ವೈ ದಿಸ್ ಕೊಲವೆರಿ
ಈ ಹಾಡು (Why this kolaveri di) ಬಿಡುಗಡೆಯಾಗಿ 10 ವರ್ಷಕ್ಕೂ ಹೆಚ್ಚಾಗಿದ್ರೂ ಸಹ ಇಂದಿಗೂ ಫ್ರೆಶ್ ಫೀಲ್ ಕೊಡುವ ಹಾಡು. ಇದು. ಧನುಶ್ ಮತ್ತು ಶ್ರುತಿ ಹಾಸನ್ ನಟಿಸಿರುವ 3 ಚಿತ್ರದ ಈ ತಮಿಳು- ಇಂಗ್ಲಿಷ್ ಮಿಶ್ರಿತ ಹಾಡು ದೇಶಾದ್ಯಂತ ಭಾರಿ ಸದ್ದು ಮಾಡಿತ್ತು.
ಬುಟ್ಟ ಬೊಮ್ಮ
ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಜೊತೆಯಾಗಿ ನಟಿಸಿರುವ ಆಲಾ ವೈಕುಂಟಪುರಂಲೋ ಚಿತ್ರದ ಬುಟ್ಟ ಬೊಮ್ಮ (Butta bomma) ಹಾಡು ಟ್ರೆಂಡ್ ಸೃಷ್ಟಿ ಮಾಡಿತ್ತು. ಬುಟ್ಟ ಬೊಮ್ಮ ಬುಟ್ಟ ಬೊಮ್ಮ ಎಂದು ಗೊಂಬೆಯಂತೆ ಸೊಂಟ ಬಳುಕಿಸುವ ಈ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ ಅನ್ಸುತ್ತೆ.
ರೌಡಿ ಬೇಬಿ
ಸಾಯಿ ಪಲ್ಲವಿ ಮತ್ತು ಧನುಷ್ ಹೇಳಿ ಕೇಳಿ ಡ್ಯಾನ್ಸ್ ಮಾಡೋದಕ್ಕೆ ಸಖತ್ ಫೇಮಸ್. ಇಬ್ಬರು ಜನಪ್ರಿಯ ಡ್ಯಾನ್ಸರ್ ಕೂಡ ಹೌದು. ಈ ಜೋಡಿ ಜೊತೆಯಾಗಿ ಒಂದು ಟಪ್ಪಾಂಗುಚ್ಚಿಗೆ ಹೆಜ್ಜೆ ಹಾಕಿದ್ರೆ ಹೇಗಿರಬಹುದು ಅಲ್ವ? ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಮತ್ತು ಧನುಷ್ ನಟಿಸಿರುವ ಮಾರಿ 2 ಚಿತ್ರದ ರೌಡಿ ಬೇಬಿ (Rowdy baby) ಹಾಡು ಮತ್ತು ಡ್ಯಾನ್ಸ್ ಗೆ ಜನ ಹುಚ್ಚೆದ್ದು ಹೆಜ್ಜೆ ಹಾಕಿದ್ದರು.
ಕುಟ್ಟಿ ಸ್ಟೋರಿ
ಮಾಸ್ಟರ್ ಸಿನಿಮಾದ ಕುಟ್ಟಿ ಸ್ಟೋರಿ ಹಾಡು ಸಹ ದೇಶಾದ್ಯಂತ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಹಾಡಿನಲ್ಲಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದು, ವಿಜಯ್ ಫ್ಯಾನ್ಸ್ ಅಂತೂ ಹಾಡಿನ ಮೋಡಿಯಲ್ಲಿ ಕಳೆದು ಹೋಗಿದ್ದರು. ಇದು ಅನಿರುದ್ಧ್ ರವಿಚಂದ್ರನ್ ಹಾಡು ಅಂದಮೇಲೆ ಕೇಳಬೇಕೇ?
ವರಾಹ ರೂಪಂ
ರಿಷಭ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಕಾಂತಾರ (Kantara) ಚಿತ್ರದ ವರಾಹ ರೂಪಂ ಹಾಡು ಭಾಷೆಯ ಭೇದವಿಲ್ಲದೇ ದೇಶಾದ್ಯಂತ ಸಂಚಲನ ಮೂಡಿಸಿತ್ತು, ಭಕ್ತಿ ಗೀತೆಯಾದರೂ ಸಹ ಸಾಯಿ ವಿಘ್ನೇಶ್ ಧ್ವನಿಯಲ್ಲಿ ಮೂಡಿ ಬಂದ ಈ ಹಾಡು ಜನರಿಗೆ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡಿನ ಲಿಸ್ಟ್ ಗೆ ಸೇರಿದೆ ಎಂದರೆ ತಪ್ಪಾಗಲ್ಲ.
