ಕೆಜಿಎಫ್ ರೇಂಜ್‌ನಲ್ಲಿ ನಟಿ ಟಬುಗೆ ಎಲಿವೇಶನ್: ನಾಗಾರ್ಜುನ ಜೊತೆ ರೊಮ್ಯಾನ್ಸ್ ಬಿಟ್ಟು ವಾರ್ ಶುರು!

Published : Nov 04, 2026, 09:05 PM IST

ನಾಗಾರ್ಜುನ ಅವರ 100ನೇ ಸಿನಿಮಾ 'ಕಿಂಗ್ 100'ರಲ್ಲಿ ಟಬು ಅವರು ಮಹಂತಿ ಝಾನ್ಸಿ ರಾಣಿ ಅನ್ನೋ ಪವರ್‌ಫುಲ್ ರಾಜಕಾರಣಿ ಪಾತ್ರ ಮಾಡ್ತಿದ್ದಾರೆ. ಟಬು ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಈ ಕ್ಯಾರೆಕ್ಟರ್ ಗ್ಲಿಂಪ್ಸ್ ರಿಲೀಸ್ ಮಾಡಿದೆ.

PREV
13
ಕಿಂಗ್ 100 ಸಿನಿಮಾದಲ್ಲಿ ಟಬು ಪಾತ್ರದ ಪರಿಚಯ

ತೆಲುಗು ಸಿನಿಮಾರಂಗದಲ್ಲಿ ನಾಗಾರ್ಜುನ ಹಾಗೂ ಟಬು ಜೋಡಿಗೆ ಸಪರೇಟ್ ಫ್ಯಾನ್ ಬೇಸ್ ಇದೆ. 'ನಿನ್ನೇ ಪೆಳ್ಳಾಡತಾ' ಸಿನಿಮಾದಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ರು. ಆದ್ರೆ, ಇಷ್ಟು ದಿನ ಲವರ್ಸ್ ಆಗಿ ಕಾಣಿಸಿಕೊಳ್ತಿದ್ದ ಈ ಜೋಡಿ, ಈಗ ಬದ್ಧ ವೈರಿಗಳಾಗಿ ಎದುರಾಗ್ತಿದ್ದಾರೆ. ನಾಗಾರ್ಜುನ ನಟನೆಯ 100ನೇ ಸಿನಿಮಾ 'ಕಿಂಗ್ 100'ರಲ್ಲಿ ಇವರಿಬ್ಬರು ಮುಖ್ಯ ಪಾತ್ರ ಮಾಡ್ತಿದ್ದಾರೆ. ಟಬು ಹುಟ್ಟುಹಬ್ಬದ ದಿನ ಚಿತ್ರತಂಡ ಅವರ ಪಾತ್ರದ ಗ್ಲಿಂಪ್ಸ್ ರಿಲೀಸ್ ಮಾಡಿದೆ. ಇದರಲ್ಲಿ ಟಬು 'ಮಹಂತಿ ಝಾನ್ಸಿ ರಾಣಿ' ಅನ್ನೋ ರಾಜಕಾರಣಿಯಾಗಿ ಅಬ್ಬರಿಸಲಿದ್ದಾರೆ.

23
ಅದೃಷ್ಟ ನಂಬದ ರಾಜಕಾರಣಿಯಾಗಿ ಟಬು

ರಿಲೀಸ್ ಆಗಿರೋ ಗ್ಲಿಂಪ್ಸ್‌ನಲ್ಲಿ ಟಬು ತಮ್ಮ ಪಾತ್ರದ ಬಗ್ಗೆ ಒಂದು ಡೈಲಾಗ್ ಹೊಡೀತಾರೆ. "ಈ ಪ್ರಪಂಚದಲ್ಲಿ ಎರಡು ತರಹದ ಜನ ಇರ್ತಾರೆ. ಒಬ್ಬರು ಕಷ್ಟ ನಂಬೋರು, ಇನ್ನೊಬ್ಬರು ಅದೃಷ್ಟ ನಂಬೋರು. ಆದ್ರೆ ನಾನು ಅದೃಷ್ಟ ನಂಬಲ್ಲ" ಅಂತ ಖಡಕ್ ಆಗಿ ಹೇಳ್ತಾರೆ. ಈ ಮೂಲಕ ಸಿನಿಮಾದಲ್ಲಿ ಪೊಲಿಟಿಕಲ್ ಟಚ್ ಇದೆ ಅನ್ನೋದು ಪಕ್ಕಾ ಆಗಿದೆ. ಇದಕ್ಕೂ ಮುನ್ನ ನಾಗಾರ್ಜುನ ಬರ್ತ್‌ಡೇ ದಿನ ಅವರ ಕ್ಯಾರೆಕ್ಟರ್ ಗ್ಲಿಂಪ್ಸ್ ಬಂದಿತ್ತು. ಅದರಲ್ಲಿ ನಾಗಾರ್ಜುನ ಹಣಕ್ಕಾಗಿ ಜೂಜು, ಮೋಸ ಮಾಡೋ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ರು. ಈಗ ಕಷ್ಟ ನಂಬೋ ರಾಜಕಾರಣಿ ಟಬು ಹಾಗೂ ಹಣಕ್ಕಾಗಿ ಮೋಸ ಮಾಡೋ ನಾಗಾರ್ಜುನ ಮುಖಾಮುಖಿ ಹೇಗಿರುತ್ತೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್‌ಗೆ ಕೊಟ್ಟಿದ್ದ ರೇಂಜ್‌ಗೆ ಟಬುಗೆ ಎಲಿವೇಶನ್ ಸಿಕ್ಕಿದೆ.

33
ಡಿಸೆಂಬರ್ 24ಕ್ಕೆ ಕಿಂಗ್ 100 ರಿಲೀಸ್

'ಕಿಂಗ್ 100' ಸಿನಿಮಾಗೆ ರಾ ಕಾರ್ತಿಕ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಅಕ್ಕಿನೇನಿ ಫ್ಯಾಮಿಲಿ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದು, ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕೊಡ್ತಿದ್ದಾರೆ. ನಾಗಾರ್ಜುನ ಕೆರಿಯರ್‌ನ 100ನೇ ಸಿನಿಮಾ ಆಗಿರೋದ್ರಿಂದ ಡಿಸೆಂಬರ್ 24ರಂದು ಅದ್ದೂರಿಯಾಗಿ ರಿಲೀಸ್ ಮಾಡಲು ಪ್ಲಾನ್ ನಡೆದಿದೆ. ಟಬು ಪಾತ್ರದ ಬಗ್ಗೆ ಕ್ಲಾರಿಟಿ ಸಿಕ್ರೂ, ನಾಗಾರ್ಜುನ ಜೊತೆ ಅವರ ಕನೆಕ್ಷನ್ ಏನು ಅನ್ನೋದು ಇನ್ನು ಸಸ್ಪೆನ್ಸ್. ಒಟ್ನಲ್ಲಿ ರೊಮ್ಯಾಂಟಿಕ್ ಜೋಡಿ ಈಗ ವೈರಿಗಳಾಗಿ ಅಬ್ಬರಿಸೋದು ಗ್ಯಾರಂಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories