ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ನಡುವೆ, ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ, ರಕ್ಷಿತ್ ಶೆಟ್ಟಿ ಅವರೊಂದಿಗಿನ ಬ್ರೇಕಪ್ ಬಗ್ಗೆ ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಲು ತಡವರಿಸುತ್ತಾರೆ, ಆಗ ವಿಜಯ್ ದೇವರಕೊಂಡ ಮಧ್ಯಪ್ರವೇಶಿಸಿ ಗರಂ ಆದರು.
ರಶ್ಮಿಕಾ ಮಂದಣ್ಣ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ಬಹುಕಾಲದ ಗೆಳೆಯ ವಿಜಯ ದೇವರಕೊಂಡ ಮದುವೆ (Rashmika Mandanna and Vijaya Devarakonda marriage) ಗೆ ರಾಜಸ್ಥಾನದ ಜಯಪುರ ಸನ್ನದ್ಧಗೊಂಡಿದೆ. ಇದಾಗಲೇ ಸೆಲೆಬ್ರಿಟಿಗಳು ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಮದುವೆ ಪೂರ್ವ ಶಾಸ್ತ್ರಗಳೂ ನಡೆಯುತ್ತಿರುವುದಾಗಿ ವರದಿಯಾಗಿದೆ.
26
ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್
ಆದರೆ, ಇದರ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಎಂದಾಕ್ಷಣ, ಕನ್ನಡಿಗರಿಗೆ ನೆನಪಾಗುವುದೇ ರಕ್ಷಿತ್ ಶೆಟ್ಟಿ. ಆದರೆ, ರಶ್ಮಿಕಾ ಅವರು ಸ್ಯಾಂಡಲ್ವುಡ್ನಲ್ಲಿ ಎಂಟ್ರಿ ಪಡೆಯುವುದಕ್ಕಾಗಿ ರಕ್ಷಿತ್ ಅವರನ್ನು ದಾಳವಾಗಿ ಬಳಸಿಕೊಂಡರು ಎನ್ನುವ ಮಾತು ಬಹಳ ಕೇಳಿಬರತೊಡಗಿತ್ತು.
36
ರಕ್ಷಿತ್ ಮತ್ತು ರಶ್ಮಿಕಾ
ರಕ್ಷಿತ್ ಮತ್ತು ರಶ್ಮಿಕಾ ಜುಲೈ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೂಪರ್‌ಹಿಟ್ ಚಿತ್ರ ಕಿರಿಕ್ ಪಾರ್ಟಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ರಶ್ಮಿಕಾ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯವಾಗಿತ್ತು. ಆದರೆ, ಕೊನೆಗೆ ಸಂಬಂಧ ಮುರಿದು ಹೋಯ್ತು.
ಇದರಿಂದಾಗಿ ರಕ್ಷಿತ್ ಶೆಟ್ಟಿ (Raskhit Shetty) ತುಂಬಾ ನೋವು ಅನುಭವಿಸಿದ್ದರೂ ಎನ್ನುವ ಮಾತು ಆಗ ಕೇಳಿಬಂದಿತ್ತು. ಅದಾದ ಬಳಿಕ ರಶ್ಮಿಕಾ, ರಕ್ಷಿತ್ ಅವರನ್ನು ಮರೆತು ವಿಜಯ ದೇವರಕೊಂಡ ಜೊತೆ ಸಂಬಂಧ ಬೆಳೆಸಿದ್ರು.
56
ಕನ್ನಡದಲ್ಲಿ ಪ್ರಶ್ನೆ
ಈ ವೇಳೆ ಅವರು ಕರ್ನಾಟಕಕ್ಕೆ ಬಂದಾಗ, ಕನ್ನಡದಲ್ಲಿ ಅವರಿಗೆ ರಕ್ಷಿತ್ ಶೆಟ್ಟಿ ಬ್ರೇಕಪ್ ಬಗ್ಗೆ ಕೇಳಲಾಗಿತ್ತು. ನೀವು ಮತ್ತು ರಕ್ಷಿತ್ ಶೆಟ್ಟಿ ಒಟ್ಟಿಗೇ ಕಾಣಿಸಿಕೊಳ್ತಿಲ್ಲ. ಏನು ಸಮಾಚಾರ? ನಿಮ್ಮಿಬ್ಬರ ನಡುವೆ ಏನಾಗಿದೆ ಎಂದು ಪ್ರಶ್ನೆ ಕೇಳಲಾಗಿತ್ತು. ಇದೇನು ಪ್ರಶ್ನೆ ಎಂದು ರಶ್ಮಿಕಾಗೆ ಗೊತ್ತಾದರೂ ಕನ್ನಡ ಸರಿಯಾಗಿ ಗೊತ್ತಿಲ್ಲದಂತೆ ನಟಿಸಿದರು. ರಕ್ಷಿತ್ ಶೆಟ್ಟಿಯ ಬಗ್ಗೆ ಕೇಳಲಾಗುತ್ತಿದೆ ಎಂದು ವಿಜಯ ದೇವರಕೊಂಡ ಕೂಡ ಕಸಿವಿಸಿಗೊಂಡಿದ್ದರು.
66
ವಿಜಯ್ ಗರಂ
ರಶ್ಮಿಕಾ ಬಾಯಿ ತೆರೆಯುವ ಮೊದಲೇ ವಿಜಯ್ ಅವರು, ನೀವು ಏನು ಕೇಳ್ತಿದ್ದೀರಿ ಎಂದು ಗೊತ್ತಾಗ್ತಿಲ್ಲ. ಆದರೆ ಏನೇನೋ ಪ್ರಶ್ನೆಗಳನ್ನು ಕೇಳುವುದು ನಿಮ್ಮ ಬಿಜ್ನೆಸ್ ಅಲ್ಲ ಎಂದು ಗರಂ ಆಗಿಯೇ ಹೇಳಿದ್ರು. ಬಳಿಕ ರಶ್ಮಿಕಾ, ನೀವು ಕೇಳಿದ ಪ್ರಶ್ನೆ ತುಂಬಾ ದೊಡ್ಡದಾಯಿತು. ಏನು ಎಂದು ಅರ್ಥವಾಗ್ತಿಲ್ಲ ಎಂದು ಏನೂ ಅರಿಯದವರ ಹಾಗೆ ಸ್ಮೈಲ್ ಕೊಟ್ಟು ಬೇರೆ ವಿಷಯ ತೆಗೆದರು. ಇದರ ವಿಡಿಯೋ ಇದೀಗ ಪುನಃ ವೈರಲ್ ಆಗ್ತಿದೆ. ಹಲವರು ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.