ಪೋಟೋ ಶೂಟ್ ಮಾಡಿಸಿಕೊಂಡಿದ್ದ ಮಾಡೆಲ್ ಬೃಂದಾ ಅರಸ್ ಜನರ ಆಕ್ರೋಶದ ನಂತರ ಕ್ಷಮೆ ಯಾಚಿಸಿದ್ದಾರೆ.
ಸುಳ್ಯದ ತೋಡಿಕಾನ ದೇವರಗುಡಿ ಜಲಪಾತ ಸ್ಥಳೀಯರ ಧಾರ್ಮಿಕ ನಂಬಿಕೆಯ ಪ್ರತೀಕವಾಗಿದ್ದು ಈ ಜಲಪಾತದ ಸಮೀಪವೇ ಪ್ರಾಚೀನ ದೇಗುಲ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದೆ.
ಬೆಂಗಳೂರಿನಿಂದ ಬಂದಿದ್ದ ತಂಡವೊಂದು ಜಲಪಾತದ ಬಳಿ ಫೋಟೋಶೂಟ್ ನಡೆಸಿ ಅದನ್ನು ಇನ್ಸ್ಟಾಗ್ರಾಂ ಗೆ ಅಪ್ ಮಾಡಿದೆ. ಇದೀಗ ಸಾಮಾಜಿಕ ತಾಣದಲ್ಲಿಯೂ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ನಮಗೆ ಇದು ಪವಿತ್ರ ಸ್ಥಳವೆಂದು ಗೊತ್ತಿರಲಿಲ್ಲ. ಗೊತ್ತಿಲ್ಲದೆ ತಪ್ಪಾಗಿದೆ. ನಮಗೆ ಮಾಹಿತಿ ಇರಲಿಲ್ಲ ಎಂದು ಬೃಂದಾ ತಮ್ಮ ಸೋಶಿಯಲ್ ಮೀಡಿಯಾ ಮುಖೇನ ಹೇಳಿದ್ದಾರೆ.
ಮಾಡೆಲ್ ಬೃಂದಾ ಅರಸ್ ಹಾಗೂ ಇನ್ನೋರ್ವ ನಟಿ ಜಲಪಾತದ ಬಳಿ ಫೋಟೋಶೂಟ್ ಮಾಡಿದ್ದು ಅವರ ವಿರುದ್ಧ ಕ್ರಮ ಜರುಗಿಸುವಂತೆ ಸಾರ್ವಜನಿಕರು ದೇವಸ್ಥಾನ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಬೃಂದಾ ಅರಸ್ ಮಾಡೆಲ್ ಆಗಿ ಗುರುತಿಸಿಕೊಂಡವರು.
ವಿಭಿನ್ನ ಪೋಟೋ ಶೂಟ್ ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದಾರೆ.