಂಭದ ಹಾಜರಾತಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ವಿಜಯ್ ಅವರ ಪೋಷಕರು ಹಾಗೂ ಕುಟುಂಬ ಸದಸ್ಯರೂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
44
ವಿಜಯ್ ಮತ್ತು ತ್ರಿಷಾ ಅವರ ಸಂಬಂಧ
ಚುನಾವಣಾ ಸಮಯದಲ್ಲಿ ವಿಜಯ್ ಮತ್ತು ತ್ರಿಷಾ ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ವಿಜಯ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವದಂತಿಗಳಲ್ಲೂ ತ್ರಿಷಾ ಹೆಸರು ಕೇಳಿಬಂದಿತ್ತು. ಆದರೆ ಈ ಎಲ್ಲ ಸುದ್ದಿಗಳನ್ನು ತಾರೆಯ ಆಪ್ತರು ತಳ್ಳಿಹಾಕಿದ್ದರು.
ಇತ್ತೀಚೆಗೆ ಟಿವಿಕೆ ಅಲೆ ಸೃಷ್ಟಿಸಿ ಭರ್ಜರಿ ಗೆಲುವು ಸಾಧಿಸಿದ್ದ ವಿಜಯ್ ಅವರನ್ನು ಅಭಿನಂದಿಸಲು ತ್ರಿಷಾ ಅವರ ಮನೆಗೆ ಭೇಟಿ ನೀಡಿದ್ದರು ಎನ್ನುವ ವರದಿಗಳೂ ವೈರಲ್ ಆಗಿದ್ದವು. ಈಗ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿನ ಅವರ ಹಾಜರಾತಿ ಮತ್ತೆ ಹೊಸ ಚರ್ಚೆಗೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.