ನೀವು ಸೈಕೋ ಥ್ರಿಲ್ಲರ್ ಸಿನಿಮಾಗಳ ಅಭಿಮಾನಿಯಾ? ಹಾಗಾದ್ರೆ ನಿಮ್ಮ ನಿದ್ದೆ ಕದಿಯುವ, ಹೈ IMDb ರೇಟಿಂಗ್ ಇರುವ ತಮಿಳು ಮತ್ತು ಮಲಯಾಳಂನ ಟಾಪ್ 5 ಸೀರಿಯಲ್ ಕಿಲ್ಲರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ.
ಸೀಟ್ ತುದಿಯಲ್ಲಿ ಕೂರಿಸುವ 5 ಸೀರಿಯಲ್ ಕಿಲ್ಲರ್ ಸಿನಿಮಾಗಳು!
ಕೊಲೆ ರಹಸ್ಯ, ಟ್ವಿಸ್ಟ್ಗಳು ಹಾಗೂ ಪೊಲೀಸರ ತನಿಖೆ ಅಂದ್ರೆ ಥ್ರಿಲ್ಲರ್ ಸಿನಿಮಾ ಪ್ರಿಯರಿಗೆ ಎಲ್ಲಿಲ್ಲದ ಕ್ರೇಜ್. ಅದರಲ್ಲೂ ಮುಂದಿನ ಕೊಲೆ ಯಾವಾಗ ನಡೆಯುತ್ತೆ? ಕೊಲೆಗಾರ ಯಾರು? ಅವನ ಉದ್ದೇಶವೇನು? ಅನ್ನೋ ಪ್ರಶ್ನೆಗಳು ವೀಕ್ಷಕರನ್ನು ಸೀಟ್ ತುದಿಯಲ್ಲಿ ಕೂರಿಸುತ್ತವೆ. ಭಾರತದಲ್ಲಿ ರಿಲೀಸ್ ಆದ ಬೆಸ್ಟ್ 5 ಸೀರಿಯಲ್ ಕಿಲ್ಲರ್ ಸಿನಿಮಾಗಳ ಬಗ್ಗೆ ನಾವಿಂದು ಹೇಳ್ತೀವಿ.
26
1. ರಾಕ್ಷಸನ್ (Ratsasan) – IMDb ರೇಟಿಂಗ್: 8.3/10
ತಮಿಳು ಸಿನಿಮಾರಂಗದಲ್ಲಿ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಅಂದಾಕ್ಷಣ ಮೊದಲು ನೆನಪಾಗೋದೇ 'ರಾಕ್ಷಸನ್'. ರಾಮ್ ಕುಮಾರ್ ಅವರು 2018ರಲ್ಲಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿಷ್ಣು ವಿಶಾಲ್ ಮತ್ತು ಅಮಲಾ ಪೌಲ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಡೈರೆಕ್ಟರ್ ಆಗಬೇಕು ಅನ್ನೋ ಕನಸು ಕಂಡಿದ್ದ ಅರುಣ್, ಅನಿವಾರ್ಯವಾಗಿ ಪೊಲೀಸ್ ಕೆಲಸಕ್ಕೆ ಸೇರುತ್ತಾನೆ. ಶಾಲಾ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುವ ಸೀರಿಯಲ್ ಕಿಲ್ಲರ್ ಬೆನ್ನತ್ತಿ ಅವನು ಹೋಗುತ್ತಾನೆ. ಪ್ರತಿಯೊಂದು ಸುಳಿವು ಹೊಸ ಪ್ರಶ್ನೆ ಹುಟ್ಟುಹಾಕುತ್ತದೆ. ಇದರ ಬಿಜಿಎಂ ಕೂಡ ಅದ್ಭುತವಾಗಿದೆ. IMDb ಯಲ್ಲಿ 8.3 ರೇಟಿಂಗ್ ಪಡೆದಿರುವ ಈ ಚಿತ್ರವನ್ನು ಕ್ರೈಮ್ ಥ್ರಿಲ್ಲರ್ ಫ್ಯಾನ್ಸ್ ಮಿಸ್ ಮಾಡಲೇಬಾರದು.
ವಿಘ್ನೇಶ್ ರಾಜಾ ಅವರು 2023ರಲ್ಲಿ 'ಪೋರ್ ತೊಳಿಲ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅಶೋಕ್ ಸೆಲ್ವನ್ ಹಾಗೂ ಶರತ್ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಅನುಭವವಿಲ್ಲದ ಯುವ ಪೊಲೀಸ್ ಅಧಿಕಾರಿಯೊಬ್ಬ, ಕಟ್ಟುನಿಟ್ಟಾದ ಹಿರಿಯ ಅಧಿಕಾರಿಯ ಜೊತೆ ಸೇರಿ ಸರಣಿ ಕೊಲೆಗಳ ತನಿಖೆಗಿಳಿಯುತ್ತಾನೆ. ಆರಂಭದಲ್ಲಿ ಭಯಪಡುವ ಯುವ ಅಧಿಕಾರಿ, ಆಮೇಲೆ ತನ್ನ ಬುದ್ಧಿವಂತಿಕೆ ಹಾಗೂ ಧೈರ್ಯವನ್ನು ಹೇಗೆ ಪ್ರದರ್ಶಿಸುತ್ತಾನೆ ಅನ್ನೋದೇ ಕಥೆ. ಕೊಲೆಗಾರನ ಹುಡುಕಾಟ, ಸಿಗುವ ಸುಳಿವುಗಳು ಹಾಗೂ ಅನಿರೀಕ್ಷಿತ ಟ್ವಿಸ್ಟ್ಗಳು ಸಿನಿಮಾವನ್ನು ರೋಚಕವಾಗಿಸಿವೆ. ಅದ್ಭುತ ಚಿತ್ರಕಥೆ ಹಾಗೂ ನಟನೆಯಿಂದಾಗಿ ಈ ಸಿನಿಮಾ ವೀಕ್ಷಕರ ಮನಗೆದ್ದಿದೆ. IMDb ಯಲ್ಲಿ ಇದು 8.0 ರೇಟಿಂಗ್ ಪಡೆದಿದೆ.
ಜೀತು ಜೋಸೆಫ್ ಅವರು 2013ರಲ್ಲಿ 'ಮೆಮೊರೀಸ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ಭಾರಿ ಆಘಾತ ಅನುಭವಿಸಿದ ಮಾಜಿ ಪೊಲೀಸ್ ಅಧಿಕಾರಿ ಸ್ಯಾಮ್ ಅಲೆಕ್ಸ್, ಒಂದೇ ರೀತಿಯಲ್ಲಿ ನಡೆಯುವ ಕೊಲೆಗಳ ತನಿಖೆಗಿಳಿಯುತ್ತಾನೆ. ತನಿಖೆ ಮುಂದಾದಂತೆ ಕೊಲೆಗಳ ಹಿಂದಿನ ರಹಸ್ಯ ಮತ್ತಷ್ಟು ಕಗ್ಗಂಟಾಗುತ್ತದೆ. ಕೊನೆವರೆಗೂ ಕೊಲೆಗಾರ ಯಾರು ಅನ್ನೋ ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಮಲಯಾಳಂ ಥ್ರಿಲ್ಲರ್ ಇಷ್ಟಪಡುವವರು ನೋಡಲೇಬೇಕಾದ ಸಿನಿಮಾ ಇದು. IMDb ಯಲ್ಲಿ ಇದು 8.0 ರೇಟಿಂಗ್ ಪಡೆದಿದೆ.
ಮಿಥುನ್ ಮ್ಯಾನುಯೆಲ್ ಥಾಮಸ್ ಅವರು 2020ರಲ್ಲಿ ಈ ಮಲಯಾಳಂ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕುಂಚಾಕೋ ಬೋಬನ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುವ ಸೀರಿಯಲ್ ಕಿಲ್ಲರ್ ಕಥೆಯನ್ನು ಈ ಸಿನಿಮಾ ಹೊಂದಿದೆ. ಸರಣಿ ಕೊಲೆಗಳಿಂದ ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿಬೀಳುತ್ತದೆ. ಕೊಲೆಗಾರನ ಉದ್ದೇಶವೇನು? ಮುಂದಿನ ಟಾರ್ಗೆಟ್ ಯಾರು? ಅವನನ್ನು ಹಿಡಿಯುವುದು ಹೇಗೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ಹುಡುಕುವ ತನಿಖೆ ರೋಚಕವಾಗಿದೆ. ಪೊಲೀಸರ ಪ್ರಯತ್ನ ಹಾಗೂ ಕೊಲೆಗಾರನ ಪ್ಲಾನ್ಗಳ ನಡುವಿನ ಕಣ್ಣಾಮುಚ್ಚಾಲೆ ಆಟ ಸಿನಿಮಾದ ಹೈಲೈಟ್. ಕ್ರೈಮ್ ಥ್ರಿಲ್ಲರ್ ಪ್ರಿಯರಿಗೆ ಹೇಳಿಮಾಡಿಸಿದ ಈ ಸಿನಿಮಾ IMDb ಯಲ್ಲಿ 7.9 ರೇಟಿಂಗ್ ಪಡೆದಿದೆ.
ಗೌತಮ್ ವಾಸುದೇವ್ ಮೆನನ್ ಅವರು 2006ರಲ್ಲಿ 'ವೇಟ್ಟೈಯಾಡು ವಿಳೈಯಾಡು' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ಜ್ಯೋತಿಕಾ ಹಾಗೂ ಪ್ರಕಾಶ್ ರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತಮಿಳು ಸಿನಿಮಾರಂಗದ ಬೆಸ್ಟ್ ಪೊಲೀಸ್ ಥ್ರಿಲ್ಲರ್ಗಳಲ್ಲಿ ಒಂದಾಗಿ ಈ ಸಿನಿಮಾ ಇಂದಿಗೂ ಫೇಮಸ್. ಪೊಲೀಸ್ ಅಧಿಕಾರಿ ರಾಘವನ್, ಸರಣಿ ಕೊಲೆಗಾರರನ್ನು ಹುಡುಕಿಕೊಂಡು ತನಿಖೆ ನಡೆಸುತ್ತಾನೆ. ತನಿಖೆ ಸಾಗಿದಂತೆ ಕೊಲೆಗಳ ಹಿಂದಿನ ಆಘಾತಕಾರಿ ಸತ್ಯಗಳು ಹೊರಬರುತ್ತವೆ. ಕಮಲ್ ಹಾಸನ್ ಅವರ ಪೊಲೀಸ್ ಪಾತ್ರ, ನೈಜ ತನಿಖಾ ಶೈಲಿ ಹಾಗೂ ಬಿಗಿಯಾದ ಚಿತ್ರಕಥೆ ಈ ಸಿನಿಮಾದ ಪ್ಲಸ್ ಪಾಯಿಂಟ್. ಹಳೆಯ ಸಿನಿಮಾವಾದರೂ ಕ್ರೈಮ್ ಥ್ರಿಲ್ಲರ್ ಫ್ಯಾನ್ಸ್ ಮತ್ತೆ ಮತ್ತೆ ನೋಡಲು ಇಷ್ಟಪಡುವ ಚಿತ್ರವಿದು. IMDb ಯಲ್ಲಿ 7.9 ರೇಟಿಂಗ್ ಪಡೆದಿದೆ.
ಸೀರಿಯಲ್ ಕಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ 5 ಚಿತ್ರಗಳು ಭಿನ್ನ ಅನುಭವ ನೀಡುತ್ತವೆ. ಅನಿರೀಕ್ಷಿತ ಟ್ವಿಸ್ಟ್ಗಳಿಗೆ 'ರಾಕ್ಷಸನ್', ಪೊಲೀಸ್ ತನಿಖೆಯ ಸೂಕ್ಷ್ಮತೆಗೆ 'ಪೋರ್ ತೊಳಿಲ್', ರಹಸ್ಯ ಕಥೆಗೆ 'ಮೆಮೊರೀಸ್', ಸರಣಿ ಕೊಲೆಗಳ ತನಿಖೆಗೆ 'ಅಂಜಾಮ್ ಪಾತಿರಾ' ಹಾಗೂ ಖಡಕ್ ಪೊಲೀಸ್ ಪಾತ್ರಕ್ಕೆ 'ವೇಟ್ಟೈಯಾಡು ವಿಳೈಯಾಡು' ಬೆಸ್ಟ್ ಆಯ್ಕೆಗಳಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.