ರಶ್ಮಿಕಾ ಮಂದಣ್ಣ ಸೀರೆ ಕಾಂಬಿನೇಷನ್‌ಗೆ ಮುಗಿಬಿದ್ದ ಮಹಿಳೆಯರು: 10 ಕೋಟಿ ಮೌಲ್ಯದ ಸೀರೆ ಸೇಲ್‌

Published : Jun 12, 2026, 08:13 PM IST

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಉಟ್ಟಿದ್ದ ಕೆಂಪು ಮತ್ತು ಕಪ್ಪು ಬಣ್ಣದ ಸೀರೆಯೊಂದು ಸೃಷ್ಟಿಸಿದ ಅಲೆಯ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಈ ಸೀರೆಗೆ ಬಂದ ಬೇಡಿಕೆಯಿಂದಾಗಿ ಸೀರೆ ಮಳಿಗೆಯೊಂದು ಹತ್ತು ಕೋಟಿ ರೂಪಾಯಿ ಲಾಭ ಗಳಿಸಿದ್ದು, ಇದು ಸೆಲೆಬ್ರಿಟಿಗಳ ಪ್ರಭಾವ ಎಷ್ಟಿದೆ ಎಂಬುದನ್ನು ತೋರಿಸುತ್ತದೆ.

PREV
16
ಸಿನಿಮಾದವರೇ ಇವರಿಗೆ ದೇವರು

ಸಿನಿಮಾ ತಾರೆಯರು ಎಂದರೆ ಅವರನ್ನು ದೇವರು ಎಂದೇ ಬಣ್ಣಿಸುವ ದೊಡ್ಡ ವರ್ಗವೇ ಇದೆ. ಅವರ ಒಂದು ಲುಕ್‌ಗಾಗಿ ಪ್ರಾಣ ಕೊಡುವವರೂ ಇದ್ದಾರೆ. ಕೆಲವೊಮ್ಮೆ ಇದು ಅಭಿಮಾನವೋ, ಅತಿರೇಕವೋ ಎನ್ನುವಷ್ಟರ ಮಟ್ಟಿಗೆ ಹೋಗುವುದೂ ಇದೆ. ತಮ್ಮ ನೆಚ್ಚಿನ ನಟರು ಲಾಂಗು, ಮಚ್ಚು ಹಿಡಿದು, ಸ್ಮೋಕ್‌, ಡ್ರಿಂಕ್ಸ್‌ ಮಾಡೋದನ್ನು ನೋಡಿ, ತಾವೂ ಹಾಗೆ ಮಾಡುವ ಅಭಿಮಾನಿಗಳು ಎಷ್ಟು ಮಂದಿ ಇಲ್ಲ ಹೇಳಿ. ಒಟ್ಟಿನಲ್ಲಿ ತಮ್ಮ ನೆಚ್ಚಿನ ತಾರೆಯರೇ ಇವರಿಗೆ ಗಾಡ್‌ ಫಾದರ್‌, ಗಾಡ್‌ ಮದರ್ಸ್.

26
ಸೀರೆ ಅಂಗಡಿಯವರಿಗೆ ಬಂಪರ್‌

ಇದೇ ಅಭಿಮಾನದಿಂದ ಇದೀಗ ಸೀರೆ ಅಂಗಡಿಯವರಿಗೆ ಬಂಪರ್‌ ಲಾಟರಿ ಹೊಡೆದಿದೆ. ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandannas saree combination) ಕೆಂಪು ಮತ್ತು ಕಪ್ಪು ಬಾರ್ಡರ್‌ ಕಾಂಬಿನೇಷನ್‌ನ ಸೀರೆ ಉಟ್ಟಿದ್ದರು ಎನ್ನುವ ಕಾರಣಕ್ಕೆ ಅದೇ ಕಾಂಬಿನೇಷನ್‌ ಸೀರೆಗಾಗಿ ಮಹಿಳೆಯರು ಮುಗಿಬಿದ್ದಿದ್ದಾರಂತೆ!

36
ರಶ್ಮಿಕಾ ಸೀರೆ ಕಾಂಬಿನೇಷನ್‌

ಇಂಥ ಕಾಂಬಿನೇಷನ್‌ ಸೀರೆ ಮುಂಚೆ ಇರಲಿಲ್ಲ. ರಶ್ಮಿಕಾ ಅದನ್ನು ಉಟ್ಟ ಬಳಿಕ ಡಿಮಾಂಡ್‌ ಜಾಸ್ತಿಯಾದ ಕಾರಣ, ಅದನ್ನೇ ಪ್ರಿಂಟ್‌ ಮಾಡಿದ್ವಿ. ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರು ಅದನ್ನು ಖರೀದಿ ಮಾಡಿದ್ದಾರೆ. ಸುಮಾರು ಹತ್ತು ಕೋಟಿ ಪ್ರಾಫಿಟ್‌ ಆಗಿದೆ ಎಂದು ಸೀರೆ ಷೋರೂಮ್‌ನ ಮಾಲೀಕರು ಹೇಳಿದ್ದಾರೆ.

46
ಬಿಗ್‌ಬಾಸ್‌ನ ಶಿಶಿರ್‌ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ

ಬಿಗ್‌ಬಾಸ್‌ನ ಶಿಶಿರ್‌ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಅವರು ಈ ಸೀರೆ ಮಳಿಗೆಗೆ ಗೆಸ್ಟ್‌ ಆಗಿ ಕರೆಸಲಾಗಿತ್ತು. ಆ ಸಂದರ್ಭದಲ್ಲಿ, ಇವರಿಗೆ ಅಂಗಡಿ ಮಾಲೀಕರು ಈ ವಿಷಯವನ್ನು ತಿಳಿಸಿದ್ದಾರೆ.

56
ಐಶ್ವರ್ಯಗೆ ಆಫರ್‌

ನೀವೂ ಒಂದು ವಿಶೇಷ ಕಾಂಬಿನೇಷನ್‌ ಸೀರೆ ಹೇಳಿ. ಅದನ್ನು ನಿಮಗೆ ಕೊಡ್ತೇವೆ. ನೀವು ಅದನ್ನು ಉಟ್ಟ ಬಳಿಕ ಮಹಿಳೆಯರಿಂದ ಡಿಮಾಂಡ್‌ ಹೆಚ್ಚಾಗತ್ತೆ. ಆ ಬಳಿಕ ನಿಮ್ಮಿಂದ ನಾವು ಲಾಭ ಮಾಡ್ತೇವೆ ಎಂದು ಮಾಲೀಕರು ಐಶ್ವರ್ಯ ಅವರಿಗೆ ಕೇಳಿಕೊಂಡರು. ಇದನ್ನು ಡಿಜಿಟಲ್​ ಸಿನಿ ಅಡ್ಡಾ ಇನ್ಸ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ.  

66
ಸಿನಿಮಾಗಳಲ್ಲಿ ರಾರಾಜಿಸೋ ರಕ್ತಪಾತ

ಒಟ್ಟಿನಲ್ಲಿ, ಸಿನಿಮಾ, ಕಿರುತೆರೆ ಸೆಲೆಬ್ರಿಟಿಗಳನ್ನು ಜನರು ಎಷ್ಟು ಅನುಸರಿಸುತ್ತಾರೆ ಎನ್ನುವುದು ಇದರಿಂದ ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳಲ್ಲಿ ಎಷ್ಟೋ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಹೇಳೋದು ಕೂಡ ನಮ್ಮ ನೆಚ್ಚಿನ ನಾಯಕನ ಸಿನಿಮಾ ನೋಡಿ ಪ್ರೇರೇಪಿತ ಆದೆ ಎನ್ನೋದು. ಅದಕ್ಕೆ ತಕ್ಕಂತೆ ಜನರು ಇಷ್ಟಪಡ್ತಾರೆ ಎನ್ನುವ ಕಾರಣಕ್ಕೆ ಲಾಂಗು, ಮಚ್ಚು, ರಕ್ತಪಾತ ಸಿನಿಮಾಗಳಲ್ಲಿ ಧಾರಾಳವಾಗಿ ಕಾಣಸಿಗುವುದು ನಡೆದೇ ಇದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories