ರಾಧಿಕಾ ಕುಮಾರಸ್ವಾಮಿ ಪತಿ, ಮಗಳೊಂದಿಗನ ಫೋಟೋಗಳು...

First Published | Sep 27, 2019, 12:30 PM IST

ಸ್ಯಾಂಡಲ್‌ವುಡ್ ಸ್ವೀಟಿ, ಯಂಗ್ ಮಮ್ಮಿ ರಾಧಿಕಾ  ಕುಮಾರಸ್ವಾಮಿ ಹತ್ತಿರವೀಗ ಕೈ ತುಂಬಾ ಸಿನಿಮಾ ಆಫರ್‌ಗಳಿವೆ. ವಿಭಿನ್ನ ಹಾಗೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಸಿನಿಮಾ ಆಯ್ಕೆಯಲ್ಲಿಯೇ ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ. ಸಿನಿಮಾ ಪ್ರಚಾರಕ್ಕೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಅ್ಯಕ್ಟಿವ್ ಆಗಿರುವ ರಾಧಿಕಾ ತಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾ ಖಾತೆಯಲ್ಲಿ ಇದುವರೆಗೆ ಶೇರ್ ಮಾಡಿಕೊಂಡಿರುವ ಫೋಟೋಗಳಿವು.......

ಮಂಗಳೂರು ಮೂಲದ ರಾಧಿಕಾ ಹುಟ್ಟಿದ್ದು ನವೆಂಬರ್ 11, 1986ರಂದು ಬಿಳ್ಳವಾ ಕುಟುಂಬದಲ್ಲಿ.
ಕನ್ನಡ ಚಿತ್ರರಂಗದ ನಾಯಕಿ ಹಾಗೂ ನಿರ್ಮಾಪಕಿ.
Tap to resize

2002ರಲ್ಲಿ ‘ನೀಲಾ ಮೇಘಾ ಶ್ಯಾಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪಾದಾರ್ಪಣೆ ಮಾಡಿದ್ದರು.
9ನೇ ತರಗತಿಯಲ್ಲಿದ್ದಾಗಲೆ ಕ್ಯಾಮೆರಾ ಫೇಸ್ ಮಾಡುವ ಅವಕಾಶ ಸಿಕ್ಕಿತ್ತು.
ವಿಜಯ್ ರಾಘವೇಂದ್ರ ಜೊತೆಯಾಗಿ ನಟಿಸಿದ ‘ನಿನಗಾಗಿ’ಚಿತ್ರದಲ್ಲಿ ಮೊದಲು ನಟಿಯಾಗಿ ಕಾಣಿಸಿಕೊಂಡರು.
ಶಿವರಾಜ್‌ಕುಮಾರ್‌ಗೆ ತಂಗಿಯಾಗಿ ನಟಿಸಿದ ‘ತವರಿಗೆ ಬಾ ತಂಗಿ’ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು.
ಯೋಗರಾಜ್ ಭಟ್ ನಿರ್ದೇಶನದ ‘ಮಣಿ’ ಚಿತ್ರದಲ್ಲಿ ವೇಶ್ಯೆ ಮಗಳಾಗಿ ಮನೋಜ್ಞವಾಗಿ ಅಭಿನಯಿಸಿದ್ದರು.
ಕಮರ್ಷಿಯಲ್ ಚಿತ್ರಗಳಾದ ‘ಮನೆ ಮಗಳು’ ಹಾಗೂ ‘ತಾಯಿಯಿಲ್ಲದ ತಬ್ಬಲಿ’ ಯಶಸ್ವಿಯಾಗುವಲ್ಲಿ ವಿಫಲವಾದವು.
‘ತಾಯಿಯಿಲ್ಲದ ತಬ್ಬಲಿ’ ಚಿತ್ರ ಜನಪ್ರಿಯವಾಗದಿದ್ದರೂ, ಕರ್ನಾಟಕ ಸ್ಟೇಟ್ ಫಿಲ್ಮ್ ಅತ್ಯತ್ತಮ ನಟಿ ಪ್ರಶಸ್ತಿ ಪಡೆದರು.
ತಮಿಳು ಚಿತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.
ತಮ್ಮ ಮೊದಲ ತಮಿಳು ಚಿತ್ರವಾದ ‘ಇಯಾರ್ಕೈ’ಗೆ ಬೆಸ್ಟ್ ಡೆಬ್ಯೂ ಅವಾರ್ಡ್ ಸಹ ಬಂದಿದೆ.
ಉಪೇಂದ್ರ ಹಾಗೂ ದರ್ಶನ್ ಅಭಿನಯದ ‘ಅನಾಥರು’ ಚಿತ್ರಕ್ಕೆ ವಿತರಣೆ ಹಕ್ಕು ಪಡೆದಿದ್ದರು.
ಮಗಳು ಶಮಿಕಾ ಜನನದ ನಂತರ ತಮ್ಮದೇ ಶಮಿಕಾ ಎಂಟರ್‌ಪ್ರೈಸಸರ್ ಆರಂಭಿಸಿದರು.
ತಮ್ಮ ನಿರ್ಮಾಣದಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ಯಶ್ ಹಾಗೂ ರಮ್ಯಾ ಅಭಿನಯದ ‘ಲಕ್ಕಿ’
ಸದ್ಯಕ್ಕೆ ದಮಯತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ರಿಲೀಸ್‌ಗೆ ಸಿದ್ದವಾಗುತ್ತಿದೆ.

Latest Videos

click me!