ದಕ್ಷಿಣ ಭಾರತ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಇದ್ದಕ್ಕಿದ್ದಂತೆ ಸಿನಿಮಾಗಳಿಂದ ದೂರ ಉಳಿದರು. ಮದುವೆಯಾಗದೆಯೇ ಮೊದಲ ಮಗುವಿಗೆ ಜನ್ಮ ನೀಡಿದ್ದ ಈ ಸುಂದರಿ, ಈಗ ಮತ್ತೆ ತಾಯಿ ಆಗ್ತಾ ಇರೋದನ್ನ ತಿಳಿಸಿದ್ದಾರೆ.
ಗೋವಾ ಸುಂದರಿ ಇಲಿಯಾನ ಡಿಕ್ರೂಜ್ ತೆಲುಗು ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಪ್ರಭಾಸ್, ಮಹೇಶ್ ಬಾಬು, ಜೂ.ಎನ್.ಟಿ.ಆರ್, ವಿಜಯ್, ರವಿತೇಜ ಮುಂತಾದ ಸ್ಟಾರ್ ನಟರ ಜೊತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಇಲಿಯಾನ ಈಗ ಸಿನಿಮಾಗಳಿಂದ ದೂರವಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
24
ಇಲಿಯಾನ ಮತ್ತೆ ತಾಯಿ ಆಗ್ತಾ ಇರೋದು ಖಚಿತವಾಗಿದೆ. ಸ್ನೇಹಿತೆಯ ಜೊತೆ ಬೇಬಿ ಬಂಪ್ ಕಾಣುವ ಫೋಟೋವನ್ನು "Bump buddies" ಎಂಬ ಕ್ಯಾಪ್ಷನ್ ಜೊತೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
34
2023 ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದ ಇಲಿಯಾನ, ಮೈಕೆಲ್ ಡೋಲನ್ ಜೊತೆ ಡೇಟಿಂಗ್ ಮಾಡ್ತಾ ಇದ್ರು. ಮದುವೆ ಆಗದೆ ಮಗುವಿಗೆ ಜನ್ಮ ನೀಡಿದ ಇಲಿಯಾನ, ಮಗುವಿಗೆ ಫೀನಿಕ್ಸ್ ಡೋಲನ್ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಗು ಹುಟ್ಟಿದ ಮೇಲೆ ಮದುವೆ ಆಗಿರಬಹುದು ಎಂದು ಹೇಳಲಾಗುತ್ತಿದೆ.
ತೆಲುಗಿನ 'ದೇವದಾಸು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇಲಿಯಾನ, ಮೊದಲ ಸಿನಿಮಾದಲ್ಲೇ ಯಶಸ್ಸು ಗಳಿಸಿದರು. 'ಪೋಕಿರಿ', 'ಜಲ್ಸಾ', 'ಜುಲಾಯಿ', 'ಶಕ್ತಿ', 'ಕಿಕ್' ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು. ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಸಿನಿಮಾಗಳಿಂದ ದೂರವಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.