ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ವಿಡಿಯೋ ವೈರಲ್ ಆಗಿ, ಅದು ಸಾಕಷ್ಟು ಸದ್ದು ಮಾಡಿತ್ತು. ಆ ಬಳಿಕ, ಇದರಿಂದಾಗಿ ಜೈಲಿನ ಕೆಲವು ಸಿಬ್ಬಂದಿ ಕೆಲಸ ಕೂಡ ಕಳೆದುಕೊಂಡಿದ್ದರು. ಇದೀಗ ಅದೇ ಆರೋಪ ಇದೇ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ (Pavitra Gowda) ಅವರ ಮೇಲೆ ಮಾಡಲಾಗಿದೆ.
26
ಜೈಲಿನಲ್ಲಿ ರಾಜಾತಿಥ್ಯ
ಸಂಧ್ಯಾ ಪವಿತ್ರಾ ನಾಗರಾಜ್ ಎನ್ನುವವರು ಪವಿತ್ರಾ ಗೌಡ ವಿರುದ್ಧ ಇಂಥದ್ದೊಂದು ಆರೋಪವನ್ನು ಮಾಧ್ಯಮದ ಎದುರು ಮಾಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸಂಧ್ಯಾ ಅವರು ಜೈಲಿಗೆ ಹೋಗಿದ್ದರು. ಅಲ್ಲಿ ಪವಿತ್ರಾ ಗೌಡ ಅವರಿಗೆ ರಾಜಾತಿಥ್ಯ ನೀಡುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಮನೆಯೂಟ ಬರುತ್ತೆ, ಐಷಾರಾಮಿಯಾಗಿ ಜೈಲಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
36
ಕಾಲು ಒತ್ತುತ್ತಾರೆ
ಅಷ್ಟೇ ಅಲ್ಲದೇ, ಸಂಧ್ಯಾ ಅವರು ಇನ್ನೂ ಕೆಲವು ಆಪಾದನೆ ಮಾಡಿದ್ದಾರೆ. ಜೈಲಿನ ಭದ್ರತಾ ಸಿಬ್ಬಂದಿ ಪವಿತ್ರಾಗೌಡ ಅವರ ಕಾಲು ಒತ್ತುತ್ತಾರೆ. ಅವರೇ ಊಟವನ್ನೂ ತೆಗೆದುಕೊಂಡು ಕೊಡುತ್ತಾರೆ. ಸಿಬ್ಬಂದಿಗಳೇ ಮನೆಯಿಂದ ಬಾಕ್ಸ್ ತಗೊಂಡು ಬರ್ತಾರೆ ಎಂಬೆಲ್ಲಾ ಆರೋಪ ಮಾಡಿದ್ದಾರೆ.
ಜೈಲಿನಲ್ಲಿ ಮೇಕಪ್ ಮಾಡಿಕೊಳ್ಳೋಕೆ ವ್ಯವಸ್ಥೆ ಇದೆ, ಆದ್ದರಿಂದ ಪವಿತ್ರಾ ಗೌಡ ಅವರು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ,, ದರ್ಶನ್ಗೆ ಯಾವುದೇ ಸೌಲಭ್ಯಗಳು ಸಿಕ್ತಿಲ್ಲ, ಪವಿತ್ರಾಗೌಡಗೆ ಅಲ್ಲಿರೋ ಭದ್ರತಾ ಸಿಬ್ಬಂದಿಯೇ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ಹೇಳಿದ್ದು, ಇದೀಗ ಸಂಧ್ಯಾ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ.
56
ಎಫ್ಐಆರ್ಗೆ ಅನುಮತಿ
ಅಷ್ಟಕ್ಕೂ ಇಂಥದ್ದೊಂದು ಗಂಭೀರ ಆರೋಪ ಮಾಡಿರುವ ಸಂಧ್ಯಾ ವಿರುದ್ಧ ಈಗ ಭದ್ರತಾ ಸಿಬ್ಬಂದಿಯಾಗಿರುವ ರಶ್ಮಿ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಸಂಧ್ಯಾ ವಿರುದ್ಧ ಎನ್ಸಿಆರ್ (Non-Cognizable Report) ದಾಖಲಾಗಿದೆ. ಸಂಧ್ಯಾ ಅವರ ವಿರುದ್ಧ ಎಫ್ಐಆರ್ ದಾಖಲಾತಿಗೆ ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದಾರೆ. ಸದ್ಯ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯ್ತಿದ್ದಾರೆ.
66
ಪವಿತ್ರಾ ಗೌಡ ಆತ್ಮಕಥನ
ಅದೇ ಇನ್ನೊಂದೆಡೆ ಪವಿತ್ರಾ ಗೌಡ ಅವರು, ಜೈಲಿನಲ್ಲಿ ಆತ್ಮಕಥೆ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಬಂದಿದೆ. ಇದರಲ್ಲಿ ಏನು ಇರಲಿವೆ, ರೇಣುಕಾಸ್ವಾಮಿ ಕೊಲೆಯ ಬಗ್ಗೆ ಹೇಳ್ತಾರಾ, ತಮ್ಮ ಮತ್ತು ದರ್ಶನ್ ಸ್ನೇಹದ ಬಗ್ಗೆ ವಿವರಿಸ್ತಾರಾ ಅಥವಾ ಇನ್ನೇನು ಇರಲಿದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.