ನಾಟು ನಾಟು
ಆಸ್ಕರ್ ಪ್ರಶಸ್ತಿ (Oscar award) ಪಡೆದ ಈ ಹಾಡಿನ ಬಗ್ಗೆ ಹೆಚ್ಚೇನು ಹೇಳಬಹುದು ಅಲ್ವಾ? ಹಾಡು ಕೇಳಿದರೆ ಸಾಕು ಎದ್ದು ನಿಂತು ಡ್ಯಾನ್ಸ್ ಮಾಡಬೇಕು ಎನಿಸಿಬಿಡುವಂತೆ ಮಾಡಿದ RRR ಚಿತ್ರದ ಈ ಹಾಡಿನ ಕ್ರೆಡಿಡ್ ಕೀರವಾಣಿಗೆ ಸೇರಬೇಕು. ಹಾಡಿನಲ್ಲಿ ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಅದ್ಭುತವಾಗಿ ಹೆಜ್ಜೆ ಹಾಕಿದ್ದರು.
ಕೇಸರಿಯಾ
ಬ್ರಹ್ಮಾಸ್ತ್ರ ಚಿತ್ರದ ಕೇಸರಿಯಾ (Kesariya) ಹಾಡು ಬಿಡುಗಡೆಯಾದಾಗ ಎಲ್ಲ ಜನರ ಬಾಯಲ್ಲೂ ಹಾಡು ಕೇಳಿ ಬರುತ್ತಿತ್ತು, ಈ ಮೆಲೊಡಿ ಜನರನ್ನ ಮೋಡಿ ಮಾಡಿತ್ತು. ಆಲಿಯಾ ಭಟ್, ರಣ್ಬೀರ್ ಕಪೂರ್ ಜೊತೆಯಾಗಿ ನಟಿಸಿರುವ ಈ ಚಿತ್ರದ ಹಾಡು ಬಿಡುಗಡೆಯಾದ ಎಲ್ಲಾ ಭಾಷೆಗಳನ್ನು ಸಹ ಜನಪ್ರಿಯತೆ ಕಂಡಿತ್ತು.
ಊ ಅಂಟಾವಾ ಊ ಊ ಅಂಟಾವಾ
ತೆಲುಗಿನ ಹ್ಯಾಂಡ್ಸಮ್ ಹೀರೋ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರದ ಊ ಅಂಟಾವಾ ಊ ಊ ಅಂಟಾವಾ ಎಂಬ ಐಟಂ ಹಾಡು ಜನರಲ್ಲಿ ಎಷ್ಟು ಕ್ರೇಜ್ ಹುಟ್ಟಿಸಿತು ಎಂದರೆ, ಈ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿದ ಸಮಂತಾ (Samantha Ruth Prabhu) ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದರು. ಅವರ ಡ್ಯಾನ್ಸ್ ಮೂವ್ ಗೆ ಜನ ಸೋತು ಹೋಗಿದ್ದರು.
ಜಿಮಿಕಿ ಕಮ್ಮಲ್
ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ (Mohan Lal) ನಟಿಸಿರುವ ವೆಲಿಪಡಿಂಡೆ ಪುಸ್ತಕಂ ಚಿತ್ರದ ಜಿಮಿಕಿ ಕಮ್ಮಲ್ ಹಾಡು ಸಹ ದೇಶಾದ್ಯಂತ ಭಾಷೆಯ ತಡೆ ಇಲ್ಲದೆ ಜನಪ್ರಿಯತೆ ಗಳಿಸಿತ್ತು. ಈ ಹಾಡಿಗೆ ಸ್ಕೂಲ್, ಕಾಲೇಜು ಎನ್ನದೇ ಎಲ್ಲಾ ಕಡೆಯೂ ಜನರು ಹೆಜ್ಜೆ ಹಾಕಿದ್ದಾರೆ ಅಂದ್ರೆ ತಪ್ಪಾಗಲ್ಲ.