ಸಾವಿತ್ರಿ ಇಲ್ಲದಿದ್ರೂ, ಪ್ರತಿಕ್ಷಣ, ಪ್ರತಿ ದಿನ ಅವರಿಗೆ ಸಂಬಂಧಿಸಿದ ಚರ್ಚೆ ಎಲ್ಲೋ ಒಂದು ಕಡೆ ನಡೀತಾನೇ ಇರುತ್ತೆ. ಅವರ ಸಿನಿಮಾಗಳ ಮೂಲಕ ಇಂದಿಗೂ ಚಿರಂಜೀವಿ. ಬಡತನದಿಂದ ಬಂದ ಸಾವಿತ್ರಿ ಸಿನಿಮಾಗೆ ಬಂದ ಕೂಡಲೇ ಸ್ಟಾರ್ ಆಗಿ, ಲೇಡಿ ಸೂಪರ್‌ಸ್ಟಾರ್ ಆಗಿ ಮೆರೆದರು. ಅದ್ಭುತ ನಟನೆಯಿಂದ ಎಲ್ಲರ ಮನಗೆದ್ದರು. ಎನ್‌ಟಿಆರ್, ಎಎನ್‌ಆರ್, ಎಸ್‌ವಿಆರ್ ಅವರನ್ನೂ ಮೀರಿಸಿದರು ಅನ್ನೋದ್ರಲ್ಲಿ ಅತಿಶಯೋಕ್ತಿ ಇಲ್ಲ. ಜೆಮಿನಿ ಗಣೇಶನ್ ಮೊದಲು ಅವರಿಗೆ ಜೀವನ ಕೊಟ್ಟು, ಆಮೇಲೆ ಜೀವನ ಸಂಗಾತಿಯಾದರು. ನಂತರ ಸಾವಿತ್ರಿ ಜೀವನವನ್ನ ಅಲ್ಲೋಲಕಲ್ಲೋಲ ಮಾಡಿದರು.