Su From So Box office collection Details: ಸಿನಿಮಾ, ಒಂದೂರಿನ ಸಮಸ್ಯೆಗೆ ಪರಿಹಾರ ಹುಡುಕುವ ಕಥೆ. ಜನಪ್ರಿಯತೆ ಗಳಿಸಿ, ಭರ್ಜರಿ ಗಳಿಕೆ ಕಾಣುತ್ತಿದೆ. ಟಿಕೆಟ್ ಮಾರಾಟದಲ್ಲಿ ಹೊಸ ದಾಖಲೆ ಬರೆಯುತ್ತಿದೆಯೇ?
ಹೊಸಬರ ಸಿನಿಮಾ Su From So ವೀಕ್ಷಕರನ್ನು ನಗಿಸುತ್ತಲೇ ಜೇಬು ತುಂಬಿಸಿಕೊಳ್ಳುತ್ತಿದೆ. ಜೆ.ಪಿ.ತುಮಿನಾಡ್ ನಿರ್ದೇಶನದ Su From So ಸಿನಿಮಾ ಒಂದೂರಿನಲ್ಲಿ ನಡೆಯುವ ಕಥೆಯಾಗಿದೆ. ಮನೆಯೊಂದರಲ್ಲಿ ಉಂಟಾದ ಸಮಸ್ಯೆಯನ್ನು ಇಡೀ ಊರು ಒಟ್ಟಾಗಿ ಹೇಗೆ ಬಗೆಹರಿಸುತ್ತೇ ಅನ್ನೋದು ಚಿತ್ರದ ಕಥೆಯಾಗಿದೆ.
29
ಜನರಿಂದಲೇ ಸಿನಿಮಾ ಪ್ರಚಾರ
ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿರುವ Su From So ಸಿನಿಮಾವನ್ನು ಜನರೇ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಯಾವುದೇ ಅಬ್ಬರದ ಪ್ರಚಾರಗಳು ಇಲ್ಲದಿದ್ದರೂ Su From So ಸಿನಿಮಾದಿಂದಾಗಿ ಚಿತ್ರಮಂದಿರಗಳು ತುಂಬಿ ತುಳುಕುತ್ತಿವೆ. ಜುಲೈ 25ರಂದು ಬಿಡುಗಡೆಯಾದ ಈ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂದು ನೋಡೋಣ ಬನ್ನಿ.
39
ಎಷ್ಟು ಟಿಕೆಟ್ ಸೇಲ್?
ಬುಕ್‌ಮೈ ಶೋ ಆಪ್‌ನಲ್ಲಿ ಈವರೆಗೆ 627K ಟಿಕೆಟ್‌ಗಳು ಮಾರಾಟವಾಗಿದೆ. ಬುಕ್ ಮೈ ಶೋನಲ್ಲಿ ಜನರು ಟಿಕೆಟ್ ಪಡೆದುಕೊಳ್ಳಲು ಜನರು ಕಾಯುತ್ತಿದ್ದಾರೆ. ಮತ್ತೆ ಈ ವಾರಂತ್ಯದಲ್ಲಿ ಟಿಕೆಟ್ ಸೇಲ್ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಈವರೆಗೆ ಟಿಕೆಟ್ ಸೇಲ್ ಮಾಹಿತಿ ಇಲ್ಲಿದೆ ನೋಡಿ.
Su From So ಸಿನಿಮಾದಲ್ಲಿ ಅಶೋಕ್‌ನ ಪಾತ್ರದಲ್ಲಿ ನಟಿಸಿರುವ ನಟ ಜೆ.ಪಿ.ತುಮಿನಾಡ್ ಅವರೇ ಸಿನಿಮಾದ ನಿರ್ದೇಶಕರಾಗಿದ್ದಾರೆ. ಹೊಸಬರ ಸಿನಿಮಾ ಎಂದು ನಿರ್ಮಾಪಕರು ನಮಗೆ ಯಾವುದೇ ಅಡ್ಡಿಯುಂಟು ಮಾಡಿಲ್ಲ. ಹಾಗಾಗಿಯೇ ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ. ನಿರ್ಮಾಪಕರಾಗಿರುವ ರಾಜ್ ಬಿ. ಶೆಟ್ಟಿ ಅವರಿಗೆ ಕಡಿಮೆ ಬಜೆಟ್‌ನಲ್ಲಿ ಚಿತ್ರವನ್ನು ಹೇಗೆ ಅದ್ಧೂರಿಯಾಗಿ ತೋರಿಸಬೇಕೆಂಬ ಕಲೆ ಗೊತ್ತಿದೆ ಎಂದು ಸಂದರ್ಶನವೊಂದರಲ್ಲಿ ತುಮಿನಾಡ್ ಹೇಳಿದ್ದಾರೆ.
69
16.73 ಕೋಟಿ ರೂ. ಬಜೆಟ್
ಕೆಲ ವರದಿಗಳ ಪ್ರಕಾರ, Su From So ಸಿನಿಮಾ 16.73 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇಷ್ಟು ಬಜೆಟ್ ಆಗಿದ್ದರೆ ಸಿನಿಮಾ ಹಾಕಿದ ಬಂಡವಾಳ ಮೊದಲ ವಾರದಲ್ಲಿಯೇ ಹಿಂದಿರುಗಲಿದೆ ಎಂದು ಸಿನಿಮಾ ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಸದ್ಯದ ವರದಿಗಳ ಪ್ರಕಾರ Su From So ಸಿನಿಮಾ ಗಳಿಸಿದ ಹಣವೆಷ್ಟು ಎಂದು ನೋಡೋಣ ಬನ್ನಿ.
79
Su From So ಸಿನಿಮಾದ ಈವರೆಗಿನ ಕಲೆಕ್ಷನ್
BigScreen ವರದಿ ಪ್ರಕಾರ ಸು ಫ್ರಂ ಸೋ ಸಿನಿಮಾ 6 ದಿನಗಳಲ್ಲಿ 20 ಕೋಟಿ ರೂ.ಗೂ ಅಧಿಕ ಹಣವನ್ನು ತುಂಬಿಸಿಕೊಂಡಿದೆ.
1ನೇ ದಿನ: 1.5 ಕೋಟಿ ರೂಪಾಯಿ
2ನೇ ದಿನ: 3.6 ಕೋಟಿ ರೂಪಾಯಿ
3ನೇ ದಿನ: 4 ಕೋಟಿ ರೂಪಾಯಿ
4ನೇ ದಿನ: 4.2 ಕೋಟಿ ರೂಪಾಯಿ
5ನೇ ದಿನ: 4.88 ಕೋಟಿ ರೂಪಾಯಿ
6ನೇ ದಿನ: 5.07 ಕೋಟಿ ರೂಪಾಯಿ
89
Su From So ಸಿನಿಮಾದ ಕಲಾವಿದರು
ರವಿ ಅಣ್ಣನಾಗಿ ನಟ ಶನೀಲ್ ಗೌತಮ್ ನಟಿಸಿದ್ದಾರೆ. ಅಶೋಕ್‌ನ ಪಾತ್ರದಲ್ಲಿ ಜೆ.ಪಿ.ತುಮಿನಾಡ್, ಸ್ವಾಮೀಜಿಯಾಗಿ ರಾಜ್ ಬಿ. ಶೆಟ್ಟಿ, ಬಾನು ಆಗಿ ಸಂಧ್ಯಾ ಅರಕೆರೆ, ಚಂದ್ರನಾಗಿ ಪ್ರಕಾಶ್ ತುಮಿನಾಡ್, ಎಲ್ಲರ ಮೆಚ್ಚಿನ ನಳಿನಿ ಗಂಡ ಅಂದ್ರೆ ಬಾವನಾಗಿ ಪುಷ್ವರಾಜ್ ಬೋಳಾರ್, ಸತೀಶ್‌ನಾಗಿ ದೀಪಕ್ ರೈ ಪನಜೆ ನಟಿಸಿದ್ದಾರೆ